Posts

Showing posts from July, 2018

ಸದಾಶಿವ - ಸಂಚಿಕೆ-32

Image
ಸದಾಶಿವ ಸಂಚಿಕೆ-32 ಅಲ್ಲಿ ಸದಾಶಿವ ರಂಗನಿಗೆ ನೀರು ಚುಮುಕಿಸಿ, ಎಬ್ಬಿಸಲು ಪ್ರಯತ್ನಿಸುತ್ತಿದ್ದ ,ಹೊಡೆದಾದ ಮೇಲೆ ಸದಾಶಿವನ ಕೋಪ ಇಳಿದಿತ್ತು .ರಂಗ ನಿಧಾನವಾಗಿ ಕಣ್ತೆರೆದಾಗ, ಬದುಕಿದ್ದಾನೆ ಎಂದು ಗೊತ್ತಾಯಿತು. ಅಷ್ಟರಲ್ಲಿ ಸುಬ್ರಹ್ಮಣ್ಯ ಸ್ವಾಮಿ ಕೂಡ ಕಾರಿನಲ್ಲಿ ಬಂದಿಳಿದ. ರಂಗನನ್ನು ಕಂಡು ಸುಬ್ರಹ್ಮಣ್ಯ ಸ್ವಾಮಿಗೆ ಗಾಬರಿಯಾಯಿತು. ಹೊಡೆದ ಕಾರಣವನ್ನು ಕೇಳಿದಾಗ ,ಕೆಲಸಗಾರರು ಹೇಳಿದ ವಿಚಾರದಿಂದ ಸದಾಶಿವ ಸರಿಯಾಗಿ ಮಾಡಿದನಂದುಕೊಂಡರು,  ಆದರೆ ಇಷ್ಟೊಂದು ತೀವ್ರವಾಗಿ ಹೊಡೆಯಬಾರದಿತ್ತೆಂದು  ಅನಿಸಿತು.ಕೂಡಲೇ ರಂಗನನ್ನು ಹೊತ್ತುಕೊಂಡು ಕಾರಿನಲ್ಲಿ ಆಸ್ಪತ್ರೆಯತ್ತ ತೆರಳಿದರು, ಇತ್ತ ಗಂಗಾಳಿಗೆ ಸದಾಶಿವ ರಂಗನಿಗೆ ಹೊಡೆದ ವಿಚಾರ ತಿಳಿಯಿತು. ಬೆದರಿದ ಗಂಗಾ ನೇರವಾಗಿ ಆಸ್ಪತ್ರೆಯತ್ತ ಹೊರಟಳು. ಅದು ಸರಕಾರಿ ಆಸ್ಪತ್ರೆಯಾಗಿತ್ತು. ಆಸ್ಪತ್ರೆ  ಮೆಡಿಸಿನ್ನ ವಾಸನೆಯಿಂದ ತುಂಬಿತ್ತು. ಕಾಲು ತುಂಡಾದ ,ಕುಷ್ಠ ರೋಗದ, ಜ್ವರದಿಂದ ನರಳುತ್ತಿದ್ದ ಹೀಗೆ  ಹಲವಾರು ರೋಗಿಗಳ ಕೊಂಪೆಯಾಗಿತ್ತು. ನೆಲವಂತೂ ಧೂಳಿನಿಂದ ತುಂಬಿ ಎಷ್ಟೋ ವರ್ಷಗಳಿಂದ ಶುಚಿ ಮಾಡಿಲ್ಲವೇನೊ ಅನ್ನುವಂತಿತ್ತು.ಮೂಗು ಮುಚ್ಚಿಕೊಂಡೇ ಆಸ್ಪತ್ರೆ ಒಳಹೊಕ್ಕ ರಂಗನಿದ್ದ ವಾರ್ಡಿನ ಕಡೆ ಓಡಿದಳು. ಹಾಸಿಗೆಯ ಮೇಲೆ ಮಲಗಿದ್ದ ರಂಗನನ್ನು ನೋಡಿ, ತನ್ನದೇನೂ  ತಪ್ಪಿಲ್ಲ ಎನ್ನುವಂತೆ ತಲೆ ಎತ್ತಿ ನಿಂತಿದ್ದ ಸದಾಶಿವ; ಪಕ್ಕದಲ್ಲೇ ಇದ್ದ ತನ್ನ ತಂದೆಯನ್ನು ಕಂಡ ಗ...

ಸದಾಶಿವ - ಸಂಚಿಕೆ-31

Image
ಸದಾಶಿವ ಸಂಚಿಕೆ-31 ಗೌರಿಯ ಜಡೆ ಹಿಡಿದು ಎಳೆದು ,ಅವಳ ಸೀರೆಯ ಸೆರಗಿಗೆ ಕೈ ಹಾಕಿದ, ಆಗ ಗೌರಿಗೆ.ಎಲ್ಲಿಲ್ಲದ ಕೋಪ ಬಂದಿತು. ಮೊದಲೇ ಹಳ್ಳಿ ಹುಡುಗಿ ,ಕಲಿತ ಹುಡುಗಿ, ಆ ಪುಂಡ ಯುವಕನ ಕೈಯನ್ನು ಕಚ್ಚಿದ್ದಳು. ಅಷ್ಟರಲ್ಲಿ ಅವನ ಉಳಿದ ಮೂವರು ಗೆಳೆಯರು ಕೂಡ ಅವಳ ಹತ್ತಿರಕ್ಕೆ ಬಂದಿದ್ದರು.ಗೌರಿ ಅವರಿಂದ ತಪ್ಪಿಸಿಕೊಂಡು ಹೋಗುವಾಗ ,ಕಾಲು ಎಡವಿ ಮರಳಿನ ಮೇಲೆ ಬಿದ್ದಳು.ಆ ನಾಲ್ವರು ಗೌರಿಯ ಹತ್ತಿರ ಬರತೊಡಗಿದರು, ಆ ಸಂದರ್ಭದಲ್ಲಿ ಗೌರಿಯ ತಲೆ ವೇಗವಾಗಿ ಓಡತೊಡಗಿತು, ತಾತ್ಕಾಲಿಕ ಉಪಾಯವೊಂದನ್ನು ಮಾಡಿಕೊಂಡಳು, ರೌಡಿಗಳು ಗೌರಿಯ ಮುಖದತ್ತ ಬಾಗಿದಾಗ ಕೈಯಲ್ಲಿ ಹಿಡಿದುಕೊಂಡಿದ್ದ ಮರಳನ್ನು ಆ ನಾಲ್ವರ ಮುಖದತ್ತ ರಪರಪನೆ ಎರಚಿದಳು. ರೌಡಿಗಳು ಅಯ್ಯೋ ,ಅಮ್ಮಾ ಎಂದು ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಗೌರಿ ಅವರಿಂದ ತಪ್ಪಿಸಿಕೊಂಡಳು. ಅಷ್ಟರಲ್ಲಿ ಮಾರ್ಗದಲ್ಲೊಂದು  ಟ್ಯಾಕ್ಸಿ ಬರುತ್ತಿತ್ತು,ಕೈ ಅಡ್ಡ ಹಿಡಿದಾಗ ನಿಲ್ಲಿಸಿದರು ಅವಸರದಿಂದಲೇ ಹತ್ತಿ, ತಾನಿರುವ ವಿಳಾಸವನ್ನು ಹೇಳಿದಳು. ಗಾಬರಿಯಿಂದ ಗೌರಿಯ ಮುಖ ಬೆವರಿತ್ತು, ರೌಡಿಯ ಎಳೆದಾಟದಿಂದ ಸೀರೆ ಅಸ್ತವ್ಯಸ್ತವಾಗಿತ್ತು, ಅವಳ ಪರಿಸ್ಥಿತಿಯನ್ನು ನೋಡಿದ ಟ್ಯಾಕ್ಸಿ ಡ್ರೈವರ್ ಅವಳಿಗೆ ನೀರು ತೆಗೆದು ಕೊಟ್ಟ.ಟ್ಯಾಕ್ಸಿಯವನು ಏನಾಯಿತೆಂದು ಅವಳಲ್ಲಿ  ಕೇಳಿದಾಗ ,ಏನಿಲ್ಲವೆಂದು ಮಾತು ತೇಲಿಸಿದಳು. ಅಷ್ಟರಲ್ಲಿ ಅವಳಿದ್ದ ಹೊಟೇಲ್ ಬಂದಿತು. ಟ್ಯಾಕ್ಸಿಯವನಿಗೆ  ಹಣ ಕೊಟ್ಟು ಧನ್ಯವಾದವನ್ನು ತಿ...

ಸದಾಶಿವ - ಸಂಚಿಕೆ- 30

Image
ಸದಾಶಿವ ಸಂಚಿಕೆ- 30   ತಾಯಿಯ ಸಾವಿನ ನಂತರ ಗಂಗಾ ತೀರಾ ಮೌನಿಯಾದಳು. ತನ್ನಿಂದಲೇ ತಾಯಿ  ಸಾಯುವಂತಾಯಿತು ಎಂಬ ಕೀಳರಿಮೆ ಅವಳನ್ನು ಕಾಡತೊಡಗಿತ್ತು.ಗೌರಿ ಇಪ್ಪತ್ತು ವರ್ಷದ ತರುಣಿಯಾದಳು, ಆದರೂ ಮಾತು ಬಾರಲೇ ಇಲ್ಲ. ಸುಬ್ರಹ್ಮಣ್ಯ ಸ್ವಾಮಿ ಹಲವು ಕಡೆ ಮಗಳನ್ನು ತೋರಿಸಿದರೂ ಪ್ರಯೋಜನವಾಗಲಿಲ್ಲ, ಹಲವು ದೇವರಿಗೆ ಹರಕೆ ಹೊತ್ತರು,ಪೂಜೆ ಹೋಮ ,ಹವನ ಎಲ್ಲ ಮಾಡಿದರು ಆದರೆ ಅದಾವುದೂ ಫಲ ನೀಡಲಿಲ್ಲ ,ಗಂಗಾ ಮೂಕಿಯಾಗಿ ಉಳಿದಳು. ಸದಾಶಿವನಿಗೆ ಗಂಗಾಳ ಮೇಲೇನೋ ವಾತ್ಸಲ್ಯ, ಮುಗ್ಧತೆಯ  ಪ್ರತಿರೂಪದಂತಿದ್ದ, ಸೌಮ್ಯ ಸ್ವಭಾವದ ಗಂಗಾ ಎಂದರೆ ಅಕ್ಕರೆ ಕೂಡ, ಮೂಕ ಭಾಷೆಯಲ್ಲಿ ಅವಳ ಜೊತೆ ಮಾತನಾಡುತ್ತಿದ್ದ , ಗಂಗಾಳಿಗೆ ಸದಾಶಿವನ ವಿನಯ ,ಪ್ರೀತಿ ತುಂಬಿದ ಮಾತುಗಳು ಅವನ ಜೊತೆ  ಸಲಿಗೆಯಿಂದ ಮಾತನಾಡಲು ದಾರಿಯಾಯಿತು. ಈರ್ವರು ಉತ್ತಮ ಸ್ನೇಹಿತರಾದರು.ಹೀಗೆ ದಿನಗಳು ಉರುಳಿದವು,         ಇತ್ತ ಗೌರಿ ಸದಾಶಿವನನ್ನು ಹುಡುಕಿಕೊಂಡು ಮಡಿಕೇರಿಯಲ್ಲಿ ಇಳಿದಳು.ಅಲ್ಲಿ ಅವಳಿಗೆ ಪರಿಚಯದವರಾರು ಇರಲಿಲ್ಲ.ಬಸ್ಸಿನಿಂದ ಇಳಿದಾಗ ಎದುರಲ್ಲಿ ಕಾಣಿಸಿಕೊಂಡ ಸಿಹಿತಿಂಡಿಗಳ ಅಂಗಡಿಯ ಯಜಮಾನನ ಬಳಿ ,ಇಲ್ಲಿ ಯಾವುದಾದರೂ ಹೋಟೆಲಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆಯೇ ಎಂದು ಕೇಳಿದಾಗ, ಆ ಹೋಟೆಲಿನ ಅಂಗಡಿಯ ಯಜಮಾನ ಇದೆ ,ಎಂದು ತಲೆಯಲ್ಲಾಡಿಸಿ, ಸಿಂಧೂರ ಹೋಟೆಲಿನ ವಿಳಾಸವನ್ನು ಹೇಳಿದ. ಗೌರಿ ಆತನಿಗೆ ಧನ್ಯವಾದಗಳನ್ನು...

ಸದಾಶಿವ - ಸಂಚಿಕೆ-29

Image
ಸದಾಶಿವ ಸಂಚಿಕೆ-29   ಮಗಳನ್ನು ರಕ್ಷಿಸುವ ಭರದಲ್ಲಿ ಹಿಂಬದಿಯಿಂದ ಬೆಂಕಿ ಹಿಡಿದ ಪಕ್ಕಾಸಿನ ತುಂಡೊಂದು ತನ್ನ ಮೇಲೆ ಬೀಳುತ್ತಿದೆ ಎನ್ನುವುದನ್ನೇ ಮರೆತು ಬಿಟ್ಟಳು, ಅಷ್ಟರಲ್ಲಾಗಲೇ ಪಕ್ಕಾಸಿನ ತುಂಡು  ಗಿರಿಜೆಯ ಮೇಲೆ ಬಿದ್ದು,ಅವಳುಟ್ಟಿದ್ದ  ರೇಶಿಮೆ ಸೀರೆಗೆ ಬೆಂಕಿಹಿಡಿದು ಗಿರಿಜಾ ಬೆಂಕಿಯಲ್ಲಿ ಭಗಭಗನೆ ಉರಿಯ ತೊಡಗಿದಳು. ತನ್ನ ಕಣ್ಣೆದುರೇ ತನ್ನ ತಾಯಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಗಂಗಾ 'ಅಮ್ಮಾ' ಎಂದರಚಿ ಪ್ರಜ್ಞೆ ತಪ್ಪಿ ಬಿದ್ದಳು.ಗಂಗಾಳ ತಾಯಿ ಉರಿಯುತ್ತಿರುವುದನ್ನು ಕಂಡ ಸುತ್ತಮುತ್ತಲಿನ  ಜನರು ಗೋಣಿಯನ್ನು ಹಿಡಿದುಕೊಂಡು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಗಿರಿಜ ಅರೆಬೆಂದು ಜೀವಂತ ಶವವಾಗಿದ್ದಳು.ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಗಮನಿಸಿದ ಯಾರೋ ಒಬ್ಬರು ಅವಳನ್ನು ಎತ್ತಿ ಗುಡಿಸಲಿನಿಂದ ಹೊರ ತಂದರು.ತಾಯಿ ಮತ್ತು ಮಗಳು ಇಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಹೊರಟಾಗ, ಮಾರ್ಗ ಮಧ್ಯದಲ್ಲಿ ಗಿರಿಜೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಷ್ಟರಲ್ಲಾಗಲೇ ಈ ವಿಚಾರವನ್ನು ಅರ್ಚಕರು ತಮ್ಮ ಪರಿಚಯದವರಲ್ಲಿ ಹೇಳಿ ಸುಬ್ರಹ್ಮಣ್ಯ ಸ್ವಾಮಿಗೆ ಸುದ್ದಿ ಮುಟ್ಟಿಸಿದರು. ಗಾಬರಿಯಿಂದಲೇ ಆಸ್ಪತ್ರೆಗೆ ಬಂದ ಸುಬ್ರಹ್ಮಣ್ಯ ಸ್ವಾಮಿ ಗಿರಿಜೆಯ ಶವ ಕಂಡು ದುಃಖ ತಡೆಯದೆ ನೋವಿನಿಂದ  ಅತ್ತರು.ಮಗಳು ಎಲ್ಲೆಂದು ವೈದ್ಯರಲ್ಲಿ ಕೇಳಿದಾಗ ಗಂಗಾಳಿದ್ದಲ್ಲಿಗೆ ಕರೆದುಕೊಂಡು ಹೋದರ...

ಸದಾಶಿವ - ಸಂಚಿಕೆ - 28

Image
ಸದಾಶಿವ ಸಂಚಿಕೆ - 28      ಈಶ್ವರನ ದೇವಸ್ಥಾನದಲ್ಲಿ ಪೂಜೆ ಹೇಳಿದ್ದ ಕಾರಣ, ಕಾಡಿನ ನಡುವೆ ಇದ್ದ ಪುರಾತನ ಶಿವ ದೇವಾಲಯಕ್ಕೆ ತೆರಳಿದ್ದರು, ಸುತ್ತಲೂ ಗಿಡ ಮರಗಳಿದ್ದು, ದೇವಸ್ಥಾನದ ಮುಂದುಗಡೆ ಕಾಡು ಪುಷ್ಪಗಳ ಸುಂದರ ಗಿಡಗಳಿದ್ದವು, ವಿಶಾಲವಾದ ಅಂಗಣವು ಮಳೆಗೆ ಪಾಚಿ ಹಿಡಿದಿದ್ದು, ಕಲ್ಲುಗಳಲ್ಲಿ ಸುಂದರ ಚಿತ್ತಾರಗಳಿದ್ದವು. ದೇವಸ್ಥಾನದ ಗರ್ಭಗುಡಿಯೊಳಗೆ ಶಿವಲಿಂಗವಿತ್ತು,ಪ್ರಕೃತಿಯ ಮಡಿಲಲ್ಲಿ ಆ ಶಿವಲಿಂಗ ಶೋಭಿಸುತ್ತಿತ್ತು. ಮೇಲಿನಿಂದ ಹನಿ ನೀರು ತೊಟ್ಟಿಕ್ಕುತ್ತಿತ್ತು.ಬೆಳ್ಳಂಬೆಳಿಗ್ಗೆಯೇ ಅರ್ಚಕರು ಶಿವಾಲಯದ ಸುತ್ತಲೂ ಶುಭ್ರಗೊಳಿಸಿ ,ಶಿವನಿಗೆ ಕಾಡು ಪುಷ್ಪಗಳಿಂದ ಅಲಂಕಾರವನ್ನು ಮಾಡಿದ್ದರು. ಗಂಗಾ ಹಾಗೂ ಅವಳ ತಾಯಿ ಗಿರಿಜ ಹಣ್ಣುಕಾಯಿ ಮಾಡಿಸಲೆಂದು ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಬುಟ್ಟಿಯಲ್ಲಿ ಹಾಕಿಕೊಂಡು ಬಂದಿದ್ದರು. ಅರ್ಚಕರು ಅವರ ಕೈಯಿಂದ ಬುಟ್ಟಿಯನ್ನು ತೆಗೆದುಕೊಂಡು, ಪೂಜೆಯನ್ನು ಮಾಡುತ್ತಿದ್ದಾಗ ,ಗಂಗಾ ಈಶ್ವರನ ಭವ್ಯ ಮೂರ್ತಿಯನ್ನು ಕಂಡು ಭಕ್ತಿಪರವಶಳಾಗಿ ಲಿಂಗವನ್ನೇ ದಿಟ್ಟಿಸಿ ನೋಡುತ್ತಿದ್ದಳು ,ಅವಳ ಹೃದಯದಲ್ಲಿ ಈಶ್ವರನ ಮೇಲೆ ಭಕ್ತಿ ಭಾವಗಳೆರಡೂ ಉಂಟಾಗಿ ಹೃದಯ ತುಂಬಿ ಬಂದಿತು. ಸಕಲರನ್ನು ಪೊರೆದು, ಸರ್ವರಿಗೂ ಒಳಿತನ್ನು ಮಾಡಿ,ನಮ್ಮೂರಿನ ಜನರಿಗೆ,ಮಕ್ಕಳಿಗೆ ಈ ಪ್ರಕೃತಿ ಎಲ್ಲವೂ ಸುಂದರವಾಗಿ, ಸಂತಸದಿಂದಿರುವಂತೆ ಮಾಡೆಂದು ಮನಸಾರೆ ಪ್ರಾರ್ಥಿಸಿದಳು.ಗಂಗಾ 'ಗಂಗೆಯಷ್ಟೇ'ಪವಿತ್ರಳು. ಕರುಣಾಮ...

ಸದಾಶಿವ - ಸಂಚಿಕೆ-27

Image
ಸದಾಶಿವ ಸಂಚಿಕೆ-27     ಗಂಗಾ ಸುಬ್ರಹ್ಮಣ್ಯ ಸ್ವಾಮಿ ಮತ್ತು ಗಿರಿಜಾ ದಂಪತಿಗಳಿಗೆ ಒಬ್ಬಳೇ ಮಗಳಾಗಿದ್ದಳು. ಚಿನಕುರಳಿಯಂತೆ ಬೆಳೆಯುತ್ತಿದ್ದ ಗಂಗಾ ಪಟ ಪಟ ಮಾತಿನ ಮಲ್ಲಿಯಾಗಿದ್ದಳು. ಎಳವೆಯಲ್ಲೇ ತನ್ನಲ್ಲಿ ಇರುವುದನ್ನೆಲ್ಲ ಇನ್ನೊಬ್ಬರಿಗೆ ಹಂಚಿ ತಿನ್ನುತ್ತಿದ್ದಳು ಗಂಗಾ. ಒಂದು ದಿನ ಶಾಲೆಯಲ್ಲಿ ಇರುವಾಗ ಒಬ್ಬಳು ಹುಡುಗಿ ,ಹಸಿವೆ ಎಂದು ಅಳುತ್ತಿದ್ದಳು. ಆಗ ಗಂಗಾ ತಾನು ಮನೆಯಿಂದ ತಂದಿದ್ದ ತಿಂಡಿಯ ಬುತ್ತಿಯನ್ನು ಅವಳ ಕೈಯಲ್ಲಿತ್ತಳು. ಹೀಗೆ ಪೆನ್ನು,ಪುಸ್ತಕ,ಕಡ್ಡಿ,ಬಳಪ ಎಂದು ತನ್ನಲ್ಲಿರುವ ವಸ್ತುವನ್ನು ಇತರರಿಗೆ ಕೊಟ್ಟು, ತಾನು ಖಾಲಿ ಕೈಯಲ್ಲಿ ಮನೆಗೆ ಹಿಂದಿರುಗುತ್ತಿದ್ದಳು. ಮಗಳುಪಕಾರದ ಬಗ್ಗೆ ತಿಳಿದಿದ್ದ ಸುಬ್ರಹ್ಮಣ್ಯ ಸ್ವಾಮಿ ಮತ್ತು ಗಿರಿಜ ಮಗಳಿಗೆ ಹೊಸ ವಸ್ತುಗಳನ್ನು ತರಿಸಿಕೊಡುತ್ತಿದ್ದರು. ಒಮ್ಮೆ ಗಂಗಾಳ ಆಪ್ತ ಗೆಳತಿಯೊಬ್ಬಳು ಶಾಲೆಗೆ ಕಟ್ಟಲು ಹಣವಿಲ್ಲವೆಂದು ಶಾಲೆಗೆ ಬಂದಿರಲಿಲ್ಲ ,ಈ ವಿಚಾರವನ್ನು ಗಂಗಾ ತನ್ನ ಗೆಳತಿ ಶಾಲೆಗೆ ಏಕೆ ಬರುತ್ತಿಲ್ಲವೆಂದು  ಇತರ ಸಹಪಾಠಿಗಳಿಂದ ತಿಳಿದುಕೊಂಡು ,ಐದನೇ ತರಗತಿಯ ಪುಟ್ಟ ಪೋರಿ ಗಂಗಾ ಸೀದಾ ಗೆಳತಿಯ ಮನೆಗೆ ತೆರಳಿದ್ದಳು. ಈಗಲೋ ಆಗಲೋ ಬೀಳುವಂತಿದ್ದ ಜೋಪಡಿ ಅಂತ ಮನೆಯಲ್ಲಿದ್ದಳು ಗಂಗಾಳ ಗೆಳತಿ ನಿರ್ಮಲಾ.ನಿರ್ಮಲಾಳ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ನಿರ್ಮಲಳ ತಾಯಿ ಹೆಗಲ ಮೇಲೆ ಮನೆಯ ಯೋಗಕ್ಷೇಮದ ಹೊರೆಬಿದ್ದಿತ್ತು. ಬೇರೆಯವರ ಮನೆಯಲ್ಲಿ ಕೆಲ...

ಸದಾಶಿವ - ಸಂಚಿಕೆ -26

Image
ಸದಾಶಿವ ಸಂಚಿಕೆ -26 ಕೊನೆಯ ಪುಟದ ತುಂಬೆಲ್ಲಾ ಗೌರಿಯ ವಿಚಾರವೇ ತುಂಬಿತ್ತು. ತಂದೆ ,ತಾಯಿ ,ತಮ್ಮ , ತಂಗಿಯಂದಿರ ಹೊರತಾಗಿ ನಾನು ಅತಿಯಾಗಿ ಇಷ್ಟಪಡುವ ವ್ಯಕ್ತಿ ಎಂದರೆ ಅದು ಗೌರಿ, ಚಿಕ್ಕಂದಿನಿಂದಲೇ ನನಗೆ ಅವಳೆಂದರೆ ಬಲು ಇಷ್ಟ .ಅವಳ ಮುಗ್ಧ ಮುಖ, ಪಟಾಕಿಯಂತೆ ಸಿಡಿಮಿಡಿಗುಟ್ಟುವ ಕೋಪ, ನಕ್ಕಾಗ ಗುಳಿ ಬೀಳುವ ಕೆನ್ನೆ ,ಅರಳು ಹುರಿದಂತ ಮಾತು, ನನ್ನ ಕಂಡಾಗಲೆಲ್ಲಾ  ಉಕ್ಕೇರುವ ಪ್ರೀತಿ, ಕೆಂಪಾಗುವ ಕೆನ್ನೆ, ನನಗಾಗಿ ಕಾಯುತ್ತಾ ಕುಳಿತುಕೊಳ್ಳುವ ಅವಳ ಅತಿಶಯ ಪ್ರೀತಿ ,ನನ್ನ ಅವಳೆಡೆಗೆ ಸೆಳೆಯುತ್ತಲೇ ಹೋಯಿತು.ನನ್ನ ಹೃದಯವೂ ಅವಳ ಬರುವಿಕೆಗಾಗಿ  ಕಾಯುತ್ತಿತ್ತು. ಆದರೆ ಅವಳ ಜತೆ ಸುತ್ತಾಡಬೇಕು ,ಕುಳಿತು ಮಾತನಾಡಬೇಕು,ಎಂಬ ಬಯಕೆಯನ್ನು ಹತ್ತಿಕ್ಕಿಕೊಂಡಿದ್ದೆ. ನನಗೆ ಅವಳ ಮೇಲಿರುವ ಪ್ರೇಮವನ್ನು ಹೇಳಿಕೊಳ್ಳಬೇಕು, ಅವಳ ಜೊತೆ ಏಳು ಹೆಜ್ಜೆಯನ್ನಿಟ್ಟು ನಡೆಯಬೇಕು ,ಅವಳ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು, ಹೀಗೆ ಗೌರಿಯ ಕುರಿತಾಗಿ ಹಲವು ಕನಸುಗಳನ್ನು  ಕಟ್ಟಿಕೊಂಡಿದ್ದೆ ,ಆದರೆ ಜಾತಿ ಬೇರೆ ಬೇರೆಯಾಗಿತ್ತು, ಹಿರಿಯರು ನಮ್ಮ ವಿವಾಹಕ್ಕೆ ಒಪ್ಪಿಕೊಳ್ಳದಿದ್ದರೆ ಎನ್ನುವ ಅಂಜಿಕೆಯಿಂದ ಮನಸ್ಸು ಹಿಂದೆ ಸರಿಯುತ್ತಿತ್ತು. ಎಂಬುದಾಗಿ ಡೈರಿಯಲ್ಲಿ ಬರೆದಿದ್ದ.ಗೌರಿಗೆ ಈ ವಿಚಾರವನ್ನೆಲ್ಲಾ ಓದಿದಾಗ ಸದಾಶಿವನ ಮೇಲಿನ ಪ್ರೇಮ ಇಮ್ಮಡಿಸಿತು.'ಸದಾ' ನನ್ನು ಹುಡುಕಲೇಬೇಕು, ಎಂದುಕೊಂಡು ಡೈರಿಯನ್ನು ಮಡಚಿ ಒಳಗಿಟ್ಟಳು.ಅಷ್ಟರಲ್ಲಿ ಸರಸಿ...

ಸದಾಶಿವ - ಸಂಚಿಕೆ - 25

Image
ಸದಾಶಿವ ಸಂಚಿಕೆ - 25     ಗೌರಿ ಹರಕೆಯ ಕುರಿಯಂತೆ ತಲೆ ಬಾಗಿಸಿಕೊಂಡು ವರ ಕುಮಾರನ ಮುಂದೆ ಬಂದು ನಿಂತಳು. ಚಂದನದ ಗೊಂಬೆ, ಚಿನ್ನದ ಪುತ್ಥಳಿ ಯಂತೆಯೇ ಯೌವ್ವನ ಕಾಂತಿಯಿಂದ ಅರಳಿ ನಿಂತಿದ್ದ ಗೌರಿಯನ್ನು ಕುಮಾರ ತಿನ್ನುವಂತೆ ನೋಡತೊಡಗಿದ. ಕುಮಾರನ ಆಸೆ ಕಂಗಳ ನೋಟದಿಂದ ಗೌರಿಗೆ ಕಸಿವಿಸಿ ಉಂಟಾಯಿತು. ಕುಮಾರನ ಮನೆಯವರು ಗೌರಿಯ ಮನೆಯವರ ಅಂತಸ್ತು, ಐಶ್ವರ್ಯ ,ಶ್ರೀಪತಿರಾಯರಿಗೆ ಊರಿನಲ್ಲಿರುವ ಗೌರವ, ಗೌರಿಯ ರೂಪ ಇವಲ್ಲಾ ಆಸೆ ಹುಟ್ಟಿಸಿತು. ಸಂತಸದಿಂದಲೇ ಗೌರಿಯನ್ನು ಒಪ್ಪಿಕೊಂಡ ಮನೆಯವರು ,ವಿವಾಹದ ದಿನ ನಿಗದಿ ಮಾಡಿ ಹೊರಟು ನಿಂತರು.  ಮೊದಲು ನೋಡಿದ ಹುಡುಗನೇ ಮಗಳನ್ನು ಒಪ್ಪಿಕೊಂಡ ಎಂದು ಗೌರಿಯ ತಂದೆ ತಾಯಿ ಹರುಷದಿಂದ ನಲಿದರು. ಆದರೆ ಗೌರಿಗೆ ಕುಮಾರನನ್ನು ಕಂಡಾಗ ಅಸಹ್ಯವಾಯಿತೇ ಹೊರತು ಪ್ರೀತಿ ಉಂಟಾಗಲಿಲ್ಲ. ಆ ಸಂದರ್ಭದಲ್ಲಿ ಗೌರಿಗೆ ಸದಾಶಿವನ ನೆನಪಾಯಿತು,ನನ್ನ ಪ್ರೇಮವನ್ನು ಸದಾಶಿವನ ಬಳಿ ಹೇಳಿಕೊಳ್ಳುವುದಕ್ಕಿಂತ ಮೊದಲೇ ಊರನ್ನು ಬಿಟ್ಟು ಹೊರಟು ಹೋದ ಎಂದು ಅಳುತ್ತಾ ಕುಳಿತುಕೊಂಡಳು. ಮದುವೆಗೆ ಇನ್ನೂ ಮೂರು ತಿಂಗಳು ಬಾಕಿ ಇತ್ತು.ಅಷ್ಟರಲ್ಲಿ ಸದಾನನ್ನ ಹುಡುಕಬೇಕು ಎಂದು ಧೃಡ ನಿರ್ಧಾರ ಮಾಡಿಕೊಂಡು, ಮನೆಯವರಲ್ಲಿ ಬೆಂಗಳೂರಿಗೆ ಹೋಗಿ ಬರುತ್ತೇನೆ, ಒಂದು ತಿಂಗಳು ಕೆಲಸ ಮಾಡಿ ನಂತರ ಕೆಲಸಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಾಗ ,ಮಗಳು ಮದುವೆಗೆ ಒಪ್ಪಿರುವುದೇ ದೊಡ್ಡ ವಿಷಯ ಎಂದುಕೊಂಡ ಮನೆಯವರು ಒಪ್ಪಿಗೆಯನ್ನೂ ನೀಡಿದ...

ಹೆಮ್ಮೆಯ ಭಂಡಾರಿ ಪ್ರತಿಭೆ - 1 - ಪ್ರಗತಿ ಭಂಡಾರಿ ಕೆದಿಲ

Image
       ನಿನ್ನ ಅಧ್ಬುತ ಕಲೆಗೆ ಬೆರಗಾದೆ ನಾನು. ಅದೇಗೆ ಬಿಡಿಸುವೆ ಅಧ್ಬುತವಾದ ಚಿತ್ರವ ನೀನು.           ನಾನಿಂದು ತಿಳಿಸಲು ಹೊರಟ ಪ್ರತಿಭೆ ಅಂತಿoತ  ಪ್ರತಿಭೆಯಲ್ಲ ಇವರು ಚಿತ್ರ ಕಲೆಯಲ್ಲಿ ತನ್ನದೆ ರೀತಿಯ ಸಾಧನೆಯನ್ನು ಮಾಡಲು ಹೊರಟ ಪ್ರತಿಭೆ ಇವರೆ ನಮ್ಮ ಭಂಡಾರಿ ಪ್ರತಿಭೆ ಪ್ರಗತಿ ಭಂಡಾರಿ ಕೆದಿಲ ಜೀವನದಲ್ಲಿ ಅತಿ ಕಷ್ಟವಿದ್ದರೂ ಅದನ್ನೆಲ್ಲಾ ಮೆಟ್ಟಿನಿಂತು ತನ್ನದೆ ಶೈಲಿಯಲ್ಲಿ ಚಿತ್ರಕಲೆಯನ್ನು ಮಾಡುತ್ತಾ ಎಲ್ಲರಿಗೂ ಬೆರಗಾಗಿಸಿದ್ದಾರೆ.. ಇಷ್ಟೆಅಲ್ಲ ಬಿಡುವು ಸಮಯದಲ್ಲಿ ಕತೆ,ಲೇಖನಗಳನ್ನೂ ಬರೆಯುತ್ತಾರೆ ಪ್ರಗತಿ ಭಂಡಾರಿ ಕೆದಿಲ.. ಖಂಡಿತವಾಗಿಯೂ ಇವರ ಕಲೆಗೆ ಅತ್ಯುನ್ನತ ಸ್ಥಾನ ಸಿಗುತ್ತದೆ ಎನ್ನುವ ನಂಬಿಕೆ ನನ್ನಲ್ಲಿದೆ. ಇವರ ಈ ಕಲೆಯು ಜಗತ್ಪ್ರಸಿದ್ಧವಾಗಲಿ,ಇವರು ಇನ್ನಷ್ಟು ಚಿತ್ರವನ್ನು ಬಿಡಿಸುವಂತಾಗಲಿ ದೇವರು ಇವರ ಎಲ್ಲಾ ಆಸೆಯನ್ನು ಪೂರೈಸಲಿ ಎಂದು ಬೇಡುತ್ತಿದ್ದೆವೆ... ವರದಿ: ರತೀಶ್ ಭಂಡಾರಿ ಕುಂಜಿಬೆಟ್ಟು

ಸದಾಶಿವ-ಸಂಚಿಕೆ-24

Image
ಸದಾಶಿವ ಸಂಚಿಕೆ-24       ಕುಳಿತಿದ್ದ ಬಸ್ಸು ದೂರದ ಮಡಿಕೇರಿಯನ್ನು ಸೇರಿತ್ತು ,ಬಸ್ಸಿನಿಂದಿಳಿದ ಸದಾಶಿವನ ಕಿಸೆಯಲ್ಲಿ ಐನೂರು ರೂಪಾಯಿಗಳ ಚಿಲ್ಲರೆ ಹಣವನ್ನು ಬಿಟ್ಟರೆ ಬೇರೆ ಹಣವಿರಲಿಲ್ಲ,ಬಸ್ಸಿನಿಂದಿಳಿದ ಸದಾಶಿವ ಪಕ್ಕದಲ್ಲೇ ಇದ್ದ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಾ, ಕುಳಿತುಕೊಂಡವನ ತಲೆಯಲ್ಲಿ  ಏನೂ ಇರಲಿಲ್ಲ .ಶೂನ್ಯ ದೊಳಗಿನ ವೃತ್ತದಲ್ಲಿ ಒಂಟಿಯಾಗಿ ಬಂಧಿಯಾದ ಸದಾಶಿವ ಅಶಾಂತಿ ಎಂಬ ಶೂಲದೊಳಗೆ ಬೇಯುತ್ತಿದ್ದ.ಆದರೆ ಮುಖದಲ್ಲಿ ಪ್ರಶಾಂತತೆ ಇತ್ತು. ಹುಟ್ಟಿಸಿದ ದೇವರು ಹುಲ್ಲು  ಮೇಯಿಸಿದೆ ಇರುತ್ತಾನೆಯೇ ಅಂತೆಯೇ ಸದಾಶಿವ ಮಡಿಕೇರಿಯಲ್ಲಿನ ಒಂದು ಗೆಸ್ಟ್ ಹೌಸ್ ಬಳಿ ಬಂದ, ಅಲ್ಲಿನ ಯಜಮಾನ ಸುಬ್ರಹ್ಮಣ್ಯ ಸ್ವಾಮಿ ಸದಾಶಿವನ ಮುಖದಲ್ಲಿನ ಪ್ರಾಮಾಣಿಕತೆ, ಮೈಕಟ್ಟು ನೋಡಿ  ಕೆಲಸ ಕೇಳಿಕೊಂಡು ಬಂದವನಿಗೆ ಕೆಲಸವನ್ನು ಕೊಟ್ಟರು.. ಸದಾಶಿವ ಎಸ್.ಎಲ್.ಸಿ ಪೂರ್ಣ ಮಾಡಿದ್ದರಿಂದ ಎಸ್ಟೇಟ್ ಮ್ಯಾನೇಜರ್ ಆಗಿ ನೇಮಕಗೊಂಡ.ಪೂರ್ತಿ ಜವಾಬ್ದಾರಿ ಸದಾಶಿವನಿಗೆ ನೀಡಿದ್ದ..ಎಸ್ಟೇಟ್ ಮಾಲೀಕನಿಗೆ ಒಬ್ಬಳು ಮಗಳಿದ್ದಳು ,ಗಂಗಾ ಎಂದವಳ ಹೆಸರು. ಆಕೆ ಶ್ವೇತ ಸುಂದರಿ , ನಾಗರ ಹಾವಿನಂತೆ ನೀಳವಾದ ಕೇಶ ರಾಶಿ ಅವಳದ್ದಾಗಿತ್ತು .ಅವಳ ಕೇಶ ರಾಶಿಯ ಪ್ರಮುಖ ಆಕರ್ಷಣೆಯಾಗಿತ್ತು. ಗಂಗಾಳಿಗೆ ದೇವರು ಸುಂದರ ರೂಪ ಕೊಟ್ಟ ,ಆದರೆ ಅವಳಲ್ಲಿ ಒಂದು ಕೊರತೆಯನ್ನಿಟ್ಟಿದ್ದ. ಅದು ಎಸ್ಟೇಟ್ ಮಾಲೀಕನಿಗೆ ಸದಾ ಕಾಡುವ ನೋವಾಗಿತ್ತು. ಇತ್ತ ಗೌ...

ಸದಾಶಿವ- ಸಂಚಿಕೆ- 23

Image
ಸದಾಶಿವ ಸಂಚಿಕೆ- 23    ಎದ್ದು ನಿಂತು ರಾಯರ ಮೇಲೆ ರೇಗಿದ, ನಿಮಗೇನ್ರಿ ಗೊತ್ತು; ಕೃಷಿಯ ಬಗ್ಗೆ ಎಂದು ಸವಾಲು ಹಾಕಿದಾಗ, ರಾಯರು ಸರಿ ನಾವಿಬ್ಬರೂ ಕೃಷಿಯ ಬಗ್ಗೆ ಮಾತನಾಡೋಣ, ಯಾರಿಗೆ ಎಷ್ಟು ಗೊತ್ತು ಎಂದು ಅದರಿಂದ ತಿಳಿಯುತ್ತದೆ ಎಂದಾಗ, ಜಯರಾಮ ಒಪ್ಪಿಕೊಂಡ. ನಿಜವಾಗಿಯೂ ಜಯರಾಮ್ ಗೆ ಕೃಷಿಯ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ ,ಆದರೂ ಗರ್ವದಿಂದ ಒಪ್ಪಿಕೊಂಡಿದ್ದ ,ಸರಿ ಎಂದು ರಾಯರು ಒಂದೆಕರೆ ಜಮೀನಿನಲ್ಲಿ ಎಷ್ಟು ಕ್ವಿಂಟಾಲ್ ಅಕ್ಕಿ ಸಿಗಬಹುದು ಎಂದು ಪ್ರಶ್ನಿಸಿದಾಗ, ಜಯರಾಮ ಉತ್ತರಿಸಲು ತಡಬಡಿಸಿದ, ಗದ್ದೆಗಿಳಿದು ನಾಟಿ ಮಾಡಲು, ಉಳುಮೆ ಮಾಡಲು, ನಿನಗೆ ಬರುವುದದಾ ಎಂದು ಕೇಳಿದಾಗ ಗದ್ದೆಗೆ ಇಳಿಯದ ಜಯರಾಮ್ ಹೇಗೆ ತಾನೇ ಉತ್ತರಿಸಿಯಾನು, ರಾಯರು ಕೇಳಿದ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಜಯರಾಮ್ ಸುಮ್ಮನಿದ್ದ, ಕೊನೆಗೆ ರೋಷದಿಂದ ರಾಯರನ್ನು ಕೆಕ್ಕರಿಸಿಕೊಂಡು ನೋಡಿ, ನಿನ್ನನ್ನು ಮುಂದೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೊರಟು ಹೋದ. ಈರಣ್ಣನಿಗೆ ಸಹಾಯ ಮಾಡಿದ ರಾಯರು ಮುಂದೆ ದೊಡ್ಡ ಬೆಲೆಯನ್ನೇ ತೆರುವಂತಹ ಕಷ್ಟವೂ ಅವರಿಗೆ ಒದಗುವ ಸೂಚನೆ ಜಯರಾಮನಿಂದ ದೊರಕಿತು. ಹೀಗೆ ವರುಷ ಕಳೆದು ಇಪ್ಪತ್ತೈದು ವರ್ಷದ ಸದೃಢ ಯುವಕನಾದ ಸದಾಶಿವ, ರಾಯರ ಹನ್ನೆರಡು ಮಕ್ಕಳು ಕೂಡ ಮುದ್ದಾಗಿದ್ದರು ,ಆರು ಗಂಡು ಮಕ್ಕಳು ಮತ್ತು ಆರು ಹೆಣ್ಣು ಮಕ್ಕಳ ಕೂಡು ಕುಟುಂಬ ರಾಯರದ್ದಾಗಿತ್ತು.ರಾಯರ ಐದು ಗಂಡು ಮಕ್ಕಳು ಸದಾಶಿವನಂತೆ ಬಲಶಾಲಿಯಾಗಿದ್ದರು.ರಾಯರ...

ಸದಾಶಿವ - ಸಂಚಿಕೆ-22

Image
ಸದಾಶಿವ ಸಂಚಿಕೆ-22       ರಾಯರ ಮನೆಗೆ ಒಬ್ಬ ಮಧ್ಯವಯಸ್ಕ ಬಂದ, ಅವನಿಗೆ ರಾಯರೆಂದರೆ ಬಲು ಗೌರವ ,ಆತನ ಬಳಿ ಒಂದೆಕರೆ ಜಮೀನಿತ್ತು. ಅದರಲ್ಲಿ ಆ ವರ್ಷದ ಬೆಳೆ ಬೆಳೆಯಲಾಗಿತ್ತು. ಆದರೆ ಆತನ ಜಮೀನಿನ ಮೇಲೆ ಒಬ್ಬ ಶ್ರೀಮಂತನ ಕಣ್ಣು ಬಿದ್ದಿತ್ತು..ಆತ ಈ ಜಮೀನು ನನ್ನದು, ನನಗೆ ಬರೆದುಕೊಡಿ ,ಎಂದು ಪಾಪದ  ಈರಣ್ಣನನ್ನು ಹಿಂಸಿಸತೊಡಗಿದ. ಈ ವಿಚಾರವಾಗಿ ಮಧ್ಯಸ್ಥಿಕೆಗೆ ಆ ಊರಿನ ದೇವಾಲಯದ ಆಡಳಿತ ಮೊಕ್ತೇಸರರನ್ನು ಕರೆದಿದ್ದ. ಬಡವ ಈರಣ್ಣನಿಗೆ ಗೊತ್ತಿತ್ತು ,ಈ ಮಧ್ಯಸ್ಥಿಕೆಯಿಂದ ನನಗೆ ನ್ಯಾಯ ದೊರಕದು ಎಂದು; ಅದಕ್ಕಾಗಿ ತನ್ನ ಪರ ಮಾತನಾಡಲು ರಾಯರೇ ಸರಿ ಎಂದು ಅವರ ಬಳಿಗೆ ಬಂದಿದ್ದ. ರಾಯರಿಗೆ ಪಕ್ಕದೂರಿನ ದೇವಸ್ಥಾನದ ಆಡಳಿತ ಮಂಡಳಿಯ ಮೋಕ್ತೇಸರ ಪ್ರಭಾವಿ ವ್ಯಕ್ತಿ ,ಮತ್ತು ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡವರೆಂದು ಗೊತ್ತಿತ್ತು. ಹಾಗಾಗಿ ರಾಯರು ಈರಣ್ಣನ ಜೊತೆ ಬರಲು ಒಪ್ಪಲಿಲ್ಲ, ಇತ್ತ ಈರಣ್ಣ ಪಟ್ಟು ಬಿಡದೆ ಬೆಳಿಗ್ಗೆ ಬಂದವನು ರಾತ್ರಿ ಕಳೆದರೂ ರಾಯರ ಮನೆಯಿಂದ ಹೊರಡಲಿಲ್ಲ ,ರಾಯರಿಗೆ ಈರಣ್ಣನ ಮೇಲೆ ಕರುಣೆ ಬಂದು,ಮರುದಿನ ಬೆಳಿಗ್ಗೆ ಈರಣ್ಣನ ಜೊತೆಗೆ ಪಕ್ಕದೂರಿಗೆ ಹೊರಟರು, ಅಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಅತಿ ಎತ್ತರದ ಆಸನದಲ್ಲಿ ಕುಳಿತಿದ್ದರು, ಸಾತ್ವಿಕ ಮುಖದಲ್ಲಿ ಅದೇನೋ ಅಹಂ ತುಂಬಿತ್ತು ,ನಾನೇ ಎಲ್ಲಾ ಎನ್ನುವ ಭಾವನೆ ಕಣ್ಣುಗಳಲ್ಲಿದ್ದವು.ಆ ವ್ಯಕ್ತಿಯ ಸುತ್ತಲೂ ಬೇರೆ ಬೇರೆ ಕಡೆಯಿಂದ ಬಂದಿದ್ದ ಗ...

ಸದಾಶಿವ - ಸಂಚಿಕೆ -21

Image
ಸದಾಶಿವ ಸಂಚಿಕೆ -21     ತಂದೆಯ ಮುಖ ಕಂಡಿತು, ತಂದೆಗೆ ತನ್ನಿಂದ ನೋವಾಗಿದೆ, ಆದರೂ ತನ್ನನ್ನು  ಸಮಾಧಾನಿಸಲು ಬಂದಿದ್ದಾರೆ ಎಂದು ಗೊತ್ತಾಗಿ ,ಎದ್ದು ನಿಂತ. ಮಗನ ಹೆಗಲ ಮೇಲೆ ಕೈ ಹಾಕಿದ ರಾಯರು, ಕುಳಿತುಕೊ ;ಎಂದು ಹೇಳಿ ತಾವು ಅವನ ಪಕ್ಕ ಕುಳಿತು, *ಸದಾ* ನಿನಗೊಂದು ಮಾತು ಹೇಳುತ್ತೇನೆ ಕೇಳು, ಕೋಪವನ್ನ ನಿನ್ನ  ಹಿಡಿತದಲ್ಲಿಟ್ಟುಕೊ, ಖಂಡಿಸುವುದು ತಪ್ಪಲ್ಲ; ಆದರೆ ಅದಕ್ಕಾಗಿ ಹೊಡೆಯುವುದೇ ಮಾರ್ಗವಲ್ಲ ,ತಪ್ಪು ಮಾಡಿದರೆ ಮಾತಿನಲ್ಲೇ ಸಮಾಧಾನಿಸಲು ನೋಡು, 'ಉಗುರಿನಲ್ಲಿ ಹೋಗುವ ಕೆಲಸಕ್ಕೆ ಕೊಡಲಿ ಎತ್ತಬೇಡ', 'ಕೋಪದಿಂದ ಕುಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ' , ಕೋಪ ಸಂಬಂಧವನ್ನು ಹಾಳು ಮಾಡುತ್ತದೆ, ಚಾಡಿ  ಸಂಸಾರವನ್ನು ಹಾಳು ಮಾಡುತ್ತದೆ,ಅಸೂಯೆ ಮನಸ್ಸನ್ನು ಹಾಳು ಮಾಡುತ್ತದೆ, ಅಪನಂಬಿಕೆ ಜೀವನವನ್ನೇ ಹಾಳು ಮಾಡುತ್ತದೆ ,ಇನ್ನು ನಿನಗೆ ಯಾರು ಹೊಡೆದರೋ ಅವರು ನಿನ್ನ ಶತ್ರುಗಳೇ ಆಗಬೇಕೆಂದಿಲ್ಲ ನಿನ್ನವರು ನಿನಗೆ ಹೊಡೆದಾಗ ಆಗ ತಾಳ್ಮೆ ಮುಖ್ಯ.. ಹಿರಿಯರಂದ ಮಾತಿನಂತೆ, ಪಿತೃಬಿಃ ತಾಡಿತಃ ಪುತ್ರಃ ಶಿಷ್ಯಸ್ತು ಗುರುಶಿಕ್ಷಿತಃ, ಘನಾಹತಂ ಸುವರ್ಣಂ ಚ, ಜಾಯತೇ ಜಲಮಂಡನಮ್     ಮಗನೇ ,ತಂದೆಯಿಂದ ಹೊಡೆಸಿಕೊಂಡ ಮಗ, ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ, ಸುತ್ತಿಗೆಯ ಏಟು ತಿಂದ ಚಿನ್ನ ,ಲೋಕ ಬೆಳಗುವುದು ನಿಶ್ಚಿತ, ಹಾಗಾಗಿ ನೀನು ಕೂಡ ಲೋಕ ಬೆಳಗುವ ಚಿನ್ನವಾಗು, ಊರಿಗೆ ಉಪಕಾರಿಯಾಗಿ, ಮು...

ಸದಾಶಿವ - ಸಂಚಿಕೆ-20

Image
ಸದಾಶಿವ ಸಂಚಿಕೆ-20    ಅಲ್ಲಿ ಸದಾಶಿವನ ಇರಲಿಲ್ಲ,ಗಣೇಶನೂ ಇರಲಿಲ್ಲ ,ಬಲ ಭೀಮನಂತಿದ್ದ ಸದಾಶಿವನಿಗೆ ಎರೆ ಹುಳುವಿನಂತ ಸಣಕಲು  ಗಣೇಶನನ್ನು ಎತ್ತಿಕೊಂಡು ಹೋಗುವುದು ಕಷ್ಟದ ಕೆಲಸವಾಗಿರಲಿಲ್ಲ , ಸದಾಶಿವ ರಕ್ತ ಕಂಡು ಭಯಭೀತನಾದರೂ ಮತ್ತೆ ಧೈರ್ಯದಿಂದ ಗಣೇಶನನ್ನು  ಎತ್ತಿಕೊಂಡು ,ಶಾಲೆಗೆ  ಹತ್ತಿರವಿದ್ದ ,ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ,ಪ್ರಥಮ ಚಿಕಿತ್ಸೆ ಮಾಡಿಸಿದ.  ವೈದ್ಯರು ಗಣೇಶನ ತಲೆಗೆ ಬ್ಯಾಂಡೇಜ್ ಸುತ್ತಿ ಪ್ರಜ್ಞಾಹೀನನಾಗಿದ್ದ ಗಣೇಶನನ್ನು ಎಬ್ಬಿಸಲು ಪ್ರಯತ್ನಿಸಿದರು. ಅಂತೂ ಗಣೇಶ ನಿಧಾನವಾಗಿ ಕಣ್ತೆರೆದ, ಸದಾಶಿವನಿಗೆ ಗಣೇಶ ಎಚ್ಚರಗೊಂಡಿದ್ದನ್ನು ಕಂಡ ತಕ್ಷಣ ಹೋದ ಜೀವ ಮತ್ತೆ ಬಂದಂತಾಯಿತು. ಇತ್ತ ಅಧ್ಯಾಪಕರುಗಳು, ಮಕ್ಕಳು, ಪೋಷಕರು, ರಾಯರು ಮತ್ತು ಅವರ ಕುಟುಂಬದವರು ವೇಷ ಧರಿಸುವ ಕೊಠಡಿಯತ್ತ ಬಂದಾಗ ,ಎಲ್ಲೂ ಸದಾಶಿವ ಗಣೇಶ ಕಾಣದ್ದನ್ನು ಕಂಡು  ಇನ್ನಷ್ಟು ಭಯಗೊಂಡರು. ಅಂದಿನ ವಾರ್ಷಿಕೋತ್ಸವವು ಸದಾಶಿವನಿಂದಾಗಿ ನಿಂತಿತು .ಎಲ್ಲರೂ ಗಣೇಶ ಸದಾಶಿವನನ್ನು ಹುಡುಕುವುದರಲ್ಲಿ ಮಗ್ನರಾದರು.ಆದರೆ ಈರ್ವರ ಸುಳಿವು ಯಾರಿಗೂ ಕಾಣಲಿಲ್ಲ, ಅಷ್ಟರಲ್ಲಿ ಏಳನೇ ತರಗತಿಯ ಒಬ್ಬ ಹುಡುಗ ಸದಾಶಿವ ಗಣೇಶನನ್ನು ಶಾಲೆಯ ಹಿಂಬದಿಯ ಗೇಟಿನಿಂದ ಎತ್ತಿಕೊಂಡು ಹೋದ, ಎಂದಾಗ ಎಲ್ಲರೂ ಅತ್ತ ಕಡೆ ಓಡಿದರು.ಅಲ್ಲೇ ಇರುವ ಸರಕಾರಿ ಆಸ್ಪತ್ರೆಯ ಒಳಹೊಕ್ಕು ನೋಡಿದಾಗ ಸದಾಶಿವ ಬೆಂಚಿನ ಮೇಲೆ ಮುದುರಿ ಕುಳಿ...

ಒಂದೇ ನಾಣ್ಯದಲಿ ಎರಡು ಮುಖ - ಕಾತಿ೯ಕ್ ಮಜಲ್ ಮಾರ್

Image
ಒಂದೇ ನಾಣ್ಯದಲಿ ಎರಡು ಮುಖ ಪ್ರತಿಯೊಂದು ಅನೀರಿಕ್ಷಿತವಾಗಿ ಬೇಟಿಯಾದ ಜೀವದ ಗೆಳತಿ ವಿಂದ್ಯಾ.ಯಾಕೆ ? ಹೇಳದೇ,ಕೇಳದೇ ಬಂದಿರುವೆ ಗೆಳತಿ,ಏನಾಯಿತು? ಹೇಳೇ .ಹ ಏನಿಲ್ಲಾ ,ಎಲ್ಲಾ ನಿನ್ನಿಂದಲೇ ಎನೂ ನಡೆಯದಿರುವಂತೆ ಜೀವನ  ಸಾಗುಸುತಿರುವೆಯಲ್ಲ ನೀನು  ಬದಲಾಗಿಲ್ಲಾ  ಕಣೇ,ನಿನ್ನ ಸ್ವಾಭಿಮಾನದ ಬದುಕಿನಲ್ಲಿ ಎಲ್ಲವನು ಕಳೆದುಕೊಂಡಿರುವೆ ಸ್ವಲ್ಪ ಸಡಿಲಗೊಳಿಸು ನಿನ್ನಲಿರುವ ನೆಲೆಸಿರುವ ಅ ಒಳ್ಳೆಯಗುಣವನ್ನು.  ಬಂದದೆಲ್ಲಾ ಬರಲಿ ಎನಾದರೂ ಜೀವನ ನಡೆಯುದೆಂಬುದನ್ನು  ಅನುಸರಿಸುತಾ ಸಾಗುತಿರುವೆ,ಏನಾದರೂ ತಲೆಗೆಡಿಸದೆ ಆರಾಮವಾಗಿ ಇರುವೆ,ನಿನಗೆ ಸ್ವಲ್ಪನೂ ದುಃಖಪಡುವಂತಹ ಮನಸ್ಸನೇಕೆ ನೀಡಿಲ್ಲ ಅ ದೇವರು ಎಂದು ಹೊಟ್ಟೆ ಕಿಚ್ಚಾಗುತ್ತೆ ತಾಯಿ.ಯಾಕೆ? ಎನೇನು ಮಾತಾಡುತ್ತಿರುವೆ ವಿಂದ್ಯಾ, ಆರಾಮಾವಾಗಿರುವೆ ತಾನೇ!!!. ನಾನಿರುವೆ ಆದರೆ, ನೀನು ಮಾಡಿರುದು ಸರಿಯಾದ ನಿಧಾ೯ರವಲ್ಲ. ಕಾರಣ ಅಷ್ಟು ಕೇಳಿಕೊಂಡರು ಅವನನ್ನು ದೂರವಿರಿಸಿ ಯಾರಿಗೂ ಕಾಣಸಿಗದಂತೆ ಮಾಡಿದೆ ಇದು ತಪ್ಪು. ಅವನು ನನಗೆ ಹಿಂಸೆಯಾಗಿದ್ದ,ಅವನಿಂದ ದೂರವಿರೋಕೆ ಹೀಗೆಲ್ಲ ನಾಟಕವಾಡಿದೆ ನಾನೇನು ಮಾಡಿಲ್ಲ, ನೀನಗೇನು ಗೊತ್ತಿದೆಯೆಂದು ಅವನ ಪರವಾಗಿ ಮಾತನಾಡುತಿರುವೆ. ಅ ವಿಚಾರಗಳನ್ನೇ ತಿಳಿದು ಮಾತನಾಡಲು ಬಂದಿರುವೆ,ಒಂದೊಂದನ್ನು ಬಿಡಿಸುವೇನು ನೀನು ಹಾಕಿಕೊಂಡಿರುವ ಒಗಟಿನ ಗಂಟನು ನಿನಗ ಅವನು ಏನೂ ಆಗದಿರಬಹುದು,ಆದರೆ ಅವನಿಗೆ ನೀನು ಪ್ರೇಮ ಲೋಕದ ಮಹಾ ದೇವತೆ ನಿನ್ನ...

ಸದಾಶಿವ - ಸಂಚಿಕೆ-19

Image
ಸದಾಶಿವ ಸಂಚಿಕೆ-19       ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು, ಸಭಾ ಕಾರ್ಯಕ್ರಮದಲ್ಲಿ ಶ್ರೀಪತಿ ರಾಯರು ಮತ್ತು ರಾಮರಾಯರು ಮುಖ್ಯ ಅತಿಥಿಗಳಾದ್ದರು. ಮೊದಲನೆಯದಾಗಿ ಸ್ಥಾಪಕ ಅಧ್ಯಕ್ಷರಾದ ಶ್ರೀಪತಿರಾಯರು ಶಾಲೆ ಮತ್ತು ಮಕ್ಕಳನ್ನ ಉದ್ದೇಶಿಸಿ ಒಂದೆರಡು  ಮಾತುಗಳನ್ನಾಡಿದರು. ಆ ನಂತರ ಊರಿನ ಕೆಲವು ಗಣ್ಯ ವ್ಯಕ್ತಿಗಳು ಮಾತನಾಡಿ ತಮ್ಮಿಂದ ಆಗುವಷ್ಟು ಧನ ಸಹಾಯವನ್ನು ಶಾಲೆಯ ಉತ್ತರೋತ್ತರ ಅಭಿವೃದ್ಧಿಗೆ ನೀಡುವುದಾಗಿ ಭರವಸೆಯನ್ನಿತ್ತರು. ಕೊನೆಯದಾಗಿ ಅಧ್ಯಕ್ಷೀಯ ಭಾಷಣ, ರಾಮರಾಯರ ಮಾತನ್ನು ಕೇಳಲು ಎಲ್ಲರೂ ಕಾಯುತ್ತಿದ್ದರು ,ಸರಸಿ ಕೂಡ ತನ್ನ ಪುಟ್ಟ ಮಕ್ಕಳೊಂದಿಗೆ ಮುತ್ತುಲಕ್ಷ್ಮಿಯನೊಡಗೂಡಿ ಬಂದಿದ್ದಳು. ರಾಮರಾಯರು ಮೊದಲು ದೇವರನ್ನು ನೆನೆದು ,ಅತಿಥಿಗಳಿಗೆ ವಂದನೆಗಳನ್ನು ಅರ್ಪಿಸಿ, ನಮ್ಮ ಈ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಶ್ರೀಪತಿ ರಾಯರಿಂದ ಹಲವು ಮಕ್ಕಳ ಶಿಕ್ಷಣಕ್ಕೆ,ಅವರ ಉತ್ತಮ ಭವಿಷ್ಯಕ್ಕೆ ಉಪಕಾರವಾಗಿದೆ,ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ವೈದ್ಯರು, ಶಿಕ್ಷಕರು, ರಾಜಕಾರಣಿಗಳು ,ಹೀಗೆ ಹಲವಾರು ಹುದ್ದೆಗಳಿಗೆ ಏರಿ  ಶಾಲೆಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮಕ್ಕಳಿಗೆ ಕೃಷಿಯ ಬಗ್ಗೆ ಮಾಹಿತಿಯನ್ನು ನಾನು ಹಲವಾರು ಸಲ ನೀಡಿದ್ದೇನೆ," ಇಂದಿನ ಮಕ್ಕಳೇ ನಾಳಿನ ಪ್ರಜೆಗಳು" ಎನ್ನುವಂತೆ ಎಲ್ಲ ಮಕ್ಕಳು ಶಾಲೆಯ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಆ ನಿಟ್ಟಿನಲ್ಲಿ ...

ಸದಾಶಿವ - ಸಂಚಿಕೆ-18

Image
ಸದಾಶಿವ ಸಂಚಿಕೆ-18      ರಮೇಶನ ಕಡೆ ಕೈ ತೋರಿಸಿದಳು, ಗೌರಿಗೇನು ಮಾಡಿದೆ, ಎಂದು ಸದಾಶಿವ ಕೇಳಿದಾಗ ಆಕೆ ನನ್ನ ಕೈ ಚೀಲವನ್ನು ಮುಟ್ಟಿದ್ದಕ್ಕೆ ಹೊಡೆದೆ ಎಂದು ಅಸಡ್ಡೆಯಿಂದ ನುಡಿದಾಗ; ಸದಾಶಿವನ ಕೋಪ ನೆತ್ತಿಗೇರಿ, ರಮೇಶನ ಕೈ  ಚೀಲವನ್ನು ತುಂಡು ತುಂಡು ಮಾಡಿ ಬಿಸಾಡಿದ, ಸದಾಶಿವನ ರೌದ್ರಾವತಾರವನ್ನು ಕಂಡು ಬೆಚ್ಚಿದ ರಮೇಶ ಆಳತೊಡಗಿದ.ಅಷ್ಟರಲ್ಲಿ ತರಗತಿಗೆ ಬಂದ ಸುಶೀಲಾ ಟೀಚರ್ ರಮೇಶನನ್ನು ಏಕೆ ಅಳುತ್ತಿರುವೆ ಎಂದು ಪ್ರಶ್ನಿಸಿದಾಗ ,ಸದಾಶಿವ ನನ್ನ ಕೈ ಚೀಲ ಹರಿದ ಎಂದು ಅಳತೊಡಗಿದ. ತನ್ನ ಬಗ್ಗೆ ದೂರು ಹೇಳಿದ್ದನ್ನು ಕೇಳಿಸಿಕೊಂಡ ಸದಾಶಿವನಿಗೆ ಇನ್ನಷ್ಟು ಕೋಪ ಬಂದಿತ್ತು.ಸುಶೀಲಾ ಟೀಚರ್  ಸದಾಶಿವನ ಕೈಗೆರಡೇಟು ಕೊಟ್ಟು ಕೂರಿಸಿದರು.ತರಗತಿ ಮುಗಿಯುವುದನ್ನೇ ಕಾಯುತ್ತಿದ್ದ ಸದಾಶಿವ ರಮೇಶನ ಬೆನ್ನಿಗೆ ಮುಷ್ಠಿಬಿಗಿದು ಹೊಡೆದ. ಇನ್ನು ನನ್ನ ಮೇಲೆ ದೂರು ಹೇಳಿದರೆ ಹೆಚ್ಚಿಗೆ ಪೆಟ್ಟು  ತಿನ್ನುತ್ತೀಯಾ ಎಂದು ಬೆದರಿಸಿದ. ಪೆಟ್ಟಿನ ನೋವಿನಿಂದ ಬೆಚ್ಚಿಬಿದ್ದ ರಮೇಶ ಸದಾಶಿವನ ಮಾತಿಗೆ ತಲೆಯಲ್ಲಾಡಿಸಿದ. ಇತ್ತ ಗೌರಗೆ ತನಗಾಗಿ ಟೀಚರ್ ಕೈಯಿಂದ ಪೆಟ್ಟು ತಿಂದ ಸದಾಶಿವನ ಮೇಲೆ ಸ್ನೇಹದ ಭಾವನೆ ಯುಂಟಾಯಿತು..ನೀಟಾಗಿ ಜಡೆ ಹೆಣೆದುಕೊಂಡು, ಹಣೆಗೆ ಪುಟ್ಟ ಬಿಂದಿಯನ್ನಿಟ್ಟು , ಲಂಗ ದಾವಣಿಯಲ್ಲಿ ಬರುತ್ತಿದ್ದ ಗೌರಿಯನ್ನು ಕಂಡರೆ ಸದಾಶಿವನಿಗೆ ಅಚ್ಚುಮೆಚ್ಚು ,ಅವಳಲ್ಲಿ ಮಾತನಾಡುವ ಆಸೆಯಿದ್ದರೂ, ಹಿಂಜರಿಕೆಯಿಂದ ಸು...

ಸದಾಶಿವ - ಸಂಚಿಕೆ-17

Image
ಸದಾಶಿವ ಸಂಚಿಕೆ-17     ಪುಟ್ಟ ಪೋರ ಸದಾಶಿವ ಹೆದರಿ ಓಡಿಹೋಗಲಿಲ್ಲ,ತನ್ನನ್ನೇ ಕಚ್ಚಲು ಹವಣಿಸುತ್ತಾ ದಿಟ್ಟಿಸುತ್ತಿದ್ದ ಹಾವನ್ನೇ ತಾನು ಭಯವಿಲ್ಲದೆ  ದಿಟ್ಟಿಸತೊಡಗಿದ. ಇನ್ನೇನು ಹಾವು ಕಚ್ಚಬೇಕು ,ಆ ಹಾವಿನ ಕುತ್ತಿಗೆಯನ್ನು ಹಿಡಿಯಲು ಐದರ ಪೋರ ಕೈ ಮುಂದೆ ಚಾಚಿದ್ದ ,ಅಷ್ಟರಲ್ಲಿ  ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಮುತ್ತುಲಕ್ಷ್ಮಿ ಮೊಮ್ಮಗನೇಕೆ ಮೌನವಾಗಿ ಆಟವಾಡುತ್ತಿದ್ದಾನೆ ಎಂದು ನೋಡಲು ಬಂದಾಗ ಮಗುವಿನ ಬಳಿ ಹಾವಿರುವುದನ್ನು ಕಂಡು ಹೆದರಿ ಓಡಿ ಹೋಗಿ ಮಗುವನ್ನು ಎತ್ತಿಕೊಂಡು ದೂರ ನಿಂತರು. ಅಜ್ಜಿ ಬಂದ ರಭಸಕ್ಕೆ ಹಾವು ಹೆದರಿ ದೂರ ಹೊರಟು ಹೋಯಿತು. ಅಜ್ಜಿ ಬಾರದೇ ಇದ್ದ ಪಕ್ಷದಲ್ಲಿ ಸದಾಶಿವನ ಕೈಯಲ್ಲಿ  ಹಾವಿರುತ್ತಿತ್ತು ಇಲ್ಲವೇ, ಹಾವಿನ ಕೈಯಲ್ಲಿ ಪುಟ್ಟ ಮಗುವಿನ ಪ್ರಾಣವಿರುತ್ತಿತ್ತು. ಎಳವೆಯಲ್ಲಿ ಅಷ್ಟೊಂದು ಧೈರ್ಯಶಾಲಿಯಾಗಿದ್ದ ಸದಾಶಿವ, ಹೊಟ್ಟೆಬಾಕನೆಂದರೆ ತಪ್ಪಾಗಲಾರದು ,ಎಷ್ಟೇ ತಿಂದರೂ ಹಸಿವೆ ಎಂದು ಅಳುತ್ತಿದ್ದ ,ಐದರ ಪೋರ, ಹತ್ತು ವರ್ಷದ ಹುಡುಗನಂತೆ ದಷ್ಟಪುಷ್ಟವಾಗಿ ಬೆಳೆದಿದ್ದ. ಐದು ವರ್ಷ ವಾಯಿತೆಂದು ಮನೆಯವರೆಲ್ಲರೂ ಮಗುವನ್ನು ಶಾಲೆಗೆ ಸೇರಿಸುವ ತಯಾರಿ ನಡೆಸಿದ್ದರು.ಸದಾಶಿವನಿಗೆ ಬಹಳ ಉತ್ಸಾಹ ಶಾಲೆಗೆ ಸೇರುತ್ತೇನೆ ಎಂದು ಉತ್ಸಾಹದಿಂದ ಮನೆಯಿಡೀ ಓಡಾಡುತ್ತಿದ್ದ .ಇತ್ತ ಶ್ರೀಪತಿ ರಾಯರ ಮೊಮ್ಮಗಳು ಗೌರಿ ಕೂಡ ಮುದ್ದು ಮುದ್ದಾಗಿ ಮಾತನಾಡುತ್ತಾ ,ಚಿಗುರು ಕಂಗಳ ಕಣ್ಣುಗಳನ್...

ಸದಾಶಿವ - ಸಂಚಿಕೆ- 16

Image
ಸದಾಶಿವ ಸಂಚಿಕೆ- 16        ಮಾನವ ಜನ್ಮದಲ್ಲಿ ಒಳ್ಳೆಯತನದಿಂದ,ಪರೋಪಕಾರದಿಂದ ಬದುಕಿ ಬಾಳಬೇಕೆನ್ನುವುದು ಶ್ರೀಪತಿರಾಯರ ಮತ್ತು ರಾಮರಾಯರ ಆಕಾಂಕ್ಷೆಯಾಗಿತ್ತು. ಅದನ್ನು ಅವರ ಪೀಳಿಗೆ ಮುಂದುವರಿಸಿಕೊಂಡು ಹೋಗುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ಲವೇ?..ನೋಡೋಣ ಮುಂದೇನು ಕಾದಿದೆಯೋ, ಏನಾಗಲಿದೆಯೋ ಎಂಬುವುದನ್ನು...ಅಂತು ರಾತ್ರಿ ಕಳೆದು ಹಗಲಾಯಿತು.ಸರಸಿ ತನ್ನ ಗಂಡನ ಬರುವಿಕೆಗಾಗಿ ಕಾಯುತ್ತಿದ್ದಳು.ರಾಯರ ಕಾಲು ನೋವು ಕೂಡಾ ತಕ್ಕಮಟ್ಟಿಗೆ ಗುಣಹೊಂದಿತ್ತು,ತಾಯಿಯನ್ನು ಕೂಡಿಕೊಂಡು ಬೇರೊಬ್ಬರಿಂದ ಕಾರು ಚಲಾಯಿಸಲು ಹೇಳಿ ಪತ್ನಿಯ ಮನೆಗೆ ಬಂದಿದ್ದರು.ಬೀಗರ ಮನೆಯವರನ್ನು ಸರಸಿಯ ತಂದೆ ತಾಯಿ ಆದರದಿಂದ ಬರಮಾಡಿಕೊಂಡರು.ರಾಯರು ಬರುತ್ತಲೇ ನೇರವಾಗಿ ಪತ್ನಿಯ ಕೋಣೆಯತ್ತ ತೆರಳಿ ತನ್ನ ಮಗನನ್ನು ನೋಡಿದರು..ಮುದ್ದಾಗಿದ್ದ ವಂಶೋದ್ಧಾರಕನನ್ನು ಎತ್ತಿ ಅಪ್ಪಿಕೊಂಡರು.ಪುಟ್ಟ ಕೈಗಳಿಗೆ ಮುತ್ತನ್ನಿಡುತ್ತಾ ಎದೆಗೆ ಒರಗಿಸಿಕೊಂಡರು.ಹದಿನಾರನೇ ದಿನದಂದು ನಾಮಕರಣ ಶಾಸ್ತ್ರವನ್ನ  ಮಾಡೋಣವೆಂದು ಮನೆಯವರಲ್ಲಿ ಹೇಳಿದಾಗ ಎಲ್ಲರೂ ಒಪ್ಪಿಕೊಂಡರು.ನಾಮಕರಣ ಶಾಸ್ತ್ರಕ್ಕೆ ಎಲ್ಲರೂ ಕಾಯತೊಡಗಿದರು.. ನಿಮಿಷದಂತೆ ಹದಿನಾರನೇ ದಿನ ಬಂದೇಬಿಟ್ಟಿತು.ಎಲ್ಲರೂ ಸಿದ್ಧತೆ ಮಾಡತೊಡಗಿದರು. ಮುದ್ದಾದ ಮಗುವಿಗೆ ಏನು ಹೆಸರಿಡಬೇಕೆಂದು ಎಲ್ಲರೂ ಯೋಚಿಸುತ್ತಿರಬೇಕಾದರೆ ಸರಸಿಯ ತಾಯಿ ಲಕ್ಷ್ಮಮ್ಮ  *ಸದಾಶಿವ* ಎಂಬ ಹೆಸರನ್ನು ಸೂ...

ಸದಾಶಿವ - ಸಂಚಿಗೆ-15

Image
ಸದಾಶಿವ ಸಂಚಿಗೆ-15     ತಾವು ಯಾರೆಂದು ಮುತ್ತುಲಕ್ಷ್ಮಿ ಕೇಳಿದಾಗ, ನಾನು ಕೃಷ್ಣಪ್ಪನವರ ಸ್ನೇಹಿತ, ನಿಮ್ಮ ಸೊಸೆ ಸರಸಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಎಂದಾಗ ಮುತ್ತುಲಕ್ಷ್ಮಿಗೆ ಒಂದು ಕಡೆ ಸಂತಸವಾದರೂ! ಮಗದೊಂದು ಕಡೆ ಮಗ ಜಾರಿ ಬೀಳುವಂತಾಗಿದ್ದು ಈ ಮಗುವಿನ ಜನನದಿಂದ ಆಗಿರಬಹುದಾ ಎಂಬ ಶಂಕೆ ಕಾಡಿತು ,ಆದರೂ ಅದನ್ನು ಮುಖದಲ್ಲಿ ತೋರ್ಪಡಿಸಿಕೊಳ್ಳದೆ, ಬಂದ ಅತಿಥಿಯನ್ನು ಆದರಿಸಿ ಒಳ ಕರೆದು ಕೂರಿಸಿ ,ಚಹಾ ಮಾಡಿ ಕೊಟ್ಟರು. ಅಲ್ಲೇ ಸೋಫಾದಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದ ರಾಯರನ್ನು ಕಂಡು ಏನಾಯಿತೆಂದು ಕೇಳಿದಾಗ ,ತೆಂಗಿನ ಮರದಿಂದ ಬಿದ್ದದ್ದನ್ನು ಹೇಳಿದರು ,ಹಾಗೆಯೇ ನೀವು ಬಂದ ಕಾರಣವೇನು ಎಂದು ಕೇಳಿದಾಗ ಸರಸಿಗೆ ಗಂಡು ಮಗುವಾಗಿರುವ ವಿಚಾರವನ್ನು ತಿಳಿಸಿದರು. ರಾಯರಿಗೆ ಈ ವಿಚಾರವನ್ನು ಕೇಳಿದಾಗ ಆದ ಸಂತಸ ಅಷ್ಟಿಷ್ಟಲ್ಲ, ತಾಯಿಯ ಬಳಿ ನಾನೀಗಲೇ ಕಡಬಕ್ಕೆ ಹೊರಡುತ್ತೇನೆ ಎಂದು ಎದ್ದು ನಿಲ್ಲಲು ಪ್ರಯತ್ನಿಸಿದಾಗ, ನೋವಿನಿಂದ ಸೋಫಾದ ಮೇಲೆ ಕುಸಿದು ಬಿದ್ದರು, ಮಗನು ನೋವಿನಿಂದ ನರಳುತ್ತಿರುವುದನ್ನು ಕಂಡು ತಾಯಿ ಹೃದಯಕ್ಕೆ ಸಹಿಸಲಾಗಲಿಲ್ಲ ಇಂದು ಕಡಬಕ್ಕೆ ಹೊರಡುವುದು ಬೇಡವೇಬೇಡ ನಾಳೆ ನಿನ್ನ ಕಾಲುನೋವು ವಾಸಿಯಾಗುತ್ತದೆ ನಾಳೆ ಹೊರಟರಾಯಿತು ಎಂದು ಹೇಳಿದಾಗ, ರಾಯರು ಅರೆಮನಸ್ಸಿನಿಂದಲೇ ತಲೆಯಾಡಿಸಿದರು. ಬಂದ ಸೋಮನಲ್ಲಿ ಮಗನ ಪರಿಸ್ಥಿತಿಯನ್ನು ಹೇಳಿ ನಾಳೆ ಮಗುವನ್ನು ನೋಡಲು ಬರುತ್ತೇವೆ ಎಂದು ಹೇಳಿ ಕಳುಹಿಸಿದರು ಕೃಷ್...

ನೀರಾಟ - ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ

Image
ನೀರಾಟ      ನೀರೆಯರೆಲ್ಲಾ ನೀರಾಟವಾಡುವ ಸೊಗಸಾದ ಚಿತ್ರಣವು ಕಣ್ಣಮುಂದೆ ಬಂದಿದೆ ಈ ಹುಡುಗನಾಟವ ಕಂಡು.. ಹೆಂಗಳೆಯರು ಬಿಂದಿಗೆಯ ಹಿಡಿದುಕೊಂಡು ಬಿಂಕದಿ ಹೊರಟಿಹರು ಕೆರೆಯ ಕಡೆ,ಮಕ್ಕಳೂ ಬಂದರು ನೀರ ಕಡೆ.. ತಾಯಿಯ ಸೀರೆಯ ಬಲೆಯಂತೆ ಹರಡಿ ಹಿಡಿದರು ಪುಟ್ಟ ಮೀನುಗಳ,ಅಪ್ಪ ಖಾಲಿ ಮಾಡಿಟ್ಟ ಸಾರಾಯಿ ಶೀಶೆಯಲ್ಲಿ ತುಂಬಿಸಿ.. ಮೇಲಿನಿಂದ ಕೆಳಗೆ ಹಾರಿ ಜಿಗಿದರು ಮಂಗಗಳಂತೆ,ತಾಯಂದಿರ ಕೈಗಳಿಂದ ಬೈಸಿಕೊಂಡು ಆಟವಾಡತೊಡಗಿದರು.. ತಟ್ಟೆ ಹಿಡಿದು ತಲೆಗೆ ಸುರಿದ ನೀರಹನಿಯ ಮಳೆಯ ಸೆರೆಹಿಡಿದ ಛಾಯಚಿತ್ರಕಾರನಿಗೆ ನನ್ನ ನಮನ.. ನೀರೆಯರ ನಾಚಿಸಿದ ಬಾಲಕನ ನೀರಾಟವ,ನೋಡುವ ಚಂದ,ಅದ ನೋಡುವುದೇ ಕಣ್ಣಿಗಾನಂದ.. ✍🏻 ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ