ಸದಾಶಿವ - ಸಂಚಿಕೆ-32
ಸದಾಶಿವ
ಸಂಚಿಕೆ-32
ಅಲ್ಲಿ ಸದಾಶಿವ ರಂಗನಿಗೆ ನೀರು ಚುಮುಕಿಸಿ, ಎಬ್ಬಿಸಲು ಪ್ರಯತ್ನಿಸುತ್ತಿದ್ದ ,ಹೊಡೆದಾದ ಮೇಲೆ ಸದಾಶಿವನ ಕೋಪ ಇಳಿದಿತ್ತು .ರಂಗ ನಿಧಾನವಾಗಿ ಕಣ್ತೆರೆದಾಗ, ಬದುಕಿದ್ದಾನೆ ಎಂದು ಗೊತ್ತಾಯಿತು. ಅಷ್ಟರಲ್ಲಿ ಸುಬ್ರಹ್ಮಣ್ಯ ಸ್ವಾಮಿ ಕೂಡ ಕಾರಿನಲ್ಲಿ ಬಂದಿಳಿದ. ರಂಗನನ್ನು ಕಂಡು ಸುಬ್ರಹ್ಮಣ್ಯ ಸ್ವಾಮಿಗೆ ಗಾಬರಿಯಾಯಿತು. ಹೊಡೆದ ಕಾರಣವನ್ನು ಕೇಳಿದಾಗ ,ಕೆಲಸಗಾರರು ಹೇಳಿದ ವಿಚಾರದಿಂದ ಸದಾಶಿವ ಸರಿಯಾಗಿ ಮಾಡಿದನಂದುಕೊಂಡರು, ಆದರೆ ಇಷ್ಟೊಂದು ತೀವ್ರವಾಗಿ ಹೊಡೆಯಬಾರದಿತ್ತೆಂದು ಅನಿಸಿತು.ಕೂಡಲೇ ರಂಗನನ್ನು ಹೊತ್ತುಕೊಂಡು ಕಾರಿನಲ್ಲಿ ಆಸ್ಪತ್ರೆಯತ್ತ ತೆರಳಿದರು, ಇತ್ತ ಗಂಗಾಳಿಗೆ ಸದಾಶಿವ ರಂಗನಿಗೆ ಹೊಡೆದ ವಿಚಾರ ತಿಳಿಯಿತು. ಬೆದರಿದ ಗಂಗಾ ನೇರವಾಗಿ ಆಸ್ಪತ್ರೆಯತ್ತ ಹೊರಟಳು. ಅದು ಸರಕಾರಿ ಆಸ್ಪತ್ರೆಯಾಗಿತ್ತು.
ಆಸ್ಪತ್ರೆ ಮೆಡಿಸಿನ್ನ ವಾಸನೆಯಿಂದ ತುಂಬಿತ್ತು. ಕಾಲು ತುಂಡಾದ ,ಕುಷ್ಠ ರೋಗದ, ಜ್ವರದಿಂದ ನರಳುತ್ತಿದ್ದ ಹೀಗೆ ಹಲವಾರು ರೋಗಿಗಳ ಕೊಂಪೆಯಾಗಿತ್ತು. ನೆಲವಂತೂ ಧೂಳಿನಿಂದ ತುಂಬಿ ಎಷ್ಟೋ ವರ್ಷಗಳಿಂದ ಶುಚಿ ಮಾಡಿಲ್ಲವೇನೊ ಅನ್ನುವಂತಿತ್ತು.ಮೂಗು ಮುಚ್ಚಿಕೊಂಡೇ ಆಸ್ಪತ್ರೆ ಒಳಹೊಕ್ಕ ರಂಗನಿದ್ದ ವಾರ್ಡಿನ ಕಡೆ ಓಡಿದಳು. ಹಾಸಿಗೆಯ ಮೇಲೆ ಮಲಗಿದ್ದ ರಂಗನನ್ನು ನೋಡಿ, ತನ್ನದೇನೂ ತಪ್ಪಿಲ್ಲ ಎನ್ನುವಂತೆ ತಲೆ ಎತ್ತಿ ನಿಂತಿದ್ದ ಸದಾಶಿವ; ಪಕ್ಕದಲ್ಲೇ ಇದ್ದ ತನ್ನ ತಂದೆಯನ್ನು ಕಂಡ ಗಂಗಾ ತನ್ನ ತಂದೆಯ ಹತ್ತಿರ ಹೋದಳು, ಏನಾಯಿತೆಂದು ಕಣ್ಸನ್ನೆಯಲ್ಲೇ ಕೇಳಿದಾಗ ,ನಡೆದ ವಿಚಾರವನ್ನು ಅವಳಿಗೆ ಅರ್ಥವಾಗುವಂತೆ, ಅವಳದೇ ಭಾಷೆಯಲ್ಲಿ ಹೇಳಿದರು ,ಗಂಗಾಳಿಗೆ ಸದಾಶಿವನ ಮೇಲೆ ಹೆಚ್ಚಿನ ಅಭಿಮಾನ ಉಂಟಾಯಿತು. ಅಲ್ಲಿದ್ದ ಬಿಳಿ ಬಣ್ಣದ ಶರ್ಟ್ ಹಾಕಿಕೊಂಡ ವೈದ್ಯ ಸುಬ್ರಹ್ಮಣ್ಯ ಸ್ವಾಮಿಯ ಬಳಿ ಬಂದು ,ರಂಗನ ಪ್ರಾಣಕ್ಕೆ ಅಪಾಯವಿಲ್ಲ ಎಂದರು.ಇತ್ತ ಗೌರಿಯೂ ಸದಾಶಿವನನ್ನು ಹುಡುಕಿಕೊಂಡು ಆಸ್ಪತ್ರೆಯ ಬಳಿಯ ಅಂಗಡಿಯೊಂದರ ಬಳಿ ವಿಚಾರಿಸುತ್ತಿದ್ದಳು, ಆಗ
ಸದಾಶಿವ,ಗಂಗಾ ಸುಬ್ರಹ್ಮಣ್ಯಸ್ವಾಮಿ ಗೌರಿಯ ಕಣ್ಣ ಮುಂದೆಯೇ ಕಾರಿನಲ್ಲಿ ಹೊರಟು ಹೋದರು. ಆದರೆ ಗೌರಿ ಅಂಗಡಿಗೆ ಮುಖ ಮಾಡಿ ನಿಂತಿದ್ದಳು, ಮುಂದೆ ತಿರುಗಿದಾಗ ಅವರು ಹೊರಟು ಹೋಗಿದ್ದರು. ಆ ಸಂದರ್ಭದಲ್ಲಿ ಅವಳ ಮನಸ್ಸಿನಲ್ಲಿ ನನ್ನವರಾರು ಇಲ್ಲ, ನನ್ನ ಹೃದಯಕ್ಕೆ ಹತ್ತಿರದವರೊಬ್ಬರು ದೂರ ಹೋದ ಅನುಭವವಾಯಿತು. ಆದರೆ ಅಷ್ಟರಲ್ಲಿ ಸದಾಶಿವ ಅವಳಿಂದ ಬಲುದೂರ ಸಾಗಿ ಬಿಟ್ಟಿದ್ದ." *ಇಂದು ಸಿಗದವರು ನಾಳೆ
ಸಿಗುವರೆಂಬ ಭರವಸೆಯಲ್ಲಿ ,ಭವಿಷ್ಯದ ಕನಸುಗಳ ಕಟ್ಟಿಕೊಂಡು ಅದು ನನಸಾಗದೇ ಕನಸಿನಲ್ಲೇ ಸುಖಿಸುವವರು ಹಲವರು* "
ಗೌರಿ ಸದಾಶಿವನ ಹುಡುಕಾಟದಲ್ಲಿ ಒಂದು ತಿಂಗಳನ್ನೇ ವ್ಯಯಿಸಿದ್ದಳು. ಸದಾಶಿವನ ಕುರಿತಾಗಿ ಯಾವುದೇ ಮಾಹಿತಿಗಳು, ಸುಳಿವು ದೊರಕಲಿಲ್ಲ. ಮಡಿಕೇರಿಯಿಂದ ಹಿಂದಿರುಗುವ ದಿನವೂ ಬಂದಿತು. ಅತ್ತುಕೊಂಡೆ ಬಸ್ ಸ್ಟ್ಯಾಂಡಿಗೆ ಬಂದ ಗೌರಿ ,ಪಕ್ಕದಲ್ಲೇ ಇದ್ದ ಶಿವನ ದೇವಸ್ಥಾನಕ್ಕೆ ಹೋಗಿ ,ಇಂದಾದರೂ ಎನ್ನ ಸದಾಶಿವನ ದೊರೆಯುವಂತೆ ಮಾಡೆಂದು ಮೊರೆಯಿಟ್ಟಳು. ಅಲ್ಲಿ..
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡಬಿದಿರೆ

Comments
Post a Comment