ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಹೆಮ್ಮೆಯ ಭಂಡಾರಿ ಪ್ರತಿಭೆ - 4




        ನಮ್ಮ ಈ ವಾರದ ಭಂಡಾರಿ ಪ್ರತಿಭೆಯಾಗಿ ಸಂದೀಪ್ ಭಂಡಾರಿ ಬೆಳ್ತಂಗಡಿ    ಯವರನ್ನು ಪರಿಚಯಿಸುತ್ತಿರುವೆವು. 

          


          ಇವರು ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವರು.ಇವರು 8/7/1980ರಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಾಬೆಟ್ಟಿನಲ್ಲಿ ಜನಿಸಿದರು.ಇವರ ತಂದೆಯ ಹೆಸರು ರವಿಚಂದ್ರ ಭಂಡಾರಿ ತಾಯಿ ಗುಲಾಬಿ ಭಂಡಾರಿ.
ಇವರ ಪತ್ನಿ ಶ್ವೇತಾ ಭಂಡಾರಿ, ಮಗ  ಶ್ರೇಯನ್ವಿತ್ .   ಇವರು ನಮ್ಮ ಭಂಡಾರಿ ಕಸುಬನ್ನೇ ಅಳವಡಿಸಿಕೊಂಡು ಬಿಡುವಿನ ಸಮಯದಲ್ಲಿ ಸಂಗೀತವನ್ನು ಹಾಡಲು ಅಭ್ಯಾಸಿಸಿದರು.
     

 


           ವಿಶೇಷವೆಂದರೆ ತಾನೇ ಸ್ವಂತ ಪ್ರಯತ್ನ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವರು.
ಇವರು ಹಾಡಿದ ಚಂದಿರ ವದನವು ನಿನ್ನದೇ ಎಣ್ಣೆ ಹಾಡು ಸೂಪರ್ ಹಿಟ್ ಆಗಿದೆ.ಭಂಡಾರಿ ಯುವ ಸಂಗಮದ ಟೈಟಲ್ ಸಾಂಗ್ ಮತ್ತು ಸರಿಗಮ ಸಂಗಮ ಹಾಡು ಕೂಡಾ ಸೂಪರ್ ಹಿಟ್ ಆಗಿದೆ.

    


  https://youtu.be/qOCvG_0Tojw

  https://youtu.be/4rT1ReoymPU

  https://youtu.be/uUwVuQDMu-M

   https://youtu.be/qkvCHUDmoP0
     



           ಮದುವೆ, ಮದರಂಗಿ ಹಾಗೂ ಹಲವಾರು ಸಮಾರಂಭದಲ್ಲಿ ಇವರು ಹಾಡು ಹಾಡುವ ಮೂಲಕ ಜನರ ಮನ ಮುಟ್ಟಿರುವರು. ಇವರು ಬೆಳ್ತಂಗಡಿ ಜೆ.ಸಿ ಯವರ ಸ್ಪರ್ಧೆಯಲ್ಲಿ ಕಳೆದನಾಲ್ಕು ವರ್ಷದಿಂದ ಸಾಲಿನಲ್ಲಿ ಪ್ರಥಮ ಸ್ಥಾನ ವನ್ನು ಪಡೆದಿದ್ದಾರೆ. ಮಂಗಳೂರಿನ   ಟೌನ್ ಹಾಲ್ನಲ್ಲಿ ಏರ್ಪಡಿಸಿದ್ದ ಮೆರೇ ಅವಜ್ ಸುನೋ ಸಮಾರಂಭದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.



  ಇವರ ಹಾಡು ಇನ್ನಷ್ಟು ಪ್ರಸಿದ್ಧವಾಗಲಿ . ಇವರು ಜನಪ್ರಿಯವಾಗಿ ಎಲ್ಲರ ಮನಮುಟ್ಟಲಿಯೆಂದು ನಾವು  ದೇವರಲ್ಲಿ ಬೇಡುವ.


ವರದಿ: ರತೀಶ್ ಭಂಡಾರಿ ಕುಂಜಿಬೆಟ್ಟು

Comments

Popular posts from this blog

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32