ಸದಾಶಿವ. ಸಂಚಿಕೆ - 2
ಸದಾಶಿವ
ಸಂಚಿಕೆ - 2
ಕೆರೆಯಲ್ಲಿದ್ದ ನೀರು ಹಾವೊಂದು ಸರಸಿಯ ಕಾಲು ಸ್ಪರ್ಶಿಸಿದಾಗ ಅದನ್ನು ಕಂಡು ಭಯಭೀತಳಾದ ಸರಸಿ ಆಯತಪ್ಪಿ ಕೆರೆ ನೀರಿಗೆ ಬಿದ್ದು ಬಿಟ್ಟಳು, ಹಿಂದಿನ ದಿನವಷ್ಟೇ ಅತಿಯಾದ ಮಳೆಯಿಂದ ಕೆರೆ ನೀರು ತುಂಬಿತ್ತು ಸರಸಿ ಬಿದ್ದ ರಭಸಕ್ಕೆ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗುತ್ತಿದ್ದಳು ,ಇದನ್ನು ಕಂಡ ಸ್ನೇಹಿತೆಯರು ಕಾಪಾಡಿ ,ಕಾಪಾಡಿ, ಎಂದು ಕಿರುಚಾಡಿದರು, ಅಮ್ಮಾ ..ಎಂಬ ಕೂಗಿಗೆ ಕನಸಿನಲ್ಲಿ ವಿಹರಿಸುತ್ತಿದ್ದ ರಾಮರಾಯರು ಎಚ್ಚೆತ್ತು ಕೆರೆಯ ಕಡೆ ಓಡಿದರು. ಚೆನ್ನಾಗಿ ಈಜು ಕಲಿತಿದ್ದ ರಾಮರಾಯರು ಸರಸಿಯನ್ನು ರಕ್ಷಿಸಲು ನೀರಿಗೆ ಧುಮುಕಿ, ಎತ್ತಿಕೊಂಡು ಬಂದರು. ಕೆರೆ ದಂಡೆಯ ಮೇಲೆ ಮಲಗಿಸಿ ಪ್ರಜ್ಞಾಹೀನಳಾದ ಸರಸಿಯ ಚೆಂದದ ಮೊಗವನ್ನೇ ನೋಡುತ್ತಾ ಇದ್ದುಬಿಟ್ಟರು.ಓಡಿಬಂದಸರಸಿಯ ಸ್ನೇಹಿತೆಯರ ಮಾತಿನಿಂದ ಎಚ್ಚೆತ್ತ ರಾಮರಾಯರು ಅವಳ ಗೆಳತಿಯರಲ್ಲೊಬ್ಬಳಲ್ಲಿ ಹೊಟ್ಟೆಯನ್ನು ಅದುಮಿ ನೀರು ತೆಗೆಯಲು ಹೇಳಿದಾಗ , ಆಕೆ ಹಾಗೆಯೇ ಮಾಡಿದಳು. ಬಾಯಿಂದ ನೀರು ಹೊರ ಬಿದ್ದ ತಕ್ಷಣ ಎಚ್ಚೆತ್ತ ಸರಸಿ ನಿಧಾನವಾಗಿ ಕಣ್ಣು ತೆರೆದು ನೋಡಿದಾಗ ಮುಖದ ಪಕ್ಕದಲ್ಲೇ ಕುಳಿತು ತನ್ನನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ರಾಮರಾಯರ ಮುಖ ಕಂಡಿತ್ತು .ಅವರನ್ನು ಕಂಡ ಸರಸಿ ಲಜ್ಜೆಯಿಂದ ನಾಚಿಕೊಂಡಳು, ರಾಮರಾಯರು ಸ್ಫುರದ್ರೂಪಿ ಯುವಕ, ಬಲಿಷ್ಠವಾದ ಮೈಕಟ್ಟು, ಎಂತಹ ಸುಂದರ ಹೆಣ್ಣಾದರೂ ಒಮ್ಮೆ ತಿರುಗಿ ನೋಡಬೇಕೆನಿಸುವ ರೂಪವಂತ. ಸರಸಿ ನಾಚಿಕೊಂಡದ್ದರಲ್ಲಿ ತಪ್ಪೇನಿಲ್ಲ ಬಿಡಿ. ರಾಮರಾಯರು ಮತ್ತು ಸರಸಿ ಕಣ್ಣೋಟದಲ್ಲೇ ಮುಳುಗಿರುವುದನ್ನು ಕಂಡು ಭಾಸ್ಕರನಿಗೂ ಸಹಿಸಲಾಗಲಿಲ್ಲ ಕಾಣಬೇಕು ಬಿಸಿಲ ಸ್ಪರ್ಶವನ್ನು ಇಬ್ಬರ ಮೇಲೂ ಹರಿಸಿದಾಗ ಕಣ್ಣು ಮುಚ್ಚಿಕೊಂಡರು. ಹಾಗೂ ಹೀಗೂ ಇಬ್ಬರು ಎಚ್ಚೆತ್ತು ,ಸರಸಿ ತಡಬಡಿಸಿ ಎದ್ದು ಸ್ನೇಹಿತೆಯರಲ್ಲಿ ನಾವಿನ್ನು ಹೊರಡೋಣ ಎಂದು ಸರಸರನೆ ನಡೆದು ಬಿಟ್ಟಳು.ಅವಳು ಹೋದತ್ತಲೇ ನೋಡುತ್ತಿದ್ದ ರಾಮ ರಾಯರಿಗೆ ಬೇಸರವಾಯಿತು, ಪ್ರಾಣ ಕಾಪಾಡಿ ರಕ್ಷಿಸಿದ್ದಕ್ಕೆ ಒಂದು ಕೃತಜ್ಞತೆಯ ಮಾತೂ ಹೇಳದೆ ಹೋದಳಲ್ಲ ಈ ಹೆಣ್ಣು ಎಂದು.. ಆದರೆ ನಾಚಿಕೆಯಿಂದ ಏನೊಂದು ಮಾತನಾಡದೇ ಹೊರಟ ಸರಸಿಗೆ ತಾನು ಧನ್ಯವಾದವನ್ನು ಹೇಳದೆ ಬಂದೆ ಎಂದರಿವಾದಾಗ ಖೇದವಾಯಿತು ಮಗದೊಮ್ಮೆ ಆತ ಸಿಕ್ಕಲ್ಲಿ ಕೃತಜ್ಞತೆ ತಿಳಿಸಬೇಕೆಂದು ಮನಸ್ಸಿನಲ್ಲೇ ಅಂದುಕೊಂಡಳು..
ಇತ್ತ ರಾಮರಾಯರು ಒದ್ದೆ ಬಟ್ಟೆಯಲ್ಲಿಯೇ ತನ್ನೂರಿಗೆ ಹೊರಟರು, ರಾಮರಾಯರ ತಾಯಿ ಮುತ್ತುಲಕ್ಷ್ಮಿ ಮಗನ ಕೈಯಿಂದ ಪ್ರಸಾದವನ್ನು ತೆಗೆದುಕೊಂಡು ರಾತ್ರಿಯ ಊಟಕ್ಕೆ ಕುಳಿತುಕೊಳ್ಳಲು ಹೇಳಿ ಅಡುಗೆ ಮನೆಗೆ ಹೋದರು. ರಾಮರಾಯರು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದಿದ್ದರು ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿ ಪಾಸ್ತಿ ಕುಳಿತು ತಿನ್ನುವಷ್ಟಿತ್ತು ಆದರೆ, ತಾಯಿಯೊಬ್ಬಳನ್ನು ಬಿಟ್ಟು ,ರಾಮರಾಯರಿಗೆ ಹೇಳಿಕೊಳ್ಳುವಂಥ ಬಂಧುಗಳಾರು ಇರಲಿಲ್ಲ, ಒಳ್ಳೆಯ ಹೆಸರು ,ಗುತ್ತಿನ ಮನೆಯವರೆಂಬ ಗೌರವ ರಾಯರನ್ನು ಉನ್ನತಿಗೇರಿಸಿತ್ತು..ತಂದೆ ಮಾಡಿದ ಆಸ್ತಿಯನ್ನೇ ಕುಳಿತು ತಿನ್ನುವ ಜಾಯಮಾನ ರಾಮರಾಯರದಲ್ಲ.ಕಾಲೇಜಿಗೂ ಹೋಗಿ ಉನ್ನತ ಶಿಕ್ಷಣವನ್ನು ಮಾಡಿ, ಕೃಷಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ತನ್ನೂರಿನಲ್ಲಿ ಕೃಷಿ ಕ್ರಾಂತಿಯನ್ನು ಮಾಡಿ ಉತ್ತಮ ರೈತ ಎಂಬ ಪ್ರಶಸ್ತಿಯನ್ನು ಪಡೆದುಕೊಂಡು, ತೋಟಗಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಮುನ್ನುಡಿಯನ್ನು ಬರೆದವರು ರಾಮರಾಯರು, ಊರಿಗೆ ಉಪಕಾರಿ ಎನಿಸಿಕೊಂಡು, ತಾನು ಬೆಳೆದ ಬೆಳೆಯಲ್ಲಿ ಬೇಕಾದಷ್ಟು ಲಾಭವನ್ನು ಪಡೆದುಕೊಂಡು ತಂದೆ ಮಾಡಿದ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಂಡಿದ್ದರು, ಊಟಕ್ಕೆ ಕುಳಿತ ರಾಮರಾಯರು ಮಧ್ಯಾಹ್ನ ನಡೆದ ಘಟನೆಯನ್ನು ಮೆಲುಕು ಹಾಕುತ್ತಿದ್ದರು ,ಅಷ್ಟರಲ್ಲಿ ತಾಯಿಯ ಕರೆ ಅವರನ್ನು ಎಚ್ಚರಿಸಿತ್ತು ,ಏನೆಂದು ಅತ್ತ ತಿರುಗಿದಾಗ......
ಮುಂದುವರಿಯುವುದ.....
ನಾಗಶ್ರೀ.ಎಸ್. ಭಂಡಾರಿ
ಮೂಡಬಿದಿರೆ

Comments
Post a Comment