ಸದಾಶಿವ - ಸಂಚಿಕೆ-17
ಸದಾಶಿವ
ಸಂಚಿಕೆ-17
ಪುಟ್ಟ ಪೋರ ಸದಾಶಿವ ಹೆದರಿ ಓಡಿಹೋಗಲಿಲ್ಲ,ತನ್ನನ್ನೇ ಕಚ್ಚಲು ಹವಣಿಸುತ್ತಾ ದಿಟ್ಟಿಸುತ್ತಿದ್ದ ಹಾವನ್ನೇ ತಾನು ಭಯವಿಲ್ಲದೆ ದಿಟ್ಟಿಸತೊಡಗಿದ. ಇನ್ನೇನು ಹಾವು
ಕಚ್ಚಬೇಕು ,ಆ ಹಾವಿನ ಕುತ್ತಿಗೆಯನ್ನು ಹಿಡಿಯಲು ಐದರ ಪೋರ ಕೈ ಮುಂದೆ ಚಾಚಿದ್ದ ,ಅಷ್ಟರಲ್ಲಿ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಮುತ್ತುಲಕ್ಷ್ಮಿ ಮೊಮ್ಮಗನೇಕೆ ಮೌನವಾಗಿ ಆಟವಾಡುತ್ತಿದ್ದಾನೆ ಎಂದು ನೋಡಲು ಬಂದಾಗ ಮಗುವಿನ ಬಳಿ ಹಾವಿರುವುದನ್ನು ಕಂಡು ಹೆದರಿ ಓಡಿ ಹೋಗಿ ಮಗುವನ್ನು ಎತ್ತಿಕೊಂಡು ದೂರ ನಿಂತರು. ಅಜ್ಜಿ ಬಂದ ರಭಸಕ್ಕೆ ಹಾವು ಹೆದರಿ ದೂರ ಹೊರಟು ಹೋಯಿತು. ಅಜ್ಜಿ ಬಾರದೇ ಇದ್ದ ಪಕ್ಷದಲ್ಲಿ ಸದಾಶಿವನ ಕೈಯಲ್ಲಿ ಹಾವಿರುತ್ತಿತ್ತು ಇಲ್ಲವೇ, ಹಾವಿನ ಕೈಯಲ್ಲಿ ಪುಟ್ಟ ಮಗುವಿನ
ಪ್ರಾಣವಿರುತ್ತಿತ್ತು. ಎಳವೆಯಲ್ಲಿ ಅಷ್ಟೊಂದು ಧೈರ್ಯಶಾಲಿಯಾಗಿದ್ದ ಸದಾಶಿವ,
ಹೊಟ್ಟೆಬಾಕನೆಂದರೆ ತಪ್ಪಾಗಲಾರದು ,ಎಷ್ಟೇ ತಿಂದರೂ ಹಸಿವೆ ಎಂದು ಅಳುತ್ತಿದ್ದ ,ಐದರ ಪೋರ, ಹತ್ತು ವರ್ಷದ ಹುಡುಗನಂತೆ ದಷ್ಟಪುಷ್ಟವಾಗಿ ಬೆಳೆದಿದ್ದ. ಐದು ವರ್ಷ ವಾಯಿತೆಂದು ಮನೆಯವರೆಲ್ಲರೂ ಮಗುವನ್ನು ಶಾಲೆಗೆ ಸೇರಿಸುವ ತಯಾರಿ ನಡೆಸಿದ್ದರು.ಸದಾಶಿವನಿಗೆ ಬಹಳ ಉತ್ಸಾಹ ಶಾಲೆಗೆ ಸೇರುತ್ತೇನೆ ಎಂದು ಉತ್ಸಾಹದಿಂದ ಮನೆಯಿಡೀ ಓಡಾಡುತ್ತಿದ್ದ .ಇತ್ತ ಶ್ರೀಪತಿ ರಾಯರ ಮೊಮ್ಮಗಳು ಗೌರಿ ಕೂಡ ಮುದ್ದು ಮುದ್ದಾಗಿ ಮಾತನಾಡುತ್ತಾ ,ಚಿಗುರು ಕಂಗಳ ಕಣ್ಣುಗಳನ್ನು ಅರಳಿಸುತ್ತಾ ಸುಂದರವಾಗಿ ಬೆಳೆದಿದ್ದಳು, ಅವಳನ್ನು ಶಾಲೆಗೆ ಸೇರಿಸುವ ಯೋಚನೆಯನ್ನು ಶ್ರೀಪತಿ ರಾಯರು ಮಾಡಿದ್ದರು. ಸಾಲೆತ್ತೂರಿನಲ್ಲಿ ಒಂದೇ ಒಂದು ಸರಕಾರಿ ಪ್ರಾಥಮಿಕ ಶಾಲೆಯಿತ್ತು, ಎಲ್ಲ ಮಕ್ಕಳು ಅಲ್ಲಿ ಕಲಿಯುತ್ತಿದ್ದರು. ರಾಮರಾಯರು ಆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ರಾಗಿದ್ದರೆ ,ಶ್ರೀಪತಿ ರಾಯರು ಆ ಶಾಲೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಈ ಈರ್ವರು ವ್ಯಕ್ತಿಗಳಿಂದ ಆ ಶಾಲೆಯು ಪ್ರಸಿದ್ಧಿಯನ್ನು ಪಡೆದಿತ್ತು ,ಆ ಶಾಲೆಯ ಮಕ್ಕಳು ಶಿಕ್ಷಣದಲ್ಲಿ, ಸಾಂಸ್ಕೃತಿಕ ಚಟುವಟಿಕೆಯಲ್ಲಿ, ಕ್ರೀಡೆ,ಎಲ್ಲ ಕ್ಷೇತ್ರಗಳಲ್ಲೂ ರಾಜ್ಯ ,ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದರು.ಈಗ ರಾಯರು ತಮ್ಮ ಮಗನನ್ನು ,ಶ್ರೀಪತಿ ರಾಯರು ತಮ್ಮ ಮೊಮ್ಮಗಳನ್ನು ,ಅದೇ ಶಾಲೆಗೆ ಸೇರಿಸಿದ್ದರು. ಸದಾಶಿವ ಗೌರಿ ಈರ್ವರು ಒಂದೇ ತರಗತಿಯಲ್ಲಿ ಕಲಿಯುವಂತಾಯಿತು.ಸದಾಶಿವನಿಗಂತೂ ಶಾಲೆಗೆ ಹೋಗುವುದೆಂದರೆ ಬಲು ಖುಷಿ..ತಾಯಿ ಕಟ್ಟಿ ಕೊಟ್ಟ ಬುತ್ತಿಯನ್ನೂ ,ಚರ್ಮದ ಚೀಲದಲ್ಲಿ ತುರುಕಿ ಮನೆಯಿಂದ ತಂದೆಯ ಕಾರಿನಲ್ಲೇ ಹೋಗುತ್ತಿದ್ದ. ಸದಾಶಿವ ಸ್ವಲ್ಪ ಒರಟನಾದರೂ, ಉಪಕಾರಿಯಾಗಿದ್ದ.ತಾನ ದೊಡ್ಡ ಹೊಟ್ಟೆಬಾಕನಾದರೂ ಇತರರು ಯಾರಾದರೂ ಹೊಟ್ಟೆಗಿಲ್ಲವೆಂದು,ಹಸಿವೆ ಎಂದು ಅಳುತ್ತಿದ್ದರೆ ತನ್ನ ಬುತ್ತಿಯಿಂದ ತೆಗೆದು ಕೊಡುತ್ತಿದ್ದ.ಅಂತೆಯೇ ಯಾರಾದರೂ ಕೈಯಿಂದ ಹೊಡೆಯಲು ಬಂದರೆ ಇವನು ಬಳಪದಿಂದಲೇ ಅವರ ತಲೆಗೆ ಹೊಡೆಯುತ್ತಿದ್ದ. ಮನೆಯವರೆಲ್ಲರಿಗೂ ಸದಾಶಿವನ ಮುಂಗೋಪದ್ದೇ ಚಿಂತೆಯಾಗಿತ್ತು. ತಾಯಿಯ ಕೈಯಿಂದ ಎಷ್ಟೇ ಪೆಟ್ಟು ತಿಂದರೂ ಸದಾಶಿವ ಬದಲಾಗಿರಲಿಲ್ಲ.ಆದರೆ ತಾಯಿ ತಂದೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ. ತಾಯಿ ಒಂದು ಹನಿ ಕಣ್ಣೀರು ಹಾಕಿದರೂ ಸಹಿಸುತ್ತಿರಲಿಲ್ಲ ,ತಂದೆಗೆ ಯಾರಾದರೂ ಜೋರು ಧ್ವನಿಯಿಂದ ಮಾತನಾಡಿದರೆ ಆ ಪುಟ್ಟ ಪ್ರಾಯದಲ್ಲೇ ಕೆಂಗಣ್ಣಿನಿಂದ ನೋಡುತ್ತಿದ್ದ.ಹೀಗೆ ಒಂದು ದಿನ ಶಾಲೆಯಲ್ಲಿ ಗೌರಿ ಅಳುತ್ತಾ ಕುಳಿತಿದ್ದಳು, ಏನಾಯಿತೆಂದು ಸದಾಶಿವ ಕೇಳಿದಾಗ..
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments
Post a Comment