ಸದಾಶಿವ - ಸಂಚಿಕೆ -26
ಸದಾಶಿವ
ಸಂಚಿಕೆ -26
ಕೊನೆಯ ಪುಟದ ತುಂಬೆಲ್ಲಾ ಗೌರಿಯ ವಿಚಾರವೇ ತುಂಬಿತ್ತು. ತಂದೆ ,ತಾಯಿ ,ತಮ್ಮ ,
ತಂಗಿಯಂದಿರ ಹೊರತಾಗಿ ನಾನು ಅತಿಯಾಗಿ ಇಷ್ಟಪಡುವ ವ್ಯಕ್ತಿ ಎಂದರೆ ಅದು ಗೌರಿ, ಚಿಕ್ಕಂದಿನಿಂದಲೇ ನನಗೆ ಅವಳೆಂದರೆ ಬಲು ಇಷ್ಟ .ಅವಳ ಮುಗ್ಧ ಮುಖ, ಪಟಾಕಿಯಂತೆ ಸಿಡಿಮಿಡಿಗುಟ್ಟುವ ಕೋಪ, ನಕ್ಕಾಗ ಗುಳಿ ಬೀಳುವ ಕೆನ್ನೆ ,ಅರಳು ಹುರಿದಂತ ಮಾತು, ನನ್ನ ಕಂಡಾಗಲೆಲ್ಲಾ ಉಕ್ಕೇರುವ ಪ್ರೀತಿ, ಕೆಂಪಾಗುವ ಕೆನ್ನೆ, ನನಗಾಗಿ ಕಾಯುತ್ತಾ ಕುಳಿತುಕೊಳ್ಳುವ ಅವಳ ಅತಿಶಯ ಪ್ರೀತಿ ,ನನ್ನ ಅವಳೆಡೆಗೆ ಸೆಳೆಯುತ್ತಲೇ ಹೋಯಿತು.ನನ್ನ ಹೃದಯವೂ ಅವಳ ಬರುವಿಕೆಗಾಗಿ ಕಾಯುತ್ತಿತ್ತು. ಆದರೆ ಅವಳ ಜತೆ ಸುತ್ತಾಡಬೇಕು ,ಕುಳಿತು ಮಾತನಾಡಬೇಕು,ಎಂಬ ಬಯಕೆಯನ್ನು ಹತ್ತಿಕ್ಕಿಕೊಂಡಿದ್ದೆ. ನನಗೆ ಅವಳ ಮೇಲಿರುವ ಪ್ರೇಮವನ್ನು ಹೇಳಿಕೊಳ್ಳಬೇಕು, ಅವಳ ಜೊತೆ ಏಳು ಹೆಜ್ಜೆಯನ್ನಿಟ್ಟು ನಡೆಯಬೇಕು ,ಅವಳ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು, ಹೀಗೆ ಗೌರಿಯ ಕುರಿತಾಗಿ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದೆ ,ಆದರೆ ಜಾತಿ ಬೇರೆ ಬೇರೆಯಾಗಿತ್ತು, ಹಿರಿಯರು ನಮ್ಮ ವಿವಾಹಕ್ಕೆ
ಒಪ್ಪಿಕೊಳ್ಳದಿದ್ದರೆ ಎನ್ನುವ ಅಂಜಿಕೆಯಿಂದ ಮನಸ್ಸು ಹಿಂದೆ ಸರಿಯುತ್ತಿತ್ತು. ಎಂಬುದಾಗಿ ಡೈರಿಯಲ್ಲಿ ಬರೆದಿದ್ದ.ಗೌರಿಗೆ ಈ ವಿಚಾರವನ್ನೆಲ್ಲಾ ಓದಿದಾಗ ಸದಾಶಿವನ ಮೇಲಿನ ಪ್ರೇಮ ಇಮ್ಮಡಿಸಿತು.'ಸದಾ' ನನ್ನು ಹುಡುಕಲೇಬೇಕು, ಎಂದುಕೊಂಡು ಡೈರಿಯನ್ನು ಮಡಚಿ ಒಳಗಿಟ್ಟಳು.ಅಷ್ಟರಲ್ಲಿ ಸರಸಿ ಚಹಾವನ್ನು ತಂದುಕೊಟ್ಟಳು. ಚಹಾವನ್ನು ಕುಡಿದು,ಲೋಟವನ್ನು ಹಿಂದಿರುಗಿಸಿ ಅಂದು ಸದಾಶಿವ ಎಷ್ಟು ಗಂಟೆಗೆ ಮನೆ ಬಿಟ್ಟಿದ್ದ ಎಂದು ಕೇಳಿದಾಗ ,ಸಂಜೆ ಐದು ಗಂಟೆಗೆ,ನಂತರ ಕಾಣಲಿಲ್ಲ ಎಂದಾಗ, ಐದು ಗಂಟೆಯ ನಂತರ ಹೊರಡುವ ಬಸ್ಸು ಎತ್ತ ಕಡೆ ಹೊರಡುತ್ತದೆ ಎಂದು ಪರಿಚಯದವರಲ್ಲಿ ಕೇಳಿದಾಗ ,ಮಡಿಕೇರಿಗೆ ಎಂದರು.ಸದಾಶಿವನನ್ನ ಅರಸಿಕೊಂಡು ಮಡಿಕೇರಿಯ
ಬಸ್ಸನ್ನೇರಿದಳು. ಇತ್ತ ಸುಬ್ರಹ್ಮಣ್ಯ ಸ್ವಾಮಿಯ ಎಲ್ಲ ಕಾರ್ಯಗಳು ಸದಾಶಿವನ ಮುತುವರ್ಜಿಯಿಂದಲೇ ನಡೆಯುತ್ತಿತ್ತು..ಎಸ್ಟೇಟಿನ ಎಲ್ಲ ವ್ಯವಹಾರಗಳು, ಕೆಲಸಗಾರರ ಸಂಬಳ, ಎಸ್ಟೇಟಿನ ಗಿಡಮರಗಳ ಪಾಲನೆ ,ಪೋಷಣೆ, ಇವೆಲ್ಲದರ ಕೆಲಸಗಳು ಸದಾಶಿವನ ಮುಂದಾಳತ್ವದಿಂದಲೇ ನಡೆಯುತ್ತಿತ್ತು.ಸದಾಶಿವ ಬಂದ ಕೆಲವೇ ದಿನಗಳಲ್ಲಿ ಎಸ್ಟೇಟ್ ಮಧುಮಗನ ಮೊಗದ ಕಳೆಯಂತೆ ಸುಂದರವಾಗಿತ್ತು. ಸುಬ್ರಹ್ಮಣ್ಯ ಸ್ವಾಮಿಯ ಸಂಪತ್ತಿನಲ್ಲೂ ಏರಿಕೆ ಉಂಟಾಗಿತ್ತು. ಗಂಗಾಳ ಮೇಲೆ ಸುಬ್ರಹ್ಮಣ್ಯ ಸ್ವಾಮಿಗೆ ಅಪಾರವಾದ ಪ್ರೀತಿ, ಮಗಳು ಕೇಳಿದ್ದನ್ನೆಲ್ಲ ತಂದು ಕೊಟ್ಟಿದ್ದರು ,ಆದರೆ ಗಂಗಾ ಯಾವತ್ತೂ ತನಗೇನು ಬೇಕು ,ಬೇಡ ಎಂದು ಹೇಳುತ್ತಿರಲಿಲ್ಲ. ಅವಳು ಕೇಳುವುದಕ್ಕಿಂತ ಮೊದಲೇ ಅವಳ ತಂದೆ ತಂದುಕೊಡುತ್ತಿದ್ದರು, ಗಂಗಾ ತುಂಬಾ ಸೌಮ್ಯ ಸ್ವಭಾವದ ಹುಡುಗಿ, ಆದರೆ ಆ ಒಂದು ಘಟನೆ ಅವಳ ಜೀವನದ ದಿಕ್ಕನ್ನೇ ಬದಲಾಯಿಸಿತ್ತು..
ಮುಂದುವರಿಯುವುದು..
✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments
Post a Comment