ಸದಾಶಿವ- ಸಂಚಿಕೆ- 23

ಸದಾಶಿವ

ಸಂಚಿಕೆ- 23
 
 ಎದ್ದು ನಿಂತು ರಾಯರ ಮೇಲೆ ರೇಗಿದ, ನಿಮಗೇನ್ರಿ ಗೊತ್ತು; ಕೃಷಿಯ ಬಗ್ಗೆ ಎಂದು ಸವಾಲು ಹಾಕಿದಾಗ, ರಾಯರು ಸರಿ ನಾವಿಬ್ಬರೂ ಕೃಷಿಯ ಬಗ್ಗೆ ಮಾತನಾಡೋಣ, ಯಾರಿಗೆ ಎಷ್ಟು ಗೊತ್ತು ಎಂದು ಅದರಿಂದ ತಿಳಿಯುತ್ತದೆ ಎಂದಾಗ, ಜಯರಾಮ ಒಪ್ಪಿಕೊಂಡ. ನಿಜವಾಗಿಯೂ ಜಯರಾಮ್ ಗೆ ಕೃಷಿಯ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ ,ಆದರೂ ಗರ್ವದಿಂದ ಒಪ್ಪಿಕೊಂಡಿದ್ದ ,ಸರಿ ಎಂದು ರಾಯರು ಒಂದೆಕರೆ ಜಮೀನಿನಲ್ಲಿ ಎಷ್ಟು ಕ್ವಿಂಟಾಲ್ ಅಕ್ಕಿ ಸಿಗಬಹುದು ಎಂದು ಪ್ರಶ್ನಿಸಿದಾಗ, ಜಯರಾಮ ಉತ್ತರಿಸಲು ತಡಬಡಿಸಿದ, ಗದ್ದೆಗಿಳಿದು ನಾಟಿ ಮಾಡಲು, ಉಳುಮೆ ಮಾಡಲು, ನಿನಗೆ ಬರುವುದದಾ ಎಂದು ಕೇಳಿದಾಗ ಗದ್ದೆಗೆ ಇಳಿಯದ ಜಯರಾಮ್ ಹೇಗೆ ತಾನೇ ಉತ್ತರಿಸಿಯಾನು, ರಾಯರು ಕೇಳಿದ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಜಯರಾಮ್ ಸುಮ್ಮನಿದ್ದ, ಕೊನೆಗೆ ರೋಷದಿಂದ ರಾಯರನ್ನು ಕೆಕ್ಕರಿಸಿಕೊಂಡು ನೋಡಿ, ನಿನ್ನನ್ನು ಮುಂದೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೊರಟು ಹೋದ. ಈರಣ್ಣನಿಗೆ ಸಹಾಯ ಮಾಡಿದ ರಾಯರು ಮುಂದೆ ದೊಡ್ಡ ಬೆಲೆಯನ್ನೇ ತೆರುವಂತಹ ಕಷ್ಟವೂ ಅವರಿಗೆ ಒದಗುವ ಸೂಚನೆ ಜಯರಾಮನಿಂದ ದೊರಕಿತು. ಹೀಗೆ ವರುಷ ಕಳೆದು ಇಪ್ಪತ್ತೈದು ವರ್ಷದ ಸದೃಢ ಯುವಕನಾದ ಸದಾಶಿವ, ರಾಯರ ಹನ್ನೆರಡು ಮಕ್ಕಳು ಕೂಡ ಮುದ್ದಾಗಿದ್ದರು ,ಆರು ಗಂಡು ಮಕ್ಕಳು ಮತ್ತು ಆರು ಹೆಣ್ಣು ಮಕ್ಕಳ ಕೂಡು ಕುಟುಂಬ ರಾಯರದ್ದಾಗಿತ್ತು.ರಾಯರ ಐದು ಗಂಡು ಮಕ್ಕಳು ಸದಾಶಿವನಂತೆ ಬಲಶಾಲಿಯಾಗಿದ್ದರು.ರಾಯರ ಮೊದಲ ತಮ್ಮ ವಿಕ್ರಾಂತ್ ಎಸ್.ಎಲ್.ಸಿ ಶಿಕ್ಷಣವನ್ನು ಮುಗಿಸಿ,ತಂದೆ ತಾಯಿಯಲ್ಲಿ ಹೇಳದೆ ತನ್ನ ಸ್ನೇಹಿತರೊಂದಿಗೆ ದೂರದ ಮುಂಬಯಿಗೆ ಹೊರಟು ಹೋಗಿದ್ದ.ಆದರೆ ಹೋದವ ಹಿಂದಿರುಗಿ ಬಾರಲೇ ಇಲ್ಲ.ಮುಂಬಯಿಯಂಥ ಮಾಯಾ ನಗರಿಯಲ್ಲಿ ವಿಕ್ರಾಂತ್ ನಂಥ ಗುಬ್ಬಚ್ಚಿಯನ್ನು ಹುಡುಕಲು ಕಷ್ಟವೇ..ಅಂದಿನ ಕಾಲದಲ್ಲಿ ದೂರದೂರಿಗೆ ಹೋದವರು ಹಿಂತಿರುಗಿ ಬರುವುದೇ ಪ್ರಶ್ನೆಯಾಗುತ್ತಿತ್ತು.ಹೆಚ್ಚಿನವರು ತಮ್ಮವರು ಬರುತ್ತಾರೆ ಎನ್ನುವ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದರು.
ಒಬ್ಬ ಮಗ ಮುಂಬಯಿಗೆ ಹೋದವ ಹಿಂದಿರುಗಿ ಬಾರದೆ ಇದ್ದದ್ದು,ಸರಸಿ ಮತ್ತು ರಾಮರಾಯ ದಂಪತಿಗಳಿಗೆ ಅತೀವ ನೋವಿನ ವಿಷಯವಾಗಿತ್ತು.ತಮ್ಮ ಮನೆ ಬಿಟ್ಟು ಹೋದ ನಂತರ ಸದಾಶಿವನಿಗೂ ಏನೋ ಒಂದು ವಿಧಧ ನೋವಾಗಿತ್ತು.ಉತ್ಸಾಹದಿಂದ ಕೃಷಿ ಕೆಲಸಗಳಲ್ಲಿ ಸಕ್ರಿಯನಾಗಿದ್ದವನು  ಉತ್ಸಾಹಹೀನನಾಗಿಬಿಟ್ಟ.ಸದಾಶಿವನಿಗೆ ತಮ್ಮ ವಿಕ್ರಾಂತ್ ನಲ್ಲಿ ಹೆಚ್ಚಿನ ಒಡನಾಟವಿದ್ದಿತು.ಹಾಗಾಗಿ ಸದಾಶಿವನು ಮಂಕಾಗಿದ್ದ.ಒಂದು ದಿನ ಹೇಳದೆ ಕೇಳದೆ ಮನೆಬಿಟ್ಟು ಹೋದ ಸದಾಶಿವ ಎರಡು ದಿನವಾದರೂ  ಬರಲಿಲ್ಲ,ಒಬ್ಬ ಮಗನಿಂದಲೇ ದೂರವಾಗಿ ನೊಂದಿದ್ದ ಸರಸಿ ರಾಮರಾಯರಿಗೆ ಸದಾಶಿವನ ಕಣ್ಮರೆಯು ನೋವನ್ನುಂಟು ಮಾಡಿತ್ತು.ಸದಾಶಿವನ ಪ್ರಯಾಣ ಆತನ ಜೀವನದ ದಿಕ್ಕನ್ನೇ ಬದಲಿಸುತ್ತದೆ ಎಂಬ ಕಲ್ಪನೆ ಕೂಡಾ ಅವನಿಗಿರಲಿಲ್ಲ.ಜೀವನವೇ ಹೀಗೆ ಕೆಲವೊಂದು ಪ್ರಯಾಣ,ಕೆಲವೊಂದು ವ್ಯಕ್ತಿಗಳು ಮಾಸದ ಸಿಹಿ ನೆನಪನ್ನು ನೀಡುತ್ತಾರೆ,ಇನ್ನು ಕೆಲವರು ಕಹಿಯನ್ನು ನೀಡುತ್ತಾರೆ,ದೂರದೂರಿನ ಪ್ರಯಾಣ,ಸದಾಶಿವನ ಯಾನ ಯಾವ ಕಡೆ ಸೇರುತ್ತದೋ,ಸದಾಶಿವ ಯಾವ ಗಮ್ಯವನ್ನ  ಮುಟ್ಟುತ್ತಾನೋ ದೇವರೆ ಬಲ್ಲ..

ಮುಂದುವರಿಯುವುದು

✍🏻 ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32