ಸದಾಶಿವ - ಸಂಚಿಕೆ-20
ಸದಾಶಿವ
ಸಂಚಿಕೆ-20
ಅಲ್ಲಿ ಸದಾಶಿವನ ಇರಲಿಲ್ಲ,ಗಣೇಶನೂ ಇರಲಿಲ್ಲ ,ಬಲ
ಭೀಮನಂತಿದ್ದ ಸದಾಶಿವನಿಗೆ ಎರೆ ಹುಳುವಿನಂತ ಸಣಕಲು ಗಣೇಶನನ್ನು ಎತ್ತಿಕೊಂಡು ಹೋಗುವುದು ಕಷ್ಟದ ಕೆಲಸವಾಗಿರಲಿಲ್ಲ ,
ಸದಾಶಿವ ರಕ್ತ ಕಂಡು ಭಯಭೀತನಾದರೂ ಮತ್ತೆ ಧೈರ್ಯದಿಂದ ಗಣೇಶನನ್ನು ಎತ್ತಿಕೊಂಡು ,ಶಾಲೆಗೆ ಹತ್ತಿರವಿದ್ದ ,ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ,ಪ್ರಥಮ ಚಿಕಿತ್ಸೆ ಮಾಡಿಸಿದ. ವೈದ್ಯರು ಗಣೇಶನ ತಲೆಗೆ ಬ್ಯಾಂಡೇಜ್ ಸುತ್ತಿ ಪ್ರಜ್ಞಾಹೀನನಾಗಿದ್ದ ಗಣೇಶನನ್ನು ಎಬ್ಬಿಸಲು ಪ್ರಯತ್ನಿಸಿದರು. ಅಂತೂ ಗಣೇಶ ನಿಧಾನವಾಗಿ ಕಣ್ತೆರೆದ, ಸದಾಶಿವನಿಗೆ ಗಣೇಶ ಎಚ್ಚರಗೊಂಡಿದ್ದನ್ನು ಕಂಡ ತಕ್ಷಣ ಹೋದ ಜೀವ ಮತ್ತೆ ಬಂದಂತಾಯಿತು. ಇತ್ತ ಅಧ್ಯಾಪಕರುಗಳು, ಮಕ್ಕಳು, ಪೋಷಕರು, ರಾಯರು ಮತ್ತು ಅವರ ಕುಟುಂಬದವರು ವೇಷ ಧರಿಸುವ ಕೊಠಡಿಯತ್ತ ಬಂದಾಗ ,ಎಲ್ಲೂ ಸದಾಶಿವ ಗಣೇಶ ಕಾಣದ್ದನ್ನು ಕಂಡು ಇನ್ನಷ್ಟು ಭಯಗೊಂಡರು. ಅಂದಿನ ವಾರ್ಷಿಕೋತ್ಸವವು ಸದಾಶಿವನಿಂದಾಗಿ ನಿಂತಿತು .ಎಲ್ಲರೂ ಗಣೇಶ ಸದಾಶಿವನನ್ನು ಹುಡುಕುವುದರಲ್ಲಿ ಮಗ್ನರಾದರು.ಆದರೆ ಈರ್ವರ ಸುಳಿವು ಯಾರಿಗೂ ಕಾಣಲಿಲ್ಲ, ಅಷ್ಟರಲ್ಲಿ ಏಳನೇ ತರಗತಿಯ ಒಬ್ಬ ಹುಡುಗ ಸದಾಶಿವ ಗಣೇಶನನ್ನು ಶಾಲೆಯ ಹಿಂಬದಿಯ ಗೇಟಿನಿಂದ ಎತ್ತಿಕೊಂಡು ಹೋದ, ಎಂದಾಗ ಎಲ್ಲರೂ ಅತ್ತ ಕಡೆ ಓಡಿದರು.ಅಲ್ಲೇ ಇರುವ ಸರಕಾರಿ ಆಸ್ಪತ್ರೆಯ ಒಳಹೊಕ್ಕು ನೋಡಿದಾಗ ಸದಾಶಿವ ಬೆಂಚಿನ ಮೇಲೆ ಮುದುರಿ ಕುಳಿತುಕೊಂಡಿದ್ದ .ತನ್ನ ಮಗನಿಂದಾದ ತೊಂದರೆಗೆ ಸಿಟ್ಟಿಗೆದ್ದಿದ್ದ ರಾಯರಿಗೆ ಮಗನನ್ನು ಕಂಡ ತಕ್ಷಣ ಸಿಟ್ಟು ನೆತ್ತಿಗೇರಿ ,ಬೆಂಚಿನ ಮೇಲೆ ಕುಳಿತಿದ್ದವನ ತಲೆ ಕೂದಲನ್ನು ಹಿಡಿದು, ಬೆನ್ನನ್ನು ಬಾಗಿಸಿ ಗುದ್ದಿದರು. ಬೆನ್ನನ್ನು ತಂದೆಯಲ್ಲದೆ ಬೇರೆ ಯಾರದರೂ ಸದಾಶಿವನಿಗೆ ಆ ರೀತಿ ಹೊಡೆದಿದ್ದರೆ ಅವರ ಸಾವಾಗುತ್ತಿತ್ತು.ಎಲ್ಲಿ ಗಣೇಶ ಎಂದು ರಾಯರು ಕೋಪದಿಂದ ಕೇಳಿದಾಗ ಗಣೇಶನಿದ್ದ ವಾರ್ಡಿನತ್ತ ಕೈ ತೋರಿಸಿದ.ಎಲ್ಲರೂ ಅತ್ತ ಓಡಿದರು,ಗಣೇಶ ನೋವಿನಿಂದ ಅಳುತ್ತಿದ್ದ.ಆಗ ಗಣೇಶನ ತಾಯಿ ತಂದೆ ಮುಂದೆ ಬಂದು, ಮಗನನ್ನು ಸಮಾಧಾನಿಸಿದರು. ಆ ಸಂದರ್ಭದಲ್ಲೂ ಸರಸಿ ತನ್ನ ಮಗನ ಸಮಯ ಪ್ರಜ್ಞೆಯನ್ನು ಮೆಚ್ಚಿಕೊಂಡಳು. ಅಳುತ್ತಿದ್ದ ಸದಾ ಶಿವನನ್ನು ಕರೆದುಕೊಂಡು ರಾಯರು ಮನೆಗೆ ಹೊರಟರು, ಅದಕ್ಕಿಂತ ಮೊದಲು ಗಣೇಶನ ಪೋಷಕರು, ಶಾಲೆಯಆಡಳಿತ ಮಂಡಳಿ,ಶಿಕ್ಷಕರಲ್ಲಿ ಕ್ಷಮೆಯಾಚಿಸಿದರು.ತನ್ನಿಂದಾಗಿ ತಂದೆ ತಾಯಿ ತಗ್ಗಿಸುವಂತೆ ಆಯಿತಲ್ಲ ಎಂದು ಸದಾಶಿವನಿಗೆ ನೋವು ಕಾಡುತ್ತಿತ್ತು. ಮರುದಿನ ಸದಾಶಿವ ಮನೆಯವರೊಂದಿಗೆ ಮಾತನಾಡದೆ ಮೌನಿಯಾಗಿ ಬಿಟ್ಟ .ಅಜ್ಜಿ ಊಟ ಕೊಟ್ಟರೂ ಬೇಡವೆಂದು ತೋಟದ ಕಡೆ ಹೊರಟು ಹೋದ. ಅಲ್ಲೇ ಪ್ರಕೃತಿ ಮಾತೆಯ ಮಡಿಲಲ್ಲಿ ತಿಳಿನೀರ ಕೊಳವೊಂದಿತ್ತು .ಅದರ ಪಕ್ಕದ ಕಲ್ಲು ಬಂಡೆಯ ಮೇಲೆ ಕುಳಿತು ನೀರಿಗೆ ಕಲ್ಲು ಬಿಸಾಡತೊಡಗಿದ. ಮಗ ಎಲ್ಲಿಯೆಂದು ಹೊರಗೆ ಕೆಲಸ ಮುಗಿಸಿ ಬಂದ ರಾಯರು ಕೇಳಿದಾಗ ,ಊಟವನ್ನು ಮಾಡದೆ ತೋಟಕ್ಕೆ ಹೋದನೆಂದು ಹೇಳಿದಾಗ ,ರಾಯರಿಗೂ ನಿನ್ನೆ ಮಗನಿಗೆ ಹೆಚ್ಚಾಗಿ ಹೊಡೆದಿದ್ದೇನೆ ಎಂಬ ನೋವು ಉಂಟಾಗಿ, ತೋಟದ ಕಡೆ ಹೊರಟರು. ಕೊಳದ ಬಳಿ ಕುಳಿತು ಯೋಚಿಸಿದ್ದನ್ನು ಗಮನಿಸಿ ,ಹಿಂದಿನಿಂದ ಬಂದು ಹೆಗಲ ಮೇಲೆ ಕೈ ಹಾಕಿ 'ಸದಾ' ಎಂದು ಕರೆದಾಗ ಹಾ! ಎಂದತ್ತ ತಿರುಗಿದ.
ಮುಂದುವರಿಯುವುದು
ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ

Comments
Post a Comment