ಸದಾಶಿವ - ಸಂಚಿಕೆ - 25
ಸದಾಶಿವ
ಸಂಚಿಕೆ - 25
ಗೌರಿ ಹರಕೆಯ ಕುರಿಯಂತೆ ತಲೆ ಬಾಗಿಸಿಕೊಂಡು ವರ ಕುಮಾರನ ಮುಂದೆ ಬಂದು ನಿಂತಳು. ಚಂದನದ ಗೊಂಬೆ, ಚಿನ್ನದ ಪುತ್ಥಳಿ ಯಂತೆಯೇ ಯೌವ್ವನ ಕಾಂತಿಯಿಂದ ಅರಳಿ ನಿಂತಿದ್ದ ಗೌರಿಯನ್ನು ಕುಮಾರ ತಿನ್ನುವಂತೆ ನೋಡತೊಡಗಿದ. ಕುಮಾರನ ಆಸೆ ಕಂಗಳ ನೋಟದಿಂದ ಗೌರಿಗೆ ಕಸಿವಿಸಿ ಉಂಟಾಯಿತು. ಕುಮಾರನ ಮನೆಯವರು ಗೌರಿಯ ಮನೆಯವರ ಅಂತಸ್ತು, ಐಶ್ವರ್ಯ ,ಶ್ರೀಪತಿರಾಯರಿಗೆ ಊರಿನಲ್ಲಿರುವ ಗೌರವ, ಗೌರಿಯ ರೂಪ ಇವಲ್ಲಾ ಆಸೆ ಹುಟ್ಟಿಸಿತು. ಸಂತಸದಿಂದಲೇ ಗೌರಿಯನ್ನು ಒಪ್ಪಿಕೊಂಡ ಮನೆಯವರು ,ವಿವಾಹದ ದಿನ ನಿಗದಿ ಮಾಡಿ ಹೊರಟು ನಿಂತರು. ಮೊದಲು ನೋಡಿದ ಹುಡುಗನೇ ಮಗಳನ್ನು ಒಪ್ಪಿಕೊಂಡ ಎಂದು ಗೌರಿಯ ತಂದೆ ತಾಯಿ ಹರುಷದಿಂದ ನಲಿದರು. ಆದರೆ ಗೌರಿಗೆ ಕುಮಾರನನ್ನು ಕಂಡಾಗ ಅಸಹ್ಯವಾಯಿತೇ ಹೊರತು ಪ್ರೀತಿ ಉಂಟಾಗಲಿಲ್ಲ. ಆ ಸಂದರ್ಭದಲ್ಲಿ ಗೌರಿಗೆ ಸದಾಶಿವನ ನೆನಪಾಯಿತು,ನನ್ನ ಪ್ರೇಮವನ್ನು ಸದಾಶಿವನ ಬಳಿ ಹೇಳಿಕೊಳ್ಳುವುದಕ್ಕಿಂತ ಮೊದಲೇ ಊರನ್ನು ಬಿಟ್ಟು ಹೊರಟು ಹೋದ ಎಂದು ಅಳುತ್ತಾ ಕುಳಿತುಕೊಂಡಳು. ಮದುವೆಗೆ ಇನ್ನೂ ಮೂರು ತಿಂಗಳು ಬಾಕಿ ಇತ್ತು.ಅಷ್ಟರಲ್ಲಿ ಸದಾನನ್ನ ಹುಡುಕಬೇಕು ಎಂದು ಧೃಡ ನಿರ್ಧಾರ ಮಾಡಿಕೊಂಡು, ಮನೆಯವರಲ್ಲಿ ಬೆಂಗಳೂರಿಗೆ ಹೋಗಿ ಬರುತ್ತೇನೆ, ಒಂದು ತಿಂಗಳು ಕೆಲಸ ಮಾಡಿ ನಂತರ ಕೆಲಸಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಾಗ ,ಮಗಳು ಮದುವೆಗೆ ಒಪ್ಪಿರುವುದೇ ದೊಡ್ಡ ವಿಷಯ ಎಂದುಕೊಂಡ ಮನೆಯವರು ಒಪ್ಪಿಗೆಯನ್ನೂ ನೀಡಿದರು. ಸೂಟ್ಕೇಸಿನಲ್ಲಿ ಕೆಲವು ಬಟ್ಟೆಗಳನ್ನು ತುರುಕಿ , ಸದಾಶಿವನ ಮನೆಯತ್ತ ನಡೆದಳು .ಅಲ್ಲಿ ರಾಯರು ಮತ್ತು ಸರಸಿ ಒಬ್ಬ ಮಗನಿಂದ ದೂರವಾಗಿ ನೊಂದಿದ್ದರು. ಪ್ರೀತಿಯ ಮೊದಲ ಮಗ ಸದಾಶಿವ ಕೂಡಾ ಮನೆ ಬಿಟ್ಟು ಹೊರಟದ್ದು ಇನ್ನಷ್ಟು ದುಃಖಕ್ಕೀಡು ಮಾಡಿತು.ಶ್ರೀಪತಿ ರಾಯರ ಮೊಮ್ಮಗಳ ಪರಿಚಯವಿದ್ದ ರಾಯರ ಮನೆಯವರು ಗೌರಿಯನ್ನು ಕಂಡು ಆದರದಿಂದ ಬರಮಾಡಿಕೊಂಡರು. ಒಳ ಹೋಗಿ ಕುಳಿತ ಗೌರಿಗೆ ಮನೆಯನ್ನು ನೋಡತೊಡಗಿದಳು. ಅಲ್ಲಿ ರಾಯರ ಕುಟುಂಬದ ಭಾವಚಿತ್ರವಿತ್ತು.ಸದಾಶಿವ ಮುದ್ದಾಗಿ ಕಾಣುತ್ತಿದ್ದ ಆ ಚಿತ್ರದಲ್ಲಿ,ಸರಸಿಯ ಜೊತೆಗೆ ಸಲಿಗೆಯಿಂದಿದ್ದ ಗೌರಿ ಸರಸಿಯ ಬಳಿ ಬಂದು,ಆಂಟಿ 'ಸದಾ'ನ ಕೋಣೆ ಯಾವುದು ಎಂದು ಕೇಳಿದಾಗ, ಚಿಕ್ಕಂದಿನಿಂದಲೂ ಗೆಳೆಯರಾಗಿದ್ದ ಗೌರಿ ಮತ್ತು ಸದಾಶಿವನ ಬಗ್ಗೆ ಸರಸಿಗೂ ತಿಳಿದಿತ್ತು. ಹಾಗಾಗಿ ಸದಾಶಿವನ ಕೋಣೆಗೆ ಕರೆದುಕೊಂಡು ಹೋದಳು. ಹೊರಗಿನಿಂದಲೇ ಕೋಣೆಯತ್ತ ನೋಡಿದಾಗ ಬಿಳಿದಾದ ವಸ್ತ್ರದ ಹೊದಿಕೆಯಿರುವ ಮಂಚವಿತ್ತು.ಮಂಚದ ಮುಂದುಗಡೆ ದೇವರ ಫೋಟೋವೊಂದಿತ್ತು. ಬಳಿಯೇ ಬಟ್ಟೆ
ಮಡಚಿಡುವ ಅಲ್ಮೆರಾ ವಿತ್ತು..ಪಕ್ಕದಲ್ಲೊಂದು ಹಳೆಯ ಟ್ರಂಕಿತ್ತು . ಕೋಣೆಯತ್ತಲೇ ನೋಡುತ್ತಿದ್ದ ಗೌರಿಯನ್ನು ಕಂಡ ಸರಸಿ ಒಳ ಹೋಗಿ ಕುಳಿತಿರು, ಚಹಾ ಮಾಡಿ ತರುತ್ತೇನೆಂದು ಹೇಳಿ ಅಡುಗೆ ಕೋಣೆಯತ್ತ ತೆರಳಿದಳು. ಮಂಚದ ಬಳಿ ಇದ್ದ ಟೇಬಲ್ಲಿನ ಮೇಲೆ ಕೃಷಿಗೆ ಸಂಬಂಧಪಟ್ಟ ಕೆಲವೊಂದು ಪುಸ್ತಕಗಳಿದ್ದವು, ಸದಾಶಿವನಿಗೆ ಡೈರಿ ಬರೆಯುವ ಅಭ್ಯಾಸವಿತ್ತು. ಡೈರಿ ಪುಸ್ತಕದ ತುಂಬೆಲ್ಲಾ ತಾನು ಮಾಡಬೇಕಾದ ಕೆಲಸಗಳು ,ಶಾಲಾ ದಿನಗಳ ನೆನಪುಗಳು, ತಂದೆ ,ತಾಯಿ ,ತಮ್ಮ ತಂಗಿಯಂದಿರ ಬಗ್ಗೆ ಬರೆದಿದ್ದ ಕೊನೆಯ ಪುಟ ತೆರೆದು ಓದಿದಾಗ ಗೌರಿಯ ಕಣ್ಣಂಚು ಒದ್ದೆಯಾಗಿತ್ತು,....
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments
Post a Comment