ಸದಾಶಿವ - ಸಂಚಿಕೆ-22
ಸದಾಶಿವ
ಸಂಚಿಕೆ-22
ರಾಯರ ಮನೆಗೆ ಒಬ್ಬ ಮಧ್ಯವಯಸ್ಕ ಬಂದ, ಅವನಿಗೆ ರಾಯರೆಂದರೆ ಬಲು ಗೌರವ ,ಆತನ ಬಳಿ ಒಂದೆಕರೆ ಜಮೀನಿತ್ತು. ಅದರಲ್ಲಿ ಆ ವರ್ಷದ ಬೆಳೆ ಬೆಳೆಯಲಾಗಿತ್ತು. ಆದರೆ ಆತನ ಜಮೀನಿನ ಮೇಲೆ ಒಬ್ಬ ಶ್ರೀಮಂತನ ಕಣ್ಣು ಬಿದ್ದಿತ್ತು..ಆತ ಈ ಜಮೀನು ನನ್ನದು, ನನಗೆ ಬರೆದುಕೊಡಿ ,ಎಂದು ಪಾಪದ ಈರಣ್ಣನನ್ನು ಹಿಂಸಿಸತೊಡಗಿದ. ಈ ವಿಚಾರವಾಗಿ ಮಧ್ಯಸ್ಥಿಕೆಗೆ ಆ ಊರಿನ ದೇವಾಲಯದ ಆಡಳಿತ ಮೊಕ್ತೇಸರರನ್ನು ಕರೆದಿದ್ದ. ಬಡವ ಈರಣ್ಣನಿಗೆ ಗೊತ್ತಿತ್ತು ,ಈ ಮಧ್ಯಸ್ಥಿಕೆಯಿಂದ ನನಗೆ ನ್ಯಾಯ ದೊರಕದು ಎಂದು; ಅದಕ್ಕಾಗಿ ತನ್ನ ಪರ ಮಾತನಾಡಲು ರಾಯರೇ ಸರಿ ಎಂದು ಅವರ ಬಳಿಗೆ ಬಂದಿದ್ದ. ರಾಯರಿಗೆ ಪಕ್ಕದೂರಿನ ದೇವಸ್ಥಾನದ ಆಡಳಿತ ಮಂಡಳಿಯ ಮೋಕ್ತೇಸರ ಪ್ರಭಾವಿ ವ್ಯಕ್ತಿ ,ಮತ್ತು ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡವರೆಂದು ಗೊತ್ತಿತ್ತು. ಹಾಗಾಗಿ ರಾಯರು ಈರಣ್ಣನ ಜೊತೆ ಬರಲು ಒಪ್ಪಲಿಲ್ಲ, ಇತ್ತ ಈರಣ್ಣ ಪಟ್ಟು ಬಿಡದೆ ಬೆಳಿಗ್ಗೆ ಬಂದವನು ರಾತ್ರಿ ಕಳೆದರೂ ರಾಯರ ಮನೆಯಿಂದ ಹೊರಡಲಿಲ್ಲ ,ರಾಯರಿಗೆ ಈರಣ್ಣನ ಮೇಲೆ ಕರುಣೆ ಬಂದು,ಮರುದಿನ ಬೆಳಿಗ್ಗೆ ಈರಣ್ಣನ ಜೊತೆಗೆ ಪಕ್ಕದೂರಿಗೆ ಹೊರಟರು, ಅಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಅತಿ ಎತ್ತರದ ಆಸನದಲ್ಲಿ ಕುಳಿತಿದ್ದರು, ಸಾತ್ವಿಕ ಮುಖದಲ್ಲಿ ಅದೇನೋ ಅಹಂ ತುಂಬಿತ್ತು ,ನಾನೇ ಎಲ್ಲಾ ಎನ್ನುವ ಭಾವನೆ ಕಣ್ಣುಗಳಲ್ಲಿದ್ದವು.ಆ ವ್ಯಕ್ತಿಯ ಸುತ್ತಲೂ ಬೇರೆ ಬೇರೆ ಕಡೆಯಿಂದ ಬಂದಿದ್ದ ಗಣ್ಯ ವ್ಯಕ್ತಿಗಳು ಕುಳಿತಿದ್ದರು ,ಈರಣ್ಣನ ವಿರುದ್ಧ ದೂರು ನೀಡಿದ್ದ ಶ್ರೀಮಂತ ವ್ಯಕ್ತಿಯೂ ಆ ಗುಂಪಿನಲ್ಲಿದ್ದ.ರಾಯರು ಮತ್ತು ಈರಣ್ಣ ಇಬ್ಬರು ಅಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ಕಾಣುತ್ತಿದ್ದರು. ಆದರೆ ರಾಯರ ಮುಖ ಪ್ರಶಾಂತವಾಗಿಯೇ ಇತ್ತು. ಕೆಲವರು ಹಣ ,ಆಸ್ತಿ ಇದ್ದವರಿಗೆ ಕೊಡುವ ಮರ್ಯಾದೆಯನ್ನು ,ಸತ್ಯ ನ್ಯಾಯ ನೀತಿಗೆ ಕೊಡುವುದಿಲ್ಲ ,ಆದರೆ ರಾಯರಂಥವರು ಎಂದಿಗೂ ವ್ಯಕ್ತಿಯಲ್ಲಿರುವ ಒಳ್ಳೆಯತನಕ್ಕೆ ಮಾತ್ರ ಬೆಲೆ ಕೊಡುತ್ತಾರೆ.
ಆತನಲ್ಲಿರುವ ಹಣ ,ಆಸ್ತಿ ಘನತೆ ನೋಡಿ ಅಲ್ಲ... ಹಾಗಾಗಿ ರಾಯರಿಗೆ ಮೊಕ್ತೇಸರರನ್ನು ಕಂಡು ಭಯವಾಗಲಿಲ್ಲ.ಈಗ ಆಡಳಿತ ಮೊಕ್ತೇಸರ ನರೇಂದ್ರ ಶೆಟ್ಟಿಯವರು, ಈರಣ್ಣನನ್ನು ಉದ್ದೇಶಿಸಿ, ನಿನ್ನ ಜಮೀನಿಗೆ *ಬೆಳ್ಳಿಯ ಬೇಲಿ ಹಾಕಿಸಿ ಚಿನ್ನದ ಬೆಳೆಯನ್ನು ತೆಗೆಯುತ್ತೇನೆ*" ಎಂದು ಉದ್ಧಟತನದಿಂದ ನುಡಿದರು. ಆಗ ಈರಣ್ಣ ಅವರ ಮನಸ್ಸಿಗೆ ತುಂಬಾ ನೋವಾಯಿತು,ಆಗಲೂ ರಾಯರು ಏನೂ ಮಾತನಾಡದೆ ಸುಮ್ಮನಿದ್ದರು.ಸ್ವತಃ ತಾವೇ ಮುಂದುವರಿದು ಮಾತನಾಡಿದ ನರೇಂದ್ರ ಶೆಟ್ಟಿಯವರು, ನಿಮ್ಮ ಅಭಿಪ್ರಾಯವೇನು ಎಂದು ರಾಯರಲ್ಲಿ ಕೇಳಿದಾಗ ಆ ಪ್ರಶ್ನೆಯನ್ನೇ ಕಾಯುತ್ತಿದ್ದವರಂತೆ, ನಿಮ್ಮ ದೇವಸ್ಥಾನದ ದೇವಿ ಮತ್ತು ದೈವಗಳು ನನ್ನದಾಗಿದ್ದರೆ ನಾನು ಕೂಡ ನಿಮ್ಮಂತೆ *ಬೆಳ್ಳಿಯ ಬೇಲಿ ಹಾಕಿ ಚಿನ್ನದ ಬೆಳೆಯನ್ನೇ ತೆಗೆಯುತ್ತಿದ್ದೆ* ಎಂದು ಪ್ರತಿಸವಾಲು ಹಾಕಿದರು. ಈ ಉತ್ತರದಿಂದ ವಿಚಲಿತರಾದ ,ನರೇಂದ್ರ ಶೆಟ್ಟಿಗೆ ಮುಜುಗರವೇ ಆಯಿತು.ನಾನು ಈ ಊರಿನಲ್ಲಿ ಗಣ್ಯ ವ್ಯಕ್ತಿಯಾಗಿ ಇರುವುದು ದೇವಸ್ಥಾನದಿಂದ ಬರುತ್ತಿರುವ ಹಣ ಮತ್ತು ಭಕ್ತರ ಗೌರವದಿಂದ ಎನ್ನುವುದರ ಅರಿವು ರಾಯರ ಮಾತಿನಿಂದ ಶೆಟ್ಟಿಯವರಿಗೆ ಆಯಿತು, ಅಷ್ಟರಲ್ಲಿ ಅವರು ತಣ್ಣಗಾಗಿಬಿಟ್ಟಿದ್ದರು.
ಜಮೀನನ್ನು ಈರಣ್ಣನಿಗೆ ಬಿಟ್ಟುಕೊಡುವಂತೆ ಬಂದತಹ ಶ್ರೀಮಂತ ವ್ಯಕ್ತಿಯಲ್ಲಿ ಹೇಳಿದರು.ನರೇಂದ್ರಶೆಟ್ಟಿಯವರಿಗೆ ಒಳ್ಳೆಯ ಹೃದಯವಿತ್ತು. ಆದರೆ ಸ್ವಲ್ಪ ಅಹಂಕಾರವಿತ್ತು .,ಆ ಅಲ್ಪ ಸ್ವಲ್ಪ ಅಹಂಕಾರವೂ ರಾಯರಿಂದ ದೂರವಾಯಿತು,ಆಗ ಆ ಶ್ರೀಮಂತ ವ್ಯಕ್ತಿ ಜಯರಾಮ್..
ಮುಂದುವರಿಯುವುದು
ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ

Comments
Post a Comment