ಸದಾಶಿವ - ಸಂಚಿಕೆ - 65
*ಸದಾಶಿವ*
*ಸಂಚಿಕೆ- 65*
ಜೀವನದಲ್ಲಿ ಕೆಲವು ವ್ಯಕ್ತಿಗಳು ನಮಗೆ ನೆನಪುಗಳನ್ನು ನೀಡುತ್ತಾರೆ,
ಅದರಲ್ಲೂ ಬಾಲ್ಯದಲ್ಲಿ ನಮ್ಮ ಶತ್ರುಗಳಾಗಿ, ಮುಂದೆ ಅಪರಿಚಿತರಾಗಿ ಹೋಗುವವರೇ ಜಾಸ್ತಿ; ಅಂತಹವರಲ್ಲಿ ರಮೇಶನು ಒಬ್ಬ. ಸದಾಶಿವ ರಮೇಶನ ಜೊತೆ ಜಗಳವಾಡಿದ್ದ. ಅದೇ ರಮೇಶ ಇಂದು ಗೌರಿಯ ಮನೆಯಲ್ಲಿ ಅಪರಿಚಿತ ವ್ಯಕ್ತಿಯಾಗಿ ಕಂಡ.ಸದಾಶಿವ ರಮೇಶನನ್ನು ,ರಮೇಶ ಸದಾಶಿವನನ್ನು ಏಳನೇ ತರಗತಿ ಮುಗಿದ ಮೇಲೆ ನೋಡಿಯೇ ಇರಲಿಲ್ಲ. ರಮೇಶನ ತಂದೆ ಅವನನ್ನು ತನ್ನ ತಂಗಿಯ ಮನೆ ಚಿತ್ರದುರ್ಗಕ್ಕೆ ಕಳುಹಿಸಿ ಓದಿಸತೊಡಗಿದ.ರಮೇಶ ಊರಿಗೆ ರಜೆಯಲ್ಲಿ ಬರುತ್ತಿದ್ದನಾದರೂ, ಸದಾಶಿವನನ್ನು ಒಮ್ಮೆಯೂ ನೋಡಿರಲಿಲ್ಲ .ಶ್ರೀಪತಿ ರಾಯರ ಮನೆಗೆ ರಮೇಶ ಜಾಗದ ವಿಚಾರವಾಗಿ ಮಾತನಾಡಲು ಬಂದಿದ್ದ.ರಮೇಶ ಈಗ ಮೊದಲಿನಂತೆ ಬಡಕಲು ಶರೀರದ ,ಅಳುಮುಂಜಿ ಆಗಿರಲಿಲ್ಲ ,ಸ್ವಂತ ದುಡಿಮೆಯಿಂದ ಸಮಾಜದಲ್ಲಿ ಸ್ಥಾನಮಾನ ಗೌರವಗಳನ್ನು ಕಾಯ್ದುಕೊಂಡಿದ್ದ.ಆದರೆ ಬಾಲ್ಯದಲ್ಲಿ ಸದಾಶಿವನಿಂದ ತನಗಾದ ಅವಮಾನವನ್ನು ಮರೆತಿರಲಿಲ್ಲ ,ಶ್ರೀಪತಿ ರಾಯರ ಮನೆಯೊಳಗೆ ಬಂದ ಸದಾಶಿವ ಆ ಆಗುಂತಕನನ್ನು ಯಾರು ಎನ್ನುವಂತೆ ನೋಡಿದಾಗ, ಶ್ರೀಪತಿ ರಾಯರ ಮಗ ಸುರೇಶನ ,ನಿನ್ನದೇ ತರಗತಿಯಲ್ಲಿ ರಮೇಶ್ ಎನ್ನುವವ ಇದ್ದನಲ್ಲ ಅವನೇ ಇವನು ಎಂದು ಪರಿಚಯಿಸಿದಾಗ, ಇವರು ಯಾರು ಎಂದು ರಮೇಶ ಕೇಳಿದಾಗ ರಾಮರಾಯರ ಮಗ ಸದಾಶಿವ ಎಂದು ಪರಿಚಯಿಸಿದರು. ಬಾಲ್ಯದಲ್ಲಿ ನಡೆದ ಘಟನೆಯ ಬಗ್ಗೆ ಮರೆತಿದ್ದ ಸದಾಶಿವ ಹೊಸ ವ್ಯಕ್ತಿಯಾಗಿ ಬದಲಾಗಿದ್ದ.ಹಾಗಾಗಿ ಪರಿಚಯದ ನಗೆ ನಕ್ಕು ರಮೇಶನ ಕೈ ಕುಲುಕಿದ. ಆದರೆ ರಮೇಶನ ಕಣ್ಣುಗಳಲ್ಲಿ ದ್ವೇಷವಿತ್ತು. ಆದರೆ ಮುಖದಲ್ಲಿ ಕಪಟ ನಗುವಿತ್ತು. *ಜೀವನದಲ್ಲಿ ರಮೇಶನ ತರಹದ ವ್ಯಕ್ತಿಗಳನ್ನು ನಾವು ಕಾಣುತ್ತೇವೆ* *ಒಳಗೊಂದು ಹೊರಗೊಂದು,* *ನಸುನಗುವ ಮುಖದಲ್ಲಿ ವಿಷವಿಹುದು ಮನದಲ್ಲಿ,* *ಅವನಮ್ಮವನೆಂದು ಹೆಗಲ ಮೇಲೆ ಕೈ ಹಾಕಿದರೆ ,ಬೆನ್ನ ಹಿಂಬದಿಯಲ್ಲಿ ನಿಂತು ಇರಿಯುವರು ನಿನ್ನ ಜೊತೆಗೇ ಇದ್ದು ನಿನ್ನದೆಲ್ಲವ ತಿಳಿದು, ಅಡಿಯಾಳಾಗಿ ಮಾಡಿಕೊಂಡು ನಿನ್ನಿರುವು ಇರದಂತೆ ಮಾಡುವವರು ಇದು ಕಪಟ, ಮೋಸ ,ವಂಚನೆ, ನಂಬಿಕೆ ದ್ರೋಹಿಗಳ ಪ್ರಪಂಚ, ಎಲ್ಲರನ್ನು ನಂಬುವಂತಿಲ್ಲ ನಟಿಸುವರು ಒಳ್ಳೆಯವರಂತೆ ಗುಂಡಿಕ್ಕಿ ಕೊಲ್ಲುವವರು ಶತ್ರುಗಳಂತೆ*
ಅವ ಮಿತ್ರನೋ,ಶತ್ರುವೋ ಎಂದು ಅರಿಯುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ರಮೇಶನು ಹಂಚಿಕೆಯೇ ಬೇರೆಯಾಗಿತ್ತು, ಸದಾಶಿವನ ಸ್ನೇಹಿತನಾಗಿ ಅವನ ಹೆಸರಿಗೆ ಕಪ್ಪು ಮಸಿ ಬಳೆಯಬೇಕು, ಅವನು ಆಸ್ತಿಪಾಸ್ತಿ ಎಲ್ಲವನ್ನೂ ಕಳೆದುಕೊಂಡು, ನನ್ನ ಕಾಲಿಗೆ ಬೀಳುವಂತೆ ಮಾಡಬೇಕು ಎಂದು, ಜ್ವಾಲಾಮುಖಿಯಂತ ಹೃದಯದಿಂದ ಯೋಚಿಸತೊಡಗಿದ. ರಮೇಶನ ಕಪಟವರಿಯದ ಸದಾಶಿವ ನಿಷ್ಕಲ್ಮಶ ಮನಸ್ಸಿನಿಂದ ಅವನ ಸ್ನೇಹ ಬಯಸಿದ ,ಈ ಸ್ನೇಹ ಸದಾಶಿವನ ಜೀವನದಲ್ಲಿ ಬಿರುಗಾಳಿಯನ್ನು ಬೀಸುತ್ತದೆಯೋ ,
ಅಥವಾ ರಮೇಶನಿಗೆ ತಿರುಮಂತ್ರವಾಗುತ್ತದೋ ಯಾರು ಬಲ್ಲರು!..
ಮುಂದುವರಿಯುವುದು
✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡಬಿದಿರೆ*

Comments
Post a Comment