ಸದಾಶಿವ - ಸಂಚಿಕೆ - 64

*ಸದಾಶಿವ*

*ಸಂಚಿಕೆ - 64*

*ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ಬುದ್ಧಿ ಪ್ರಚೋದಾಯತ್*

*ವಿದ್ಯಾದಾಯಕ,ಸಕಲ ಕಷ್ಟನಿವಾರಕ,ಪ್ರಥಮ ವಂದಿತ ಗಣೇಶನ ಹಬ್ಬವಾದ ಇಂದು ಸರ್ವರಿಗೂ ನನ್ನ ಕದೆಯಿಂದ  ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು*

     ಅದರಲ್ಲಿ ಸದಾಶಿವನಿಗೆ ಪ್ರಿಯವಾದ ಎಳ್ಳುಂಡೆ, ಮತ್ತು ಚಕ್ಕುಲಿ ಕೋಡುಬಳೆ ಇತ್ತು .ತನ್ನ ಮುದ್ದು ಸೊಸೆ ಭಕ್ತಿಯ ಕೈಯಲ್ಲಿ ಎಳ್ಳುಂಡೆ ಯನ್ನು ಕೊಟ್ಟು,ಚಕ್ಕುಲಿಯನ್ನು ಬಾಯಿಗಿಟ್ಟುಕೊಂಡ. ಸುಬ್ರಹ್ಮಣ್ಯ ಸ್ವಾಮಿ ತಾನು ಬಂದ ವಿಚಾರವನ್ನು ಹೇಳಿದರು; ಮುಂದಿನ ತಿಂಗಳ ಮೊದಲ ವಾರದಲ್ಲಿ ಗಂಗಾಳಿಗೆ ಮದುವೆ ನಿಶ್ಚಯವಾಗಿದೆ. ನೀವೆಲ್ಲರೂ ಕುಟುಂಬ ಸಮೇತರಾಗಿ ಬಂದು, ವಿವಾಹ ಕಾರ್ಯ ನೆರವೇರಿಸುವಲ್ಲಿ ನಿಮ್ಮ ಸಹಕಾರವಿರಲಿ; ಎಂದು ಕೇಳಿಕೊಂಡಾಗ, ಸದಾಶಿವನಿಗೆ ಆದ ಸಂತೋಷ ಅಷ್ಟಿಷ್ಟಲ್ಲ; ನೀವೇನು ಯೋಚಿಸಬೇಡಿ ,ಗಂಗಾಳ ವಿವಾಹದಲ್ಲಿ ನಾನೇ ಮುಂದೆ ನಿಂತು ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿ ಕೊಡುತ್ತೇನೆ ಎಂದಾಗ, ಸುಬ್ರಹ್ಮಣ್ಯಸ್ವಾಮಿ ಹರುಷದಿಂದ ಸದಾಶಿವನ ಮುಖ ನೋಡಿದರು, ರಾಮರಾಯರು ಕೈಯಲ್ಲಿ ಲಗ್ನಪತ್ರಿಕೆಯನ್ನು ಕೊಟ್ಟು ಎಲ್ಲರೂ ಬನ್ನಿರೆಂದು ಹೇಳಿದರು ,ಇನ್ನು ನಾನು ಹೊರಡುತ್ತೇನೆ ಎಂದು ಹೇಳಿ ಎದ್ದು ನಿಂತಾಗ, ಸದಾಶಿವ ಊಟ ಮಾಡಿದರೆಂದು ಹೇಳಿದಾಗ,ಬೇಡ; ಇನ್ನೊಮ್ಮೆ ಬಂದಾಗ ಊಟ ಮಾಡಿಕೊಂಡೇ ಹೋಗುತ್ತೇನೆ ,ಮದುವೆಗೆ ಬರಲು ಮರೆಯದಿರಿ ಎಂದು ಮಗದೊಮ್ಮೆ ಹೇಳಿ ಹೊರಟರು. ಸದಾಶಿವ ಅವರನ್ನು ಬೀಳ್ಕೊಡಲು ಬಸ್ಸ್ಟಾಂಡಿನ ತನಕ ಹೋದ .ಅವರನ್ನು ಬಸ್ಸಿನಲ್ಲಿ ಕೂರಿಸಿ ಹಿಂದಿರುಗುವಾಗ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎಂದು ನೋಡಲು ತೆರಳಿದ. ಅಲ್ಲಿ ಕೆಲಸಗಾರರು ತ್ವರಿತಗತಿಯಿಂದ ತಮಗೆ ವಹಿಸಿದ ಕೆಲಸಗಳನ್ನು ಮಾಡುತ್ತಿದ್ದರು .ಶಿಲ್ಪಿಗಳು ತಮ್ಮ ಕೈಗಳಿಂದ ಸುಂದರವಾದ ಶಿಲ್ಪಗಳನ್ನು,ದೇವರ ಮೂರ್ತಿಗಳನ್ನು ಮಾಡುತ್ತಿದ್ದರು. ದೇವಸ್ಥಾನದ ಬಾಗಿಲುಗಳೇ ನೋಡಲು ಆಕರ್ಷಣೀಯವಾಗಿತ್ತು. ದೇವಸ್ಥಾನದ ಒಳ ಹೊಕ್ಕಾಗ ಮನಸ್ಸಿನಲ್ಲಿ ಉಲ್ಲಾಸ, ಹೃದಯದಲ್ಲಿ ಭಕ್ತಿ ,ತನ್ನಿಂದ ತಾನಾಗಿ ತಂಗಾಳಿಯಂತೆ ನೆಮ್ಮದಿಯನ್ನು ನೀಡುತ್ತವೆ, ಸದಾಶಿವನ ಬರುವಿಕೆಯನ್ನು ಗಮನಿಸಿದ ಕೆಲಸಗಾರರು ಅವನಿಗೊಂದು ನಮಸ್ಕಾರವನ್ನು ಮಾಡಿ, ಕುರ್ಚಿಯನ್ನು ಹಾಕಿದ್ದರು.ಯಾರೋ ಒಬ್ಬರು ಎಳನೀರನ್ನು ಕುಡಿಯಲು ಕೊಟ್ಟರು.ಎಳನೀರು ಕುಡಿದಾದ ಮೇಲೆ ಸದಾಶಿವ ದೊಡ್ಡ ವ್ಯಕ್ತಿಗಳಂತೆ ಆಜ್ಞೆಯನ್ನು ಮಾಡಿ ಕೆಲಸವನ್ನೂ ಮಾಡಿಸಲಿಲ್ಲ ,ತಾನೇ ಮುಂದೆ ಬಂದು ಕಂಬಗಳನ್ನು ಎತ್ತಲು, ಕಲ್ಲುಗಳನ್ನು ಪುಡಿ ಮಾಡಲು ,ಸಹಕರಿಸಿದ. ಸದಾಶಿವ ತಾನಾಗಿಯೇ ಬಂದು ಕೆಲಸದಲ್ಲಿ ಕೈ ಜೋಡಿಸಿದಾಗ ಕೆಲಸಗಾರರಿಗೂ ಉತ್ಸಾಹವಾಯಿತು.
ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸವನ್ನು ಮಾಡತೊಡಗಿದರು. ಸಂಜೆಯ ಹೊತ್ತಿಗೆ ಕೆಲಸಗಾರರಿಗೆ ಅಂದಿನ ದಿನದ ಸಂಬಳವನ್ನು ನೀಡಿ ಹಿಂತಿರುಗಿದ ಸದಾಶಿವ ದೇವಸ್ಥಾನದ ಒಳಹೊಕ್ಕು ನಿನ್ನ ಕೆಲಸ ಕಾರ್ಯಗಳಿಗೆ ಇಳಿದಿದ್ದೇನೆ, ನಿನ್ನ ಅಭಯದಿಂದ ಮಾತ್ರ ನಾನು ಈ ಪುಣ್ಯ ಕಾರ್ಯವನ್ನು ನಿರ್ವಿಘ್ನವಾಗಿ ಮಾಡಲು ಸಾಧ್ಯ ,ನೀನೆನಗೆ ಆಶೀರ್ವದಿಸಿ, ಹರಸು ಎಂದು ಭಕ್ತಿಯಿಂದ ಪ್ರಾರ್ಥಿಸಿ ,ಮನೆಯತ್ತ ಹೊರಟ ,ಆಗವನಿಗೆ ಆರಾಧನಳನ್ನು  ನೋಡದೇ ತುಂಬಾ ದಿನವಾಯಿತು ಎಂದು ಜ್ಞಾಪಕವಾಗಿ ,ಶ್ರೀಪತಿ ರಾಯರ ಮನೆಯತ್ತ ಹೊರಟ .ಅಲ್ಲಿ ಅವನು ಒಬ್ಬ ಆಗಂತುಕ ವ್ಯಕ್ತಿಯನ್ನು ಕಂಡ..

 ಮುಂದುವರೆಯುವುದು

✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡಬಿದಿರೆ*

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32