ಸದಾಶಿವ - ಸಂಚಿಕೆ - 62

*ಸದಾಶಿವ*
*ಸಂಚಿಕೆ - 62*

   ಗಂಗಾ ಸದಾಶಿವನನ್ನು ನೆನೆಸಿಕೊಂಡು ಇದ್ದದ್ದೇನೋ ನಿಜ; ಆದರೆ ತನ್ನ ತಂದೆ ಕೃಷರಾಗುತ್ತಿದದ್ದನ್ನು ಅವಳಿಂದ ಸಹಿಸಲಾಗಲಿಲ್ಲ ,ಇಪ್ಪತ್ತು ವರುಷಗಳ ತನಕ ತಾಯಿ ಇಲ್ಲದ ಗಂಗಾಳನ್ನು ತಾವೇ ತಾಯಿಯಂತೆ  ಮುಚ್ಚಟೆಯಿಂದ ಬೆಳೆಸಿದ್ದರು ,ತಾಯಿ ಇಲ್ಲ ಎಂಬ ಯೋಚನೆಯೂ ಬಾರದಂತೆ ಸಾಕಿದ್ದರು. ಆದರೀಗ ಮಗಳು ಪ್ರೇಮದಿಂದ ವಂಚಿತಳಾಗಿ ಸ್ವಯಂ ಶಿಕ್ಷೆ ವಿಧಿಸಿ ಕೊಳ್ಳುತ್ತಿರುವುದನ್ನು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಮಗಳು ತಾನಾಗಿಯೇ ಬಂದು ನಾನು ಬೇರೆ ವಿವಾಹವಾಗಲು ಸಿದ್ಧ ಎಂದು ಯಾವತ್ತೂ  ಹೇಳುವಳೋ ಎಂದು ಕಾತರದಿಂದ ನಿರೀಕ್ಷಿಸುತ್ತಿದ್ದರು. ವರುಷ ಕಳೆದರೂ ಗಂಗಾ ಮದುವೆಯ ವಿಚಾರವಾಗಿ ಸೊಲ್ಲೆತ್ತಿರಲಿಲ್ಲ .ಹಾಗಾಗಿ ಸುಬ್ರಹ್ಮಣ್ಯಸ್ವಾಮಿ ಮಗಳ ಯೋಚನೆಯಲ್ಲಿಯೇ ಬಲಹೀನವಾಗ ತೊಡಗಿದರು. ಇದನ್ನು ಗಂಗಾಳಿಂದ  ಸಹಿಸಿಕೊಳ್ಳಲಾಗಲಿಲ್ಲ. ತನ್ನ ಪ್ರೀತಿಯ ತಂದೆ ತನ್ನಿಂದ ನೋವು ಪಡಬಾರದೆಂದು ನಿಶ್ಚಯಿಸಿದ ಗಂಗಾ ತಾನು ವಿವಾಹವಾಗುವುದಾಗಿ ಹೇಳಿಯೇ ಬಿಟ್ಟಳು. ಸುಬ್ರಹ್ಮಣ್ಯ ಸ್ವಾಮಿ ಈ ಮಾತುಗಳನ್ನು ಕೇಳಿ ಯುವ ತರುಣನಂತೆ ಉತ್ಸಾಹಿಯಾದರು. ಮಗಳಿಗೆ ಒಳ್ಳೆಯ ಗುಣವಂತ ,ಸುಸಂಸ್ಕೃತಹುಡುಗನನ್ನು ಹುಡುಕುವುದರಲ್ಲಿ ಮಗ್ನರಾದರು.ಎಷ್ಟೇ ಆದರೂ ಶ್ರೀಮಂತರು ನಾ ಮುಂದು ತಾ ಮುಂದು ಎಂದು ಗಂಡುಗಳು ಬರತೊಡಗಿದರು.ಅಷ್ಟರಲ್ಲಿ ಒಬ್ಬ ಹುಡುಗ ಅವರಿಗೆ ತುಂಬಾ ಇಷ್ಟವಾದ.ಅವನ ಹೆಸರು ಪ್ರಭಾಕರ. ಗಂಗಾ ಪ್ರಭಾಕರ್ ಜೊತೆ ತನ್ನ ಮನದ ಭಾವನೆಗಳನ್ನು ಹೇಳಿದಳು ,ತಾನು
ಸದಾಶಿವನನ್ನು ಪ್ರೀತಿಸುತ್ತಿದ್ದದ್ದು, ಮೂಗಿಯಾಗಿದ್ದ ಸಂದರ್ಭದಲ್ಲಿ ಸದಾಶಿವನಿಂದಲೇ  ತನಗೆ ಮಾತು ಬರುವಂತಾಗಿದ್ದು, ಆದರೆ ಸದಾಶಿವ ತನ್ನನ್ನು ಪ್ರೇಮಿಸಿರಲಿಲ್ಲ.ಅವನಾಗಲೇ ಗೌರಿ ಎಂಬವಳ  ಪ್ರೇಮಿಯಾಗಿದ್ದ. ಹಾಗಾಗಿ ನನ್ನದು ಏಕಮುಖ ಪ್ರೀತಿಯಾಗಿ ತೆಂದು ವಿವರಿಸಿದಾಗ; ಗಂಗಾಳ ಹೃದಯವಂತಿಕೆ; ನೇರ ಮಾತು, ಮುಚ್ಚುಮರೆಯಿಲ್ಲದ ಅವಳ ಮಾತುಗಳು ಪ್ರಭಾಕರನಿಗೆ ಮೆಚ್ಚುಗೆಯಾಯಿತು. ಇಂತಹ ಹುಡುಗಿಯನ್ನೇ ನಾನು ಹುಡುಕುತ್ತಿದ್ದದ್ದು ಎಂದು ಮನಸ್ಸಿನಲ್ಲೇ ಅಂದುಕೊಂಡು ಪ್ರಭಾಕರ ಗಂಗಾಳ ಬಳಿ ನೀವೆನಗೆ ಇಷ್ಟವಾದಿರಿ ಎಂದು ನೇರವಾಗಿಯೇ ಹೇಳಿದ.ನಿಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆಗಳು ನನಗೆ ಬೇಡ, ನಮ್ಮ ಮುಂದಿನ ಜೀವನ ಚೆನ್ನಾಗಿದ್ದರಷ್ಟೇ ಸಾಕು, ನಾವಿಬ್ಬರು ಕೂಡಿ ಕಹಿಯನ್ನು ಮರೆತು, ಸಿಹಿಯಾದ  ದಾಂಪತ್ಯ ಜೀವನಕ್ಕೆ
ಕಾಲಿರಿಸೋಣ ,ನಿಮಗೆ ನಾನು ಒಪ್ಪಿಗೆಯಾ!? ಎಂದು ವಿನಯದಿಂದ ಕೇಳಿದಾಗ ,ಆತನ ಹೃದಯ ವೈಶಾಲ್ಯಕ್ಕೆ ಕರಗಿದ ಗಂಗಾ ಮೌನವಾಗಿಯೇ ತನ್ನ ಒಪ್ಪಿಗೆಯನ್ನು ಸೂಚಿಸಿದಳು .ಮಗಳು ಏನನ್ನುವಳೋ  ಎಂದು ಕಾತರದಿಂದ ಕಾಯುತ್ತಿದ್ದ ಸುಬ್ರಹ್ಮಣ್ಯಸ್ವಾಮಿಗೆ ಮಗಳು  ಪ್ರಭಾಕರನನ್ನು ಒಪ್ಪಿಕೊಂಡದ್ದು ಅತೀವ ಸಂತೋಷವನ್ನು ನೀಡಿತ್ತು. ಹರುಷದಿಂದ ಮಗಳ ಮದುವೆಯ ತಯಾರಿ ನಡೆಸಲು ಮುಂದಾದರು. ಗಂಗಾ ತನ್ನ ತಂದೆಯ ಬಳಿ
ಸದಾಶಿವನನ್ನು ಮರೆಯದೇ ಕರೆಯಬೇಕು ಎಂದು ಹೇಳಿದಾಗ ಸುಬ್ರಹ್ಮಣ್ಯ ಸ್ವಾಮಿ ಸರಿ ಎಂದು ತಲೆಯಲ್ಲಾಡಿಸಿದರು. ಇತ್ತ ಸದಾಶಿವನ ಮುಂದಾಳತ್ವದಲ್ಲಿ ದೇವಸ್ಥಾನದ  ಜೀರ್ಣೋದ್ಧಾರ ತ್ವರಿತಗತಿಯಿಂದ ನಡೆಯುತ್ತಿತ್ತು..

 ಮುಂದುವರಿಯುವುದು

✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡಬಿದಿರೆ*

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32