ಸದಾಶಿವ - ಸಂಚಿಕೆ - 60
*ಸದಾಶಿವ*
*ಸಂಚಿಕೆ - 60*
ತನ್ನನ್ನು ಹೊರಗೆ ಕರೆದುಕೊಂಡು ಹೋಗುವಂತೆ ;ಹೊರಗೆ ಕೈ ತೋರಿಸಿದಳು.ಹಾಗೆ ಮಗುವನ್ನೆತ್ತಿಕೊಂಡ ಸದಾಶಿವ ಹೊರಗೆ ಸುತ್ತಾಡಿಸಿಕೊಂಡು ಬರುತ್ತೇನೆಂದು ತನ್ನ ತಂಗಿಯ ಅನುಮತಿಯನ್ನು ಕೇಳಿ ಹೊರ ನಡೆದ. ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ಶಿವನ ದೇವಸ್ಥಾನ ಕಂಡಿತು. ನಾವಲ್ಲಿಗೆ ಹೋಗೋಣ ಎನ್ನುವಂತೆ ಮಗು ಸೂಚಿಸಿತು. ಸರಿ ಎಂದು ಸದಾಶಿವ ದೇವಸ್ಥಾನದ ಒಳ ಹೊಕ್ಕ.ಆ ದೇವಸ್ಥಾನ ತುಂಬಾ ಪುರಾತನ ಕಾಲದ್ದಾಗಿತ್ತು. ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಮಾತ್ರ ಆ ದೇವಸ್ಥಾನಕ್ಕೆ ಜನರು ಬರುತ್ತಿದ್ದರು. ದೇಣಿಗೆಯೂ ಅಷ್ಟೇನು ಸಂಗ್ರಹವಾಗುತ್ತಿಲ್ಲದ ಕಾರಣ ಅರ್ಚಕರು ಕೂಡ ಆ ದೇವಸ್ಥಾನಕ್ಕೆ ಇರಲಿಲ್ಲ. ಮರದಿಂದ ಉದುರಿದ ತರಗೆಲೆಗಳು ದೇವಸ್ಥಾನದ ಅಂಗಣದಲ್ಲಿ ರಾಶಿ ಬಿದ್ದಿದ್ದವು ,ಆದರೂ ಸಂಪಿಗೆಯ ಹೂವಿನ ಮರವೊಂದು ಆ ಪ್ರದೇಶವನ್ನು
ಸುವಾಸನಭರಿತವಾಗಿಸಿತ್ತು. ಮಗು ಸನ್ನೆಯಿಂದಲೇ ತನ್ನನ್ನು ಕೆಳಗೆ ಬಿಡುವಂತೆ ಕೇಳಿಕೊಂಡಾಗ, ಸದಾಶಿವ ಕೆಳಗೆ ಬಿಟ್ಟು ತನ್ನ ಪುಟ್ಟ ಹೆಜ್ಜೆಯಲ್ಲಿಯೇ ಸಂಪಿಗೆಯ ಮರದತ್ತ ಬಂದು,ಅಲ್ಲಿ ಬಿದ್ದಿದ್ದ ಸಂಪಿಗೆಯ ಒಂದೆರಡು ಹೂವುಗಳನ್ನು ತನ್ನ ಪುಟಾಣಿ ಕೈಗಳಿಂದ ಹಿಡಿದುಕೊಂಡು ನೀನು ತೆಗೆದುಕೋ ಎನ್ನುವಂತೆ ಕೈಯನ್ನು ಮುಂದೆ ಚಾಚಿತು,ಮಗುವಿನ ಸಮಯಪ್ರಜ್ಞೆ ಕಂಡು ಸದಾಶಿವನಿಗೆ ಖುಷಿಯಾಯಿತು. ಸದಾಶಿವ ತಾನು ಕೂಡಾ ಶುಭ್ರವಾದ ಸಂಪಿಗೆ ಹೂವುಗಳನ್ನು ಆರಿಸಿ ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ಮಗುವನ್ನು ತನ್ನ ತೋಳುಗಳಿಂದ ಎತ್ತಿಕೊಂಡು ಶಿವಾಲಯದ ಒಳಹೊಕ್ಕ. ನಂದಿಯ ವಿಗ್ರಹದ ಹಿಂದೆ ಲಿಂಗರೂಪಿ ಶಿವನಿದ್ದ. ಆ ಪ್ರದೇಶದಲ್ಲೆಲ್ಲಾ ಜೇಡರ ಬಲೆಗಳಿದ್ದವು. ಪಾರಿವಾಳಗಳ ಗುರುಗುರು ಸದ್ದಿನ ಜೊತೆಗೆ ಏನೋ ಕೆಟ್ಟ ವಾಸನೆ ಬರುತ್ತಿತ್ತು. ದೇವಸ್ಥಾನ ಧೂಳಿನಿಂದ ತುಂಬಿ ಹೋಗಿತ್ತು. ಊರಿನ ಪ್ರಮುಖರು ಬರೆಸಿದ ಶಾಸನ ಫಲಕಗಳು ತುಕ್ಕು ಹಿಡಿದಿದ್ದವು. ಕುಳಿತುಕೊಳ್ಳಲು ಒಂದು ಬೆಂಚಿನ ವ್ಯವಸ್ಥೆಯೂ ಅಲ್ಲಿರಲಿಲ್ಲ ,ಅಷ್ಟೊಂದು ಅಭಿವೃದ್ಧಿ ಹೊಂದಿದ ಊರಾದರೂ ದೇವಸ್ಥಾನದ
ಜೀರ್ಣೋದ್ಧಾರ ಏಕೆ ಆಗಲಿಲ್ಲವೆಂದು ಸದಾಶಿವನನ್ನು ಯೋಚಿಸುವಂತೆ ಮಾಡಿತು.ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲೇಬೇಕೆಂದು ಸದಾಶಿವ ನಿರ್ಧರಿಸಿದ. ಸದಾಶಿವ ಮನಸ್ಸಿನಲ್ಲಿ ಅಂದುಕೊಂಡ ವಿಚಾರ ತನಗೆ ತಿಳಿಯಿತು ಎನ್ನುವಂತೆ ಭಕ್ತಿಯ ಮುಖ ದೈವೀಮಾನವಾಗಿ ಬೆಳಗಿತು.ಸದಾಶಿವ ಭಕ್ತಿಯನ್ನು ದೇವಸ್ಥಾನ ದೇವಸ್ಥಾನದ ಒಳಗೆ ಸ್ವಚ್ಛ ಮಾಡಿ ;ಕುಳ್ಳಿರಿಸಿ ದೇವಸ್ಥಾನದ ಹೊರಗಡೆ ಇದ್ದ.ಬಾವಿಯಿಂದ ನೀರು ತರಲು ಹೋದ ,ಪುಣ್ಯಕ್ಕೆ ಬಾವಿಯ ಹಗ್ಗಕ್ಕೆ ತಾಮ್ರದ ಬಿಂದಿಗೆ ಯೊಂದನ್ನು ಸುತ್ತಿ ಇಟ್ಟಿದ್ದರು ,ಕಳ್ಳರು ಬರದೆ ಉಳಿದುಕೊಂಡಿದ್ದೆ ಹೆಚ್ಚಿಸೆನಿಸಿತು.ಸದಾಶಿವ ಬೇಗ ಬೇಗನೆ ನೀರು ಸೇದಿ ಶಿವಲಿಂಗದ ಮೇಲೆ ಸುರಿಯಲೆಂದು ಹೊತ್ತು ತರಬೇಕಾದರೆ ,ಒಳಗಿನ ದೃಶ್ಯ ಅವನನ್ನು ಚಕಿತರನ್ನಾಗಿಸಿತು. ಪುಟ್ಟ ಮಗು ಭಕ್ತಿ ಶಿವಲಿಂಗದ ಸುತ್ತ ಬಿದ್ದಿದ್ದ ತರಗೆಲೆಗಳನ್ನು ತನ್ನ ಕೋಮಲವಾದ ಹಸ್ತಗಳಿಂದ ಬದಿಗೆ ಸರಿಸುತ್ತಿದ್ದಳು. ಸದಾಶಿವನಿಗೆ ಅದನ್ನು ಕಂಡು ಆಶ್ಚರ್ಯವಾಯಿತು. ಇಷ್ಟು ಪುಟ್ಟ ಮಗುವಿಗೆ ಅದೆಷ್ಟೊಂದು ಶ್ರದ್ಧೆ, ಭಕ್ತಿ ನಿಜವಾಗಿಯೂ ಇದು ದೇವರ ಮಗುವೇ ಆಗಿರಬೇಕು ಎಂದುಕೊಂಡು; ಶಿವಲಿಂಗದ ಮೇಲೆ ನೋಡುತ್ತಾನೆ..
ಮುಂದುವರೆಯುವುದು
✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡುಬಿದಿರೆ*

Comments
Post a Comment