ಸದಾಶಿವ - ಸಂಚಿಕೆ - 58

*ಸದಾಶಿವ*
*ಸಂಚಿಕೆ - 58*

       ಸಂಸಾರದ ಈ ಸಾಗರದಲ್ಲಿ ತಾಪತ್ರಯಗಳು, ವೇದನೆ,ನೋವು,ಜಿಗುಪ್ಸೆ, ಹತಾಶೆ, ಸಂತೋಷ ಇವೆಲ್ಲ ತಪ್ಪಿದ್ದಲ್ಲ ,ಎಲ್ಲವೂ ನಮ್ಮನ್ನು ತಿಂದು ಹಾಕುತ್ತವೆ ,ಸದಾ ನಮ್ಮ ಮನಸ್ಸು ಮತ್ತು ಆತ್ಮವನ್ನ ಚಿಂತನೆಗೆ ಹಚ್ಚುವುದು, ನಿಂತಲ್ಲೇ ನಿಲ್ಲದೆ ,ಕೂತಲ್ಲಿ ಕೂರದೇ ಹೋಗುವುದು, ಅತ್ತಿಂದ ಇತ್ತ ಇತ್ತಿಂದ ಅತ್ತ ಮಂಗನಂತೆ ಜಿಗಿದಾಡುವ ನಾವು ವಿನಾಕಾರಣ ಕೋಪಗೊಳ್ಳುವುದು, ಮತ್ತೊಬ್ಬರ ಮೇಲೆ ಹರಿಹಾಯುವುದು, ಸುಮ್ಮನೆ ಜಗಳ ಮಾಡುವುದು, ಹೀಗೆ ಅನೇಕ ರೀತಿಯ ವಿಚಿತ್ರ ರೋಗಗಳಿಂದ ಬಾಧೆ ಪಡುತ್ತೇವೆ ;ಅದರ ಕಾರಣ ಯಾರಿಗೂ ತಿಳಿಯದಾಗಿದೆ, ಒಂದೊಂದು ಸಲ ವೈದ್ಯರು ಕೂಡ ಕೈಚೆಲ್ಲಿ ಕುಳಿತುಕೊಳ್ಳುವ ಮಟ್ಟಕ್ಕೆ ಈ ಕಲಿಯುವ ಪರಿ ಬಂದು ನಿಂತಿದೆ.
   ನಮ್ಮ ಸುತ್ತಮುತ್ತಲಿನ ಜನರನ್ನು ತೆಗೆದುಕೊಳ್ಳುವುದಾದರೆ ಎಲ್ಲ ಕಡೆಯೂ ಮೋಸ, ವಂಚನೆ ,ನಿಂದನೆ ,ಅಸಹ್ಯ ತಾಂಡವವಾಡುತ್ತಿದೆ, ಯಾರ ಬಾಯಲ್ಲಿಯೂ ಒಳ್ಳೆಯ ಮಾತು ಕೇಳಿಬರುತ್ತಿಲ್ಲ ,ಎಲ್ಲಿ ನೋಡಿದರೂ ನಾನು ಎನ್ನುವ ಅಜ್ಞಾನದ ಕತ್ತಲು ಆವರಿಸಿದೆ, ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ವಿರೋಧಿಗಳಾಗಿ ಕಾಣುತ್ತಿದ್ದಾರೆ. ತಮ್ಮವರನ್ನೇ ನಂಬಲಾಗದಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ, ಇವೆಲ್ಲದರಿಂದ ಹೊರಬರಲು ಆಧ್ಯಾತ್ಮದತ್ತ ಮನ ಹೊರಳಿಸುವುದು ಅತ್ಯಗತ್ಯ ,ಸಂಸಾರ ಬಿಟ್ಟು ಬರಬೇಕೆಂದಿಲ್ಲ, ಸಂಸಾರದಲ್ಲಿದ್ದುಕೊಂಡೇ  ದೇವರ ಬಗ್ಗೆ ,ಭಕ್ತಿಯ ಕುರಿತಾಗಿ ಯೋಚಿಸಬಹುದು ,ಆಗ ಮನಃಶಾಂತಿ ಸಿಗುತ್ತದೆ. ಅಧ್ಯಾತ್ಮ ಕಪಟ ಮೋಸವಿಲ್ಲದ ವಿಶ್ರಾಂತಿಯ ನೆಮ್ಮದಿಯ ತಾಣವಾಗಿದೆ ,ನಿಮಗೆಲ್ಲ ತಿಳಿದಿರುವಂತೆ ಶ್ರೀಮನ್ನಾರಾಯಣನ ಭಕ್ತನಾದ ಭಕ್ತ ಕುಂಬಾರ ಭಕ್ತಿ ಪರಾಕಾಷ್ಠೆಯಲ್ಲಿ ತನ್ನ ಮಗನನ್ನೇ ತುಳಿದು ದೇವರ ಅನುಗ್ರಹ ಪಡೆದು ಮತ್ತೆ ತನ್ನ ಮಗನನ್ನು ಪಡೆದುಕೊಂಡ. ಹೆಂಡತಿ, ರಾಜ್ಯ ,ಮಕ್ಕಳು ಎಲ್ಲವನ್ನೂ ಕಳೆದುಕೊಂಡ ಸತ್ಯ ಹರಿಶ್ಚಂದ್ರ  ಸುಳ್ಳನ್ನು ನುಡಿಯಲ್ಲೇ ಇಲ್ಲ .ಸತ್ಯ ಅವರನ್ನು ಕಾಪಾಡಿತು. ಅವನನ್ನು ಗೆಲ್ಲಿಸಿತು, ದೇವರು ಅವನ ಕೈ ಹಿಡಿದ.ಕಷ್ಟ ಎನ್ನುವುದು ಕ್ಷಣಿಕ ;ಸುಖ ಸಿಗಬೇಕೆಂದರೆ ಕಷ್ಟ ಅನುಭವಿಸಲೇಬೇಕು, ಹಾಗಾಗಿ ಸತ್ಯಹರಿಶ್ಚಂದ್ರ ಸತ್ಯದ ಹರಿಕಾರನಾದ , ಹಿಂದೆಲ್ಲ ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ  ಶಿಕ್ಷಣದ ಮೂಲಕ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತಿದ್ದರು .ಆಧ್ಯಾತ್ಮಿಕ ವಚನ ,ವಿಚಾರ ಎಲ್ಲವೂ ಜೀವನದ ಅತ್ಯುತ್ತಮ ಅನುಭವ ನೀಡುತ್ತಿದ್ದವು ಯಾವುದು ನಶ್ವರ ,ಯಾವುದೂ ಯಾವುದು ಶಾಶ್ವತ, ಯಾವುದು ಉತ್ತಮ, ಯಾವುದು ಮಧ್ಯಮ, ಯಾವುದು ಅಧಮ ಎಂಬ ಕಲ್ಪನೆ ನೀಡುತ್ತಿದ್ದವು. ಈ ಸುಂದರ ಸಮಾಜವನ್ನು ಅರಿಯಲು ಈ ಆಧ್ಯಾತ್ಮಿಕ ಚಿಂತನ ಮಂಥನವಿರಲೇಬೇಕು ಒಮ್ಮೆ ಮನಸ್ಸಿಗಾಗಿರುವ ಚಿಂತನೆ,ಚಿಂತೆ  ಮರೆತು ಆಧ್ಯಾತ್ಮದತ್ತ ಸಾಗಿದರೆ ಅದರಲ್ಲಿ ಸಿಗುವ ನೆಮ್ಮದಿ ಮತ್ತಾವುದರಲ್ಲಿಯೂ ಸಿಗುವುದಿಲ್ಲ ,ಸಕಲ ರೋಗಗಳಿಗೆ ಆಧ್ಯಾತ್ಮ ಒಂದು ಔಷಧಿ, ಇದರ ಅನುಸರಿಸುವಿಕೆ ಕಷ್ಟವೇ ಆದರೆ ಅದರಿಂದ ಸಿಗುವ ಅನುಭವ ಅನನ್ಯವಾಗಿದೆ. ಎಂದು ಹೇಳಿ ಸ್ವಾಮಿಗಳು ಗೌರಿಯ ತಂದೆ ತಾಯಿ, ಸದಾಶಿವ ಮತ್ತವನ ತಂದೆ ತಾಯಿಯೋ ಮುಖ ನೋಡಿದರು.

 ಮುಂದುವರಿಯುವುದು

✍🏻 *ನಾಗಶ್ರೀ.ಎಸ್. ಭಂಡಾರಿ*
*ಮೂಡಬಿದಿರೆ*

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32