ಸದಾಶಿವ - ಸಂಚಿಕೆ - 57
*ಸದಾಶಿವ*
*ಸಂಚಿಕೆ - 57*
*ಕೆಟ್ಟ ಮೇಲೆ ಬುದ್ಧಿ* ಎನ್ನುವಂತೆ ಸದಾಶಿವ ಇನ್ನಾದರೂ ಬದಲಾಗಲಿ; ಗೌರಿ ಸತ್ತ ನೋವಿನಿಂದ ಹೊರಬಂದು ವಾಸ್ತವದತ್ತ ಮುಖ ಮಾಡಲಿ, ಎಂದು ಸರಸಿ ಅಂದುಕೊಂಡಳು. ಇತ್ತ ಗೌರಿಯ ತಂದೆ ತಾಯಿ ಮಗಳ ಮುಂದಿನ ಕಾರ್ಯ ಮಾಡಲು ಶವವನ್ನು ಊರಿಗೆ ತೆಗೆದುಕೊಂಡು ಹೋಗಲೇ ಎಂದು ಸ್ವಾಮಿಗಳಲ್ಲಿ ಕೇಳಿದಾಗ; ಸ್ವಾಮಿಗಳು ಬೇಡ ,ಗೌರಿ ತನ್ನ ಕೊನೆಗಾಲದಲ್ಲಿ ಇಲ್ಲಿಗೆ ಬಂದು ನಮ್ಮ ಜತೆ ಸನ್ಯಾಸಿನಿಯಾಗಿ ಬಾಳಿದವಳು. ಅವಳು ಇಲ್ಲಿಯೇ ಪ್ರಾಣ ಬಿಡಬೇಕೆಂದು ಈ ಪುಣ್ಯ ನೆಲದಲ್ಲಿ ತನ್ನ ಕೊನೆಯಾಗಬೇಕು ಎಂದು ಆಶಿಸಿದ್ದ.ಅವಳ ಕೊನೆಯಾಸೆಯಂತೆ ಅವಳ ಅಂತ್ಯಕ್ರಿಯೆ ಇಲ್ಲೆ ಮಾಡಿ ಎಂದಾಗ ಸರಿ ಎಂದ ,ಗೌರಿಯ ತಂದೆ ತಾಯಿ ಗೌರಿ ಸತ್ತ ವಿಚಾರವನ್ನು ಊರಿನಲ್ಲಿ ತಿಳಿಸಲು ಗೌರಿಯ ತಂದೆಯೇ ಹೊರಟರು. ಊರಿನವರೆಲ್ಲರೂ ಸ್ವಾಮಿಗಳ ಆಶ್ರಮದ ಎದುರು ಜಮಾಯಿಸಿದರು.ಊರ ಮಗಳಂತಿದ್ದ ಗೌರಿಯ ಸಾವು ಅವರಿಗೆಲ್ಲಾ ನೋವು ನೀಡಿತು. ಗೌರಿಯ ಮಗುವನ್ನ ಗೌರಿಯ ತಾಯಿ ಎತ್ತಿಕೊಂಡು ಆ ಮುದ್ದು ಮಗುವಿನ ಮುಖ ಕಂಡಾಗ ಅವರಿಗೆ ಅಲ್ಪ ಮಟ್ಟಿನ ಸಮಾಧಾನವಾಯಿತು. ಮಗಳು ಸತ್ತು ಮೊಮ್ಮಗಳಾಗಿ ಹುಟ್ಟಿದ್ದಾಳೆ ಎಂದಂದುಕೊಂಡರು.
ಗೌರಿ ಮುತ್ತೈದೆಯಾಗಿ ಮರಣ ಹೊಂದಿದ್ದರಿಂದ ಆಕೆಯನ್ನು ಮದುಮಗಳಂತೆ ಅಲಂಕರಿಸಿದರು. ಚಾಪೆಯನ್ನು ಹಾಸಿ, ಅದರ ಮೇಲೆ ದರ್ಭೆಯನ್ನು ಹಾಕಿ, ಅದರ ಮೇಲೆ
ದಕ್ಷಿಣಾಭಿಮುಖವಾಗಿ ಕೈ ಕಾಲು ಮಡಚಿ ಮಲಗಿಸಿದರು. ಸ್ವಾಮಿಗಳಂದಂತೆ ಗೌರಿಯ ತಂದೆ ಮಾಡುತ್ತಿದ್ದರು. ತೆಂಗಿನ ಕಾಯಿಯನ್ನು ಸಮನಾಗಿ ಎರಡು ಭಾಗ ಮಾಡಿ, ಎಣ್ಣೆ ಹಾಕಿದ ದೀಪವನ್ನು ತಲೆಯ ಹತ್ತಿರ ಇಟ್ಟರು. ಸ್ವಾಮಿಗಳು ತಮ್ಮ ಬಳಿಯಿದ್ದ ಗಂಗೋದಕವನ್ನು ಕೊಟ್ಟು ಮನೆಯವರೆಲ್ಲರೂ ಗಂಗೋದಕವನ್ನು ಗೌರಿಯ ಬಾಯಿಗೆ ಬಿಡುವಂತೆ ಸೂಚಿಸಿದರು.ಎಲ್ಲರೂ ಹಾಗೆ ಮಾಡಿದ ನಂತರ ಮುಂದಿನ ಕ್ರಿಯೆಗಳನ್ನು ಗೌರಿಯ ತಂದೆ ತಾಯಿ ಮಾಡಿದರು. ಗೌರಿಯ ದೇಹವನ್ನು ಕಟ್ಟಿಗೆಯ ಮೇಲಿಟ್ಟಾಗ ಸದಾಶಿವ ತನ್ನೆದೆಗೆ ಕೊಳ್ಳಿಯನ್ನು ಇಡುತ್ತಿದ್ದಾರೆ ಎನ್ನುವಂತೆ ನೋವನ್ನು ಪಟ್ಟ. *ಹೋದವರು ಹೋದರು, ಹೋದವರತ್ತ ನಾವು ಹೋಗಲಾರೆವು ,ಆದರೆ ಅವರು ಉಳಿಸಿಹೋದ ಸಿಹಿ ಕಹಿ ನೆನಪುಗಳು ಎಂದಿಗೂ ಮಾಸುವುದಿಲ್ಲ* ಚಿತೆಯಲ್ಲಿ ಗೌರಿ ಉರಿಯುತ್ತಿದ್ದಳು, ಚಿಂತೆಯಲ್ಲಿ ಸದಾಶಿವ ಉರಿಯುತ್ತಿದ್ದ.ಗೌರಿಯ ಆತ್ಮ ಮೋಕ್ಷ ಹೊಂದಿ ದೇವರ ಪಾದ ಸೇರಿಕೊಂಡಿತ್ತು.ಈ ಪ್ರಪಂಚದಿಂದ ಮುಕ್ತಿ ಹೊಂದಿ ಅನಂತವಾದ ಶಾಂತಿಯನ್ನು ಗೌರಿಗೆ ದೊರಕಿತು. ಆದರೆ ಬದುಕಿ ಉಳಿದವರು ನಿರಂತರವಾಗಿ ಅವಳ ನೆನಪಲ್ಲೇ ಕಾಲ ಕಳೆಯುವರು.ಗೌರಿಯ ಅಂತ್ಯಕ್ರಿಯೆಯನ್ನು ಮುಗಿಸಿ ಊರವರೆಲ್ಲರೂ ಅಲ್ಲಿಂದ ಹೊರಟು ನಿಂತರು. ಸದಾಶಿವ ಮತ್ತು ಅವನ ತಂದೆ ತಾಯಿ ,ಗೌರಿಯ ತಂದೆ ತಾಯಿ ,ಅಂದು ಆಶ್ರಮದಲ್ಲೇ ನಿಂತರು. ಸ್ವಾಮಿಗಳ ಬಳಿಯಾದರೂ ಮನಶ್ಶಾಂತಿ ಸಿಗಲೆಂದು ಅವರ ಮನಸ್ಸಿನಲ್ಲಿತ್ತು. ಮನಸ್ಸಿಗಾದ ಗಾಯವನ್ನು ಮರೆಯಲು ಆಶ್ರಮ ಶಾಂತಿಯ ತಾಣವಾಗಿತ್ತು. ಸ್ವಾಮಿಗಳು ಆಧ್ಯಾತ್ಮಿಕವಾದ ಕುರಿತಾದ ವಿಚಾರಗಳನ್ನು ಹಂಚಿದರು. ಗೌರಿಯ ಸಾವಿನ ನೋವನ್ನು ಮರೆಯಲು ಎಲ್ಲರೂ ಸ್ವಾಮಿ ಹೇಳಲಿರುವ ವಿಚಾರಗಳತ್ತ ಗಮನ ಹರಿಸಿದರು. *ಈ ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ,ಎಲ್ಲವೂ ಒಂದು ದಿನ ನಶಿಸಿ ಹೋಗುತ್ತದೆ ,ಅದರಲ್ಲಿ ಉಳಿಯುವುದೊಂದೇ ಜೀವಾತ್ಮ ,ಅದನ್ನು ಸದಾ ಸಂತೋಷದಿಂದಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ*
ಮುಂದುವರಿಯುವುದು
✍🏻 *ನಾಗಶ್ರೀ ಎಸ್ ಭಂಡಾರಿ* *ಮೂಡಬಿದಿರೆ*

Comments
Post a Comment