ಸದಾಶಿವ - ಸಂಚಿಕೆ - 56
*ಸದಾಶಿವ*
*ಸಂಚಿಕೆ - 56*
ಅಷ್ಟರಲ್ಲಿ ಗೌರಿಯ ತಂದೆ ತಾಯಿಯೂ ಆಶ್ರಮದ ಬಳಿ ಬಂದಾಗಿತ್ತು. ಆಗ ಮುಂಜಾನೆ ನಾಲ್ಕು ಗಂಟೆ ಗೌರಿ ;ಗೌರಿ; ಎಂದು ಕರೆಯುತ್ತಾ ಗೌರಿಯ ತಂದೆ ತಾಯಿ ಆಶ್ರಮದ ಬಳಿ ಬಂದರು. ಬಂದವರೇ ಸ್ವಾಮಿಗಳ ಕಾಲಿಗೆರಗಿ ನನ್ನ ಮಗಳೆಲ್ಲಿ ಎಂದು ಆರ್ತರಾಗಿ ಕೇಳಿದಾಗ, ಗೌರಿಯ ಶವವನ್ನು ಮಲಗಿಸಿದ್ದ ಕೋಣೆಯತ್ತ ಕೈತೋರಿಸಿದರು.
ಲಗು ಬಗೆಯಿಂದ ಸ್ವಾಮಿಗಳು ತೋರಿಸಿದ ಕೋಣೆಯತ್ತ ಓಡಿದರು. ಕಾಷಾಯ ವಸ್ತ್ರದ ಹೊದಿಕೆಯನ್ನು ಹೊದ್ದುಕೊಂಡು ಮಲಗಿದ್ದ ಗೌರಿಯನ್ನು ಕಂಡವರಿಗೆ ವಸ್ತುಸ್ಥಿತಿಯ ಅರಿವಾಯಿತು. ಗೌರಿ ಇನ್ನಿಲ್ಲ ಎಂಬುದು ತಿಳಿಯಿತು. ಸತ್ತ ಮೇಲೂ ಗೌರಿಯ ಮುಖ ಸಾತ್ವಿಕ ಕಳೆಯಿಂದ ಮಿಂಚುತ್ತಿತ್ತು. ಹಣೆಯಲ್ಲಿ ಕುಂಕುಮ ಹೊಳೆಯುತ್ತಿತ್ತು. ತುಟಿಯಲ್ಲಿ ಕಾಣದ ನಗುವಿತ್ತು .ದೇವರ ಬಳಿ ಹೋಗುತ್ತಿದ್ದೇನೆ ಎಂಬ ಆನಂದ ಆ ಮುಖದಲ್ಲಿತ್ತು .ಸತ್ತ ಮೇಲೆ ದೇಹದಲ್ಲಿ ಬದಲಾವಣೆಗಳಾಗುತ್ತವೆ, ಆದರೆ ಗೌರಿ ಬದುಕಿದ್ದಾಗ ಹೇಗಿದ್ದಳೋ ಸಾವಿನಲ್ಲೂ ಅವಳಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ .ಸಾಕ್ಷ್ಯತ್ ದೇವತೆಯಂತೆ ಕಾಣುತ್ತಿದ್ದಳು .ಗೌರಿ ಸತ್ತಿದ್ದಾಳೆ ಎಂದು ಹೇಳಲು ಸಾಧ್ಯವಿರಲಿಲ್ಲ, ಪ್ರಶಾಂತವಾಗಿ ನಿದ್ರಿಸುತ್ತಿದ್ದಂತೆ ಕಾಣುತ್ತಿತ್ತು.ಮಗಳಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಗೌರಿಯ ತಂದೆ ತಾಯಿಗಳಿಗೆ; ಮಗಳು ಆಧ್ಯಾತ್ಮ ಕಡೆಗೆ ಮನಸ್ಸು ಹೊರಳಿಸಿ ಆಶ್ರಮಕ್ಕೆ ಬಂದಿದ್ದಾಳೆಂದು ಅವರಿಗೆ ತಿಳಿಯಿತು, ಅಧ್ಯಾತ್ಮವೆಂದರೆ ಪಾರಮಾರ್ಥಿಕ ಚಿಂತನೆ ಮಾಡುವುದು ಎಂದರ್ಥ, ಗೌರಿ ನೆಮ್ಮದಿಯ ಬದುಕಿಗೆ ಆಧ್ಯಾತ್ಮದತ್ತ ಹೊರಳಿದ್ದು ,ಗೌರಿಯನ್ನು ಕುರಿತಾಗಿ ಸ್ವಾಮಿಗಳು ಒಂದು ಮಾತು ಹೇಳಿದರು ಮಾನವನು ಜನಿಸುವಾಗ ಮೂರು ಋಣ (ಸಾಲವನ್ನು) ಹೊಂದಿರುತ್ತಾನೆ ,ದೇವರಋಣ,ಖುಷಿ ಋಣ ಮತ್ತು ಪಿತೃ ಋಣ ಎಂದು, ನಾವು ನಮ್ಮ ತಂದೆ ತಾಯಿಗಳನ್ನು ಬದುಕಿರುವವರೆಗೆ ಪ್ರೀತಿಯಿಂದ ನೋಡಿಕೊಳ್ಳಬೇಕು, ಅವರು ನಮ್ಮನ್ನು ಸಾಕಿ ಸಲಹಿ ನಮ್ಮ ಏಳಿಗೆಗಾಗಿ ಪಟ್ಟ ಶ್ರಮವನ್ನು ಎಂದೂ ಮರೆಯಬಾರದು,ಮಕ್ಕಳಾದವರು ಅವರಿಗೆ ಕಷ್ಟಕೊಟ್ಟರೆ ಅವರ ಶಾಪ ಮತ್ತು ಕಣ್ಣೀರು ಮುಂದೆ ಮಕ್ಕಳ ಜೀವನದಲ್ಲಿ
ಪ್ರವಾಹದಷ್ಟೇ ಕಠಿಣ ಅಲ್ಲದೇ ಸರ್ವನಾಶವಂತೂ ಖಚಿತ.ಪಿತೃಗಳು ದೇವರಂತೆ ಅವರನ್ನು ನಾವು ಸಂತೋಷದಿಂದ ನೋಡಿಕೊಂಡು ಆಮೇಲೆ ಅವರಿಗೆ ಸದ್ಗತಿ ಅಥವಾ ಮೋಕ್ಷ ಮಾರ್ಗ ಹೊಂದಲುಬೇಕಾದ ಕ್ರಿಯೆ, ಕರ್ಮ ,ದಾನ, ಧರ್ಮ ಮೊದಲಾದವುಗಳನ್ನು ಮಾಡಬೇಕು ,ಆದರೆ ಗೌರಿ ಅದಾವುದನ್ನು ಮಾಡಲು ಪಡೆದುಕೊಂಡು ಬರಲಿಲ್ಲ, ಆಕೆ ಸಣ್ಣ ಪ್ರಾಯದಲ್ಲಿ ಅಸುನೀಗಿದಳು, ಪಿತೃಋಣ ವನ್ನು ತೀರಿಸಬೇಕಾದ ನಿಮ್ಮ ಮಗಳಿಗೆ ಪುತ್ರಿಯ ಸಾವನ್ನು ಬರಿಸುವ ಶಕ್ತಿ ಆ ಭಗವಂತ ನೀಡಲಿ, ಎಂದಾಗ ಗೌರಿಯ ತಂದೆ ಜೋರಾಗಿ ಅತ್ತರು .ಆದರೆ ಸ್ವಾಮಿಯ ಮಾತುಗಳು ಸದಾಶಿವನ ಮೇಲೆ ಗಾಢವಾದ ಪರಿಣಾಮವನ್ನೇ ಬೀರಿತು, ನನ್ನಿಂದಾಗಿ ನನ್ನ ತಂದೆ ತಾಯಿಗಳು ಎಷ್ಟೊಂದೆಲ್ಲ ನೋವನ್ನು ಅನುಭವಿಸಿದರು,ಆದರೆ ಒಂದು ಬಾರಿಯೂ ನನ್ನನ್ನು ಗದರಲಿಲ್ಲ., ನೋಯಿಸಲಿಲ್ಲ ,ಅವರ ಈ ಇಳಿವಯಸ್ಸಿನಲ್ಲಿ ನಾನು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವರಿಷ್ಟದಂತೆ ನಾನು ಬದುಕಬೇಕು ಎಂಬ ಸಂಕಲ್ಪವನ್ನು ಮಾಡಿಕೊಂಡ.
ಮುಂದುವರೆಯುವುದು
✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡಬಿದಿರೆ*

Comments
Post a Comment