ಸದಾಶಿವ - ಸಂಚಿಕೆ - 55
*ಸದಾಶಿವ*
*ಸಂಚಿಕೆ - 55*
ಅತ್ತು ಅತ್ತು ಸುಸ್ತಾಗಿದ್ದ ಸದಾಶಿವ ವೇಗವಾದ ಹೆಜ್ಜೆ ಹಾಕುತ್ತಾ ಗೌರಿಯ ತಂದೆ ತಾಯಿಗಳ ಮನೆ ಬಾಗಿಲಿಗೆ ಬಂದು ಬಾಗಿಲು ತಟ್ಟ ತೊಡಗಿದ.ಈ ನಡುರಾತ್ರಿಯಲ್ಲಿ ಯಾರು ಬಾಗಿಲು ಬಡಿಯುತ್ತಿದ್ದಾರೆ ;ಎಂದು ಹೊರ ಬಂದು ನೋಡಿದಾಗ, ಕೆಂಪಡರಿದ ಕಣ್ಣುಗಳನ್ನು ಹೊತ್ತ ಸದಾಶಿವ ಎದುರು ನಿಂತಿದ್ದ.ಅವನನ್ನು ಕಂಡು ಗಾಬರಿಯಾದ ಗೌರಿಯ ತಂದೆ ತಾಯಿ ಹೆದರಿ ಹೋದರು. ಒಳ ಬಾರೆಂದು ಕರೆದರು; ಆದರೆ ಸದಾಶಿವ ಹೊಸಿಲಲ್ಲೇ ನಿಂತು ನಿಮ್ಮ ಮಗಳು ಗೌರಿ ಆಶ್ರಮದಲ್ಲಿ ಇದ್ದಾಳೆ, ನೀವು ಬೇಗನೆ ಹೊರಡಿ; ಎಂದು ಅವಸರಪಡಿಸಿದ. ಗೌರಿ ಸಿಕ್ಕ ಸಂತೋಷದಲ್ಲಿ ಗೌರಿಯ ತಂದೆ; ತನ್ನ ತಂದೆ ಶ್ರೀಪತಿ ರಾಯರ ಬಳಿಗೋಡಿದ. ಮೊಮ್ಮಗಳು ಸಿಕ್ಕ ಖುಷಿಯಲ್ಲಿ ಶ್ರೀಪತಿ ರಾಯರು ಕೂಡ ಅವರ ಜೊತೆ ಹೊರಟುನಿಂತರು. ಆದರೆ ಈ ಅಪರಾತ್ರಿಯಲ್ಲಿ ಸದಾಶಿವನಿಗೆ ಗೌರಿ ಹೇಗೆ ಸಿಕ್ಕಳು.ಅವನೇಕೆ ಗಾಬರಿಯಾಗಿದ್ದಾನೆ ಎಂಬ ಅನುಮಾನವೂ ಕಾಡಿತು. ಕೇಳಿಯೂ ಬಿಟ್ಟರು.ಆಗ ಸದಾಶಿವನಿಗೆ ಏನು ಹೇಳಬೇಕೆಂದು ತೋಚಲಿಲ್ಲ ,ಆದರೂ ಗೌರಿ ಸತ್ತಿರುವ ವಿಚಾರವನ್ನು ಮುಚ್ಚಿಟ್ಟು ಗೌರಿ ತೊಂದರೆಯಲ್ಲಿದ್ದಾಳೇ, ನಾವು ಬೇಗನೇ ಹೊರಡಬೇಕು ಎಂದು ಹೇಳಿದ, ಸರಿ ಎಂದು ಎಲ್ಲರೂ ಸದಾಶಿವನ ಜೊತೆ ವೇಗವಾಗಿ ಹೆಜ್ಜೆ ಹಾಕತೊಡಗಿದರು.ಗೌರಿ ಸಿಕ್ಕ ಸಂತೋಷದಲ್ಲಿ ಕಲ್ಲು ಮುಳ್ಳು ಎಂಬುದನ್ನು ಮರೆತು ನಡೆಯತೊಡಗಿದರು. ತಂದೆ ತಾಯಿಯ ಪ್ರೀತಿಯೇ ಹಾಗೆ ; ಹುಟ್ಟಿದಾಗಿನಿಂದ ಆರೈಕೆ ಮಾಡಿ ,ಮುದ್ದಿನಿಂದ ಬೆಳೆಸಿ, ಅನಾರೋಗ್ಯವಾದಾಗ ಮದ್ದು ನೀಡಿ, ಸಂಭ್ರಮದ ಸಂದರ್ಭದಲ್ಲಿ ಅಲಂಕಾರ ಮಾಡಿ, ಯಾರದೇ ದೃಷ್ಟಿ ಬೀಳಬಾರದೆಂದು ನೆಟಿಕೆ ಮುರಿದು ,ಮುದ್ದು ಮಗಳೆಂದು ಅವಳು ಬಯಸಿದ್ದೆಲ್ಲ ನೀಡಿ ವಿದ್ಯೆಯನ್ನು ನೀಡಿ ಗೌರಿ ಇಷ್ಟಪಟ್ಟಂತೆ ಕೆಲಸಕ್ಕೂ ಕಳುಹಿಸಿದ್ದರು ಗೌರಿಯ ತಂದೆ ತಾಯಿ. ಅವರಿಗಷ್ಟೋಂದು ನಂಬಿಕೆ ಮಗಳ ಮೇಲೆ. ಹೆಣ್ಣು ಮಕ್ಕಳೆಂದರೆ ಹಾಗೇ ಪುಟ್ಟ ಮಗು ವಿರುವಾಗ ಗೆಜ್ಜೆಯ ನಾದದ ಇಂಪು, ಬೆಳೆದಂತೆಲ್ಲಾ ಹುಣ್ಣಿಮೆ ಚಂದಿರನಂತಹ ನಗು, ಮದುವೆ ಮಾಡಿಸಿ ಕೊಟ್ಟಾದ ಮೇಲೆ ಬಣಗುಡುವ ಮನೆ, ಇವೆಲ್ಲಾ ಹೆಣ್ಣಿರುವ ಮನೆಯಲ್ಲಿ ಸಾಮಾನ್ಯ, ಗೌರಿಯು ತಾಯಿ ತಂದೆಗೆ ತಕ್ಕ ಮಗಳಾಗಿದ್ದಳು. ಆದರೆ ಕುಮಾರನ ಜೊತೆಗಿನ ಮದುವೆ ಅವಳ ಜೀವನವನ್ನೆ ಅಲ್ಲೋ ಅಲ್ಲೋಲ ಮಾಡಿ ಬಿಟ್ಟಿತು. ಬಾಲ್ಯದಲ್ಲಿ ಗೌರಿಯ ಜೊತೆಗಿನ ಒಡನಾಟ, ನಗು, ತಂಟೆ,ತಮಾಷೆಯ ಬಗ್ಗೆ ಯೋಚಿಸುತ್ತಾ ಬರುತ್ತಿದ್ದ ಸದಾಶಿವ, ಇತ್ತ ಗೌರಿಯ ತಂದೆ ತಾಯಿ ಕೂಡ ಮಗಳ ಯೋಚನೆಯಲ್ಲೇ ಹೆಜ್ಜೆ ಹಾಕುತ್ತಿದ್ದರು.ಅತ್ತ ಕಡೆ ಸ್ವಾಮಿಗಳು ಗೌರಿಯ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಸ ತೊಡಗಿದರು. ಅಷ್ಪರಲ್ಲಿ ಗೌರಿಯ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು ,ತಾಯಿಯ ಎದೆ ಹಾಲನ್ನು ಸವಿಯ ಬೇಕಾಗಿದ್ದ ಆ ಮುದ್ದು ಕಂದಮ್ಮ ಆಕಾಶ ಭೂಮಿ ಒಂದು ಮಾಡುವಂತೆ ಜೋರಾಗಿ ಕಿರುಚುತ್ತಿತ್ತು. ದೇವರದೆಷ್ಟು ಕ್ರೂರಿ ಎಂದೆನಿಸದೇ ಇರಲಾರದು ಆ ಸಂದರ್ಭವನ್ನು ನೆನೆಸಿಕೊಂಡಾಗ, ಆಶ್ರಮವಾಸಿಗಳಂಥು ಮಗುವನ್ನು ಹೇಗೆ ಸಮಾಧಾನಿಸುವುದೆಂದು ತಿಳಿಯದಾದರು.ಆ ದೇವರೇ ಸೂಲಗಿತ್ತಿಯ ರೂಪದಲ್ಲಿ ಬಂದಿದ್ದನೋ ಏನೋ! ಸೂಲಗಿತ್ತಿ ಕೂಡಾ ಮಗುವನ್ನು ಹೆತ್ತು ಎಂಟು ತಿಂಗಳಾಗಿತ್ತಷ್ಟೇ, ತನ್ನ ಎದೆಹಾಲನ್ನೇ ಆ ಮಗುವಿಗೆ ಉಣಿಸತೊಡಗಿದಳು. ತನಗೆ ಸಿಕ್ಕ ಅಮೃತದಿಂದ ಮಗುವಿನಳವೂ ನಿಂತಿತು. ಸೂಲಗಿತ್ತಿ ಮಗುವನ್ನೆತ್ತಿ ಎದೆಗಾನಿಸಿಕೊಂಡಳು..
ಮುಂದುವರಿಯುವುದು
✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡುಬಿದಿರೆ*

Comments
Post a Comment