ಕ್ಷಣ ಕ್ಷಣವೂ ಕಾತುರ - ರತೀಶ್ ಭಂಡಾರಿ ಕುಂಜಿಬೆಟ್ಟು
ಕ್ಷಣ ಕ್ಷಣವೂ ಕಾತುರ
ಕ್ಷಣ ಕ್ಷಣವೂ ಕಾತುರ.....
ನಿನ್ನ ಸೇರುವ ಆತುರ.....
ನಿನ್ನ ಸೇರುವ ಆ ದಿನ.....
ನನ್ನ ಮನಸ್ಸಿಗೆ ಅದುವೇ ಸುದಿನ....
ಜೀವನದುದ್ದಕ್ಕೂ ಬರುವುದು ನೋವು ನಲಿವು.....
ನೀನಿಲ್ಲದೆ ನನಗೆಲ್ಲಿದೆ ಗೆಲುವು.....
ನಿನ್ನ ಗುಂಗಲ್ಲೆ ಆಗಿರುವೆ ನಾ ಸೆರೆ.....
ಬಡಪಾಯಿ ಈ ಜೀವಕ್ಕೆ ಆಗುನೀ ಆಸರೆ.....
ನಿನ್ನ ಕಣ್ಣಂಚಿನ ನೋಟವ ಅನುಭವಿಸಿ ನಾನಾದೆ ಭೋಗಿ.....
ನಿನ್ನ ಪ್ರೀತಿಯ ಕರುಣಿಸದೆ ಮಾಡದಿರು ಖಾಲಿ ಕೈಯ ಜೋಗಿ....
ಹೆಜ್ಜೆ ಹೆಜ್ಜೆ ಜೋಡಿಸುತ್ತಾ ತಲುಪ ಬಲ್ಲೆನೇ ಪ್ರೀತಿಯ ಗಿರಿ.....
ನಿನ್ನ ಸೇರಲು ಶೃಂಗರಿಸಿ ಬಂದಿರುವೆ, ನೀನೇ ನನ್ನ ಪ್ರೇಮದ ಗುರಿ.....
ಕ್ಷಣ ಕ್ಷಣವೂ ಕಾತುರ.....
ನಿನ್ನ ಸೇರುವ ಆತುರ.....
✍🏾ರತೀಶ್ ಭಂಡಾರಿ ಕುಂಜಿಬೆಟ್ಟು

Super written brooi
ReplyDelete