ಸದಾಶಿವ - ಸಂಚಿಕೆ - 54
ಸದಾಶಿವ
ಸಂಚಿಕೆ - 54
ಏನಾಯಿತೆಂದು ಗಾಬರಿಯಿಂದ ,ಗೌರಿ ಇದ್ದ ಗುಡಿಸಲಿನ ಒಳಹೊಕ್ಕ ಸ್ವಾಮಿಗಳಿಗೆ ಆಘಾತ ಕಾದಿತ್ತು. ಹೆರಿಗೆಯ ಸುಸ್ತಿನಿಂದ ಮಲಗಿದ್ದಾಳೆ ಎಂದು ಭಾವಿಸಿದ್ದ ಸೂಲಗಿತ್ತಿ ಗೌರಿ ಮಗುವನ್ನು ಹೆತ್ತು ದೇವರ ಪಾದ ಸೇರಿಕೊಂಡಿದ್ದಾಳೆ ಎಂಬುದನ್ನು ಗ್ರಹಿಸಿ ಕೊಳ್ಳುವುದರಲ್ಲಿ ವಿಫಲರಾದಳು.ಕಷ್ಟದ ಸರಮಾಲೆಯನ್ನೇ ಬೆನ್ನಿಗಂಟಿಕೊಂಡು ಜೀವಿಸಿದ್ದ ಗೌರಿ ತನ್ನ ಮುದ್ದು ಕಂದಮ್ಮನ ಮುಖವನ್ನು ನೋಡಲಾರದೆ ನತದೃಷ್ಟ ತಾಯಿಯಾಗಿ ಅಸುನೀಗಿದ್ದಳು.ಗೌರಿ ಸದಾಶಿವನಿಗೂ ಸಿಗಲಿಲ್ಲ. ಅಂದು ಬೆಂಕಿಗಾಹುತಿಯಾದ ಸತಿಯಂತೆ ಗೌರಿ ಸದಾಶಿವನ ಪ್ರೇಮವನ್ನು ಪಡೆಯದೆ ಅಸುನೀಗಿದಳು.ಆಶ್ರಮ ವಾಸಿಗಳೆಲ್ಲರೂ ನಿಜವಾಗಿ, ಬಂಧನಗಳಿಂದ ಅತೀತರು;ಆದರೆ ಗೌರಿಯ ಸಾವು ಅವರನ್ನು ಒಂದರೆಕ್ಷಣ ಕಣ್ಣೀರಿಡುವಂತೆ ಮಾಡಿತು. ಸ್ವಾಮಿಗಳ ಜತೆಗೆ ಏನಾಯಿತೆಂದು ಕುತೂಹಲದಿಂದ ಬಂದ ಸದಾಶಿವನಿಗೆ ಅಲ್ಲಿ ಕಂಡ ಗೌರಿಯ ಹೆಣ! ಶಾಂತಿಯಿಂದ ಬಂದವನಿಗೆ ಶಾಶ್ವತವಾದ ಅಶಾಂತಿಯನ್ನು ನೀಡಿತ್ತು. ಗೌರಿಯ ಹುಡುಕಾಟದಲ್ಲಿ ಎಷ್ಟೋ ಬಾರಿ ನಿರಾಸೆ
ಹೊಂದಿದ್ದನಾದರೂ ಗೌರಿ ತನಗೆ ಸಿಕ್ಕೇ ಸಿಗುವಳೆಂಬ ಭರವಸೆಯಲ್ಲಿದ್ದ. ಸದಾಶಿವನಿಗೆ ಆಕೆ ಶವವಾಗಿ ತನ್ನ ಕಣ್ಣೆದುರು ಬರವಳೆಂಬ ಕಲ್ಪನೆ ಕೂಡ ಇರಲಿಲ್ಲ.ಗೌರಿ!!
ಎಂದರಚುತ್ತಾ ಗೌರಿಯ ಶವದ ಪಕ್ಕ ಕುಳಿತು;ಅವಳ ತಲೆಯನ್ನು ತನ್ನ ಮಡಿಲ ಮೇಲಿಟ್ಟುಕೊಂಡು ಅಳತೊಡಗಿದ. ದೇವರೆ ನಾವೇನು ಪಾಪ ಮಾಡಿದ್ದೇವೆ ಎಂದು ನನ್ನ ಪ್ರೀತಿ ಪಾತ್ರರನ್ನೆಲ್ಲಾ ನನ್ನಿಂದ ದೂರ ಮಾಡುತ್ತಿರುವೆ, ಮನಸಾರೆ ಪ್ರೀತಿಸಿದ ಗೌರಿಯಿಂದ ಶಾಶ್ವತವಾಗಿ ದೂರ ಮಾಡಿದೆ ,ನನ್ನ ನನ್ನ ತಮ್ಮ ವಿಜಯನನ್ನು ಮರೆ ಮಾಡಿದೆ ;ಏಕೆ ನನಗೀ ಘೋರ ಶಿಕ್ಷೆ. ಸ್ವಾಮಿಗಳೇ ನೀವು ದೈವ ಭಕ್ತರಲ್ಲವೇ !ನೀವು ದೇವರ ದೂತರೇ ಅಲ್ಲವೇ ?ನನ್ನ ಗೌರಿಯನ್ನು ಬದುಕಿಸಿಕೊಡಿ ನನಗಾಗಿ ಅವಳಿಗೆ ಉಸುರಿ ನೀಡಿ ಎಂದು ಅಸಹಾಯಕನಂತೆ ಅವರೆದುರು ಬೇಡಿದ. ಆದರೆ ಸ್ವಾಮಿಗಳೇನೂ ಮಾಡಲು ಸಾಧ್ಯ ಅವರು ದೇವರ ಆರಾಧಕರೇ ಹೊರತು ,ದೇವರಲ್ಲ! ಹುಟ್ಟು ಸಾವು ನಿರಂತರ; ಸಾವಿನಲ್ಲಿ ದಯೆಯನ್ನು ಹೇಗೆ ತೋರಿಸಲು ಸಾಧ್ಯ ಹುಟ್ಟಿದವನು ಸಾಯಲೇ ಬೇಕು ;ಗೌರಿಯ ಆಯಸ್ಸು ಇಷ್ಟೇ ಎಂದು ವಿಧಿಲಿಖಿತ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ,ಹೋದವರು ಹೋದರು ಅವರ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಬೇಕೆ ಹೊರತು ಅತ್ತರೇನು ಪ್ರಯೋಜನ? ಸದಾಶಿವನನ್ನು ನಯವಾದ ಮಾತುಗಳಿಂದ ಸಮಾಧಾನಿಸಿದ ಸ್ವಾಮಿಗಳು ಮುಂದಿನ ಕಾರ್ಯಕ್ಕೆ ಸಿದ್ಧನಾಗು ಎಂದರು ,ದೇವರ ಚಿತ್ತದಲ್ಲಿ ಗೌರಿಯ ಮಗು ತನ್ನ ತಾಯಿಯ ಪ್ರೀತಿ ಇಲ್ಲದೆ ಬಾಳಬೇಕೆಂದು ಬರೆದಿದ್ದಿತೇನೋ, ತಾಯಿಯ ಎದೆ ಹಾಲು, ಬಿಸಿ ಅಪ್ಪುಗೆಯು ಮಡಿಲ ನಿದ್ರೆಯೂ, ಪ್ರೀತಿಯ ಕರೆ ಯಾವುದೂ ಇಲ್ಲದೆ ಆ ಮಗು ಹೇಗೆ ಬಾಳಲಿದೆಯೋ ಆ ದೇವರೇ ಬಲ್ಲ !ಆದರೆ ಒಂದಂತೂ ಖಚಿತ ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುವುದಿಲ್ಲ ;ಆ ಮಗುವಿಗೆ ಖಂಡಿತ ಒಳ್ಳೆಯ ಭವಿಷ್ಯವನ್ನು ಕೊಟ್ಟೇ ಕೊಡುತ್ತಾನೆ. ಅಲ್ಲಿಯವರೆಗೆ ಕಾಯಬೇಕಷ್ಟೆ.ಇತ್ತ ಸದಾಶಿವ ಭಾರವಾದ ಮನಸ್ಸಿನಿಂದ ಹೊರ ಬಂದು ಗೌರಿಯ ತಂದೆ ತಾಯಿಗಳಿಗೆ ವಿಷಯವನ್ನು ಮುಟ್ಟಿಸಲೇ ಎಂದು ಸ್ವಾಮಿಗಳಲ್ಲಿ ಕೇಳಿದಾಗ, ಸ್ವಾಮಿಗಳು ಸರಿ ಎಂದು ತಲೆಯಲ್ಲಾಡಿಸಿದರು. ಸದಾಶಿವ ಗೌರಿಯ ತಂದೆ ತಾಯಿಗಳಿಗೆ ಸುದ್ದಿ ಮುಟ್ಟಿಸಲು ಹೊರಟು ನಿಂತ..
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡಬಿದಿರೆ

Comments
Post a Comment