ಸದಾಶಿವ - ಸಂಚಿಕೆ - 52
ಸದಾಶಿವ
ಸಂಚಿಕೆ - 52
ಸದಾಶಿವ ಇನ್ನೂ ನಮ್ಮ ಜೊತೆ ಇದ್ದರೆ ಗಂಗಾ ಅವನ ನೆನಪಿನಲ್ಲಿ ಉಳಿದು ಯೋಚನೆಯಲ್ಲೇ ಕೃಷಳಾಗಿ ಬಿಡಬಹುದು ಎಂದು ಚಿಂತಿಸಿ, ಸದಾಶಿವನನ್ನು ಹೇಗಾದರೂ ಮಾಡಿ ಇಲ್ಲಿಂದ ದೂರ ಕಳುಹಿಸಬೇಕೆಂದು ಕೊಂಡರು..ಹೇಗೆ?ಎಂದು ಯೋಚಿಸತೊಡಗಿದಾಗ ಹಾ ಗಂಗಾಳಿಗೆ ಮದುವೆ ನಿಶ್ಚಯ ಮಾಡುತ್ತಿದ್ದೇನೆ ಮನೆಯಲ್ಲಿ ಬೇರೆ ಗಂಡಸಿದ್ದರೆ ಗಂಗಳನ್ನು ನೋಡಲು ಬರುವ ಗಂಡಿನ ಕಡೆಯವರು ಅಪಾರ್ಥ ಮಾಡಿಕೊಳ್ಳುತ್ತಾರೆಂದು ಹೇಳಿ ಹೊರಕಳಿಸಿ ಬಿಡಬೇಕೆಂಬ ನಿರ್ಧಾರ ಕೈಗೊಂಡರು. ಅದನ್ನು ಸದಾಶಿವನ ಬಳಿ ಹೇಳಿಯೂ ಬಿಟ್ಟರು.ಸದಾಶಿವನನ್ನು ಅದನ್ನು ತಪ್ಪಾಗಿ ತಿಳಿಯಲಿಲ್ಲ..ಹೆಣ್ಣಿನ ಚಾರಿತ್ರ್ಯ ಹರಣ ಎಂದಿಗೂ ಆಗಬಾರದು.ನಮ್ಮ ಭಾವನೆಗಳಲ್ಲಿ ಕೊಳಕಿಲ್ಲದಿದ್ದರೂ, ನೋಡುಗರ ದೃಷ್ಟಿಯಲ್ಲಿ ತಪ್ಪಾಗಿ ಕಾಣಬಹುದು.
ಸದಾಶಿವನು ಮಡಿಕೇರಿ ಇಡೀ ಹುಡುಕಿದರೂ ಗೌರಿ ಸಿಗದ ಕಾರಣ ಊರಿಗೆ ಹೊರಡುವ ನಿಶ್ಚಯ ಮಾಡಿಕೊಂಡಿದ್ದ. ಸುಬ್ರಹ್ಮಣ್ಯ ಸ್ವಾಮಿಯು ಅದೇ ಮಾತನ್ನು ಹೇಳಿದ್ದರಿಂದ ನನ್ನ ಸ್ನೇಹಿತೆಯಂತಿರುವ ಗಂಗಾಳ ಮದುವೆಗೆ ನನ್ನನ್ನು ತಪ್ಪದೇ ಕರೆಯಿರಿ,ಆಕೆ ನನ್ನ ತಂಗಿಯಂತೆ; ಅಣ್ಣನಂತೆ ಮುಂದೆ ನಿಂತು ಅವಳ ಮದುವೆಯನ್ನು ನೆರವೇರಿಸುತ್ತೇನೆ ಎಂದಾಗ; ಸುಬ್ರಹ್ಮಣ್ಯಸ್ವಾಮಿಗೆ ಸಂತೋಷ ದುಃಖ ಮಿಶ್ರಿತ ಅಳು ಬಂದುಬಿಟ್ಟಿತು. ಇಷ್ಟು ಉತ್ತಮ ಹೃದಯದ ಗಂಡು ನನ್ನ ಮಗಳಿಗೆ ದಕ್ಕಲಿಲ್ಲ ಎಂಬ ನೋವು ಕಾಡಿತು. ಸದಾಶಿವ ಮನೆ ಬಿಟ್ಟು ಹೋಗುತ್ತಿದ್ದಾನೆ ಎಂಬ ವಿಚಾರವನ್ನು ಕೇಳಿ ಗಂಗಾಳಿಗೆ ಬಹಳ ನೋವಾಯಿತು. ಬಯಸಿದ್ದು ಗಂಗಾಳಿಗೆ ಸಿಗದಿದ್ದರೂ ಸದಾಶಿವನಿಗೆ ಗೌರಿ ಸಿಗಲೆಂದು ಮನಸಾರೆ ಶಿವನನ್ನು ಪ್ರಾರ್ಥಿಸಿದಳು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ನಮ್ಮ ಪ್ರೀತಿ ಪಾತ್ರರನ್ನು ನಾವಾಗಿಯೇ ಬಿಟ್ಟು ಕೊಡುತ್ತೇವೆ ,ಅಂತಹ ಕಠಿಣ ಸಂದರ್ಭ ಯಾರಿಗೂ ಬರಬಾರದು, ಗಂಗಾಳ ಹೃದಯದೊಳಗಿನ ವಿಪ್ಲವ ಸದಾಶಿವ ಅರಿಯ ;ಏಕೆಂದರೆ ಅವನು ಗಂಗಾಳನ್ನು ತಂಗಿಯಂತೆ ಕಂಡಿದ್ದ. ಆದರೆ ಗಂಗಾ ಮುಂಜಾವಿನ ಮಂಜಿನ ಹನಿಯ ಬಯಸುವ ಹಸಿರೆಲೆಗಳಂತೆ, ಸಕ್ಕರೆಯ ಸಿಹಿಯ ಮುತ್ತುವ ಇರುವೆಗಳಂತೆ, ಹೂವಿನ ಮಕರಂದ ದಿಂದಲೇ ಜೀವಿಸುವ ಜೇನಿನಂತೆ ,ಮರವನ್ನಪ್ಪಿದ ಬಳ್ಳಿಯಂತೆ ,ಗಂಗಾ ಸದಾಶಿವನನ್ನು ಮೆಚ್ಚಿಕೊಂಡಿದ್ದು,ಅವಳದ್ದು ಕ್ಷಣಿಕ ಪ್ರೀತಿಯಲ್ಲ,ಅದು ಸದಾ ಹರಿವ ನೀರಿನಂತೆ ,ಬೀಸು ಗಾಳಿಯಂತೆ ನಿಶ್ಚಲ, ಶಾಶ್ವತ, ಗಂಗಾ ಸದಾಶಿವ ಹೊರಟು ನಿಂತಾಗ ಸದಾ; ನೀನು ಪ್ರೀತಿಸುತ್ತಿರುವ ಗೌರಿ ನಿನಗೆ ಸಿಗುವಂತಾಗಲಿ. ಇಬ್ಬರೂ ವಿವಾಹವಾಗಿ ಇಲ್ಲಿಗೊಮ್ಮೆ ಬನ್ನಿರಿ ಎಂದು ಹೇಳಿದಳು. ಆಗ ಅಪ್ರಯತ್ನವಾಗಿ ಗಂಗಾಳಿಗೆ ಕಣ್ಣೀರು ಬಂದಿತ್ತು.ಸದಾಶಿವ ಸರಿ ಎಂದು ತಲೆಯಲ್ಲಾಡಿಸಿ ಹೊರಟ.ಗಂಗಾಳಿಗೆ ತನ್ನ ಹೃದಯವೇ ಕಿತ್ತು ಸದಾಶಿವನ ಹಿಂದೆ ಹೋದಂತೆ ಭಾಸವಾಯಿತು.ಆದರೆಗಂಗಾಳ ಈ ನೋವು ಶಾಶ್ವತವಾಗಿರುವುದಿಲ್ಲ; ಅವಳ ಬಾಳಲ್ಲಿ ಆಶಾಕಿರಣ ಖಂಡಿತವಾಗಿಯೂ ಬರುತ್ತದೆ,ಆದರೆ ಕಾಯಬೇಕಷ್ಟೇ.! ಗೌರಿಯನ್ನು ಹುಡುಕಿಕೊಂಡು ಹೋದ ಸದಾಶಿವ ಒಬ್ಬಂಟಿಯಾಗಿ ಹಿಂತಿರುಗಿದ್ದನ್ನು ಕಂಡ ರಾಯರಿಗೆ ಮಗನಿಗೆ ಗೌರಿ ಸಿಗಲಿಲ್ಲ ಎಂಬ ಅರಿವಾಯಿತು, ಹೆಚ್ಚಿಗೆ ಏನೂ ಪ್ರಶ್ನಿಸಿದೆ ಮಗನನ್ನು ಒಳಗೆ ಕಳುಹಿಸಿ ಕೊಟ್ಟರು. ಸ್ವಲ್ಪ ದಿನ ಮಂಕಾಗಿದ್ದ ಸದಾಶಿವನನ್ನು ಭಕ್ತಿಯ ಅಳು, ನಗುವಿನ ನಗೆ ಮಲ್ಲಿಗೆಯು ಅವಳತ್ತ ಸೆಳೆಯಿತು. ಅವಳ ಜೊತೆ ಆಟವಾಡುತ್ತಾ ಸದಾ ಗೌರಿಯನ್ನು ಅಲ್ಪಮಟ್ಟಿಗೆ ಮರೆಯುತ್ತಾ ಹೋದ. ಇತ್ತ ತುಂಬು ಗರ್ಭಿಣಿ ಗೌರಿಗೆ ಹೆರಿಗೆ ನೋವು ಪ್ರಾರಂಭವಾಯಿತು.
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments
Post a Comment