ಸದಾಶಿವ - ಸಂಚಿಕೆ - 51
ಸದಾಶಿವ
ಸಂಚಿಕೆ - 51
ಗೌರಿಯ ಹುಡುಕಾಟದಲ್ಲಿ ಸದಾಶಿವನಿಗೆ ದಿನಗಳು ಕಳೆದದ್ದೇ ತಿಳಿಯಲಿಲ್ಲ. ಇತ್ತ ಗಂಗಾಳ ತಂದೆ ಸುಬ್ರಹ್ಮಣ್ಯ ಸ್ವಾಮಿ ಮದುವೆಯ ವಿಚಾರವನ್ನು ಮಾತನಾಡಲೆಂದು ಸದಾಶಿವನ ಬರುವಿಗಾಗಿ ಕಾಯುತ್ತಿದ್ದರು. ತಂದೆಯು ಯಾರ ಬರುವಿಕೆಗಾಗಿ ಇಷ್ಟೊಂದು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ! ಎಂದು ಅನುಮಾನಗೊಂಡು ಅಪ್ಪಾ; ಯಾರ ಬರವನ್ನು ನೀವು ಇಷ್ಟೊಂದು ಕಾತರದಿಂದ ನಿರೀಕ್ಷಿಸುತ್ತಿದ್ದೀರಿ ಎಂದು ಕೇಳಿದಳು.ಆಗ ಸುಬ್ರಹ್ಮಣ್ಯ ಸ್ವಾಮಿ ಮಗಳೇ ನಿನ್ನ ಮತ್ತು ಸದಾಶಿವನ ಮದುವೆಯ ವಿಚಾರವನ್ನು ಮಾತನಾಡಲು ಸದಾಶಿವನ ಬರುವನ್ನು ಕಾಯುತ್ತಿದ್ದೇನೆ ಎಂದು ಹೇಳಿದಾಗ; ಗಂಗಾಳಿಗೆ ದಿಗಿಲಾಯಿತು.ಈಗ ನಾನು ಸದಾಶಿವನ ಕುಟುಂಬ ಮತ್ತು ಗೌರಿಯ ವಿಚಾರವನ್ನು ಹೇಳದೆ ಇದ್ದ ಪಕ್ಷದಲ್ಲಿ ಸದಾಶಿವನಿಂದ ಬರುವ ಉತ್ತರಗಳನ್ನು ಕೇಳಿ ನನ್ನ ತಂದೆ ಕೋಪಗೊಳ್ಳಬಹುದು. ಅಥವಾ ಹೃದಯಾಘಾತವಾಗುವವಂಥ ನೋವನ್ನು ಅನುಭವಿಸಬಹುದು; ಹಾಗಾಗಿ ನಾನೇ ಸಮಾಧಾನದಿಂದ ಗೌರಿ ಸದಾಶಿವನ ವಿಚಾರವನ್ನು ಹೇಳಿ ಅವರ ಮನಸ್ಸನ್ನು ಪರಿವರ್ತಿಸಬೇಕೆಂದು ಕೊಂಡಳು. ಹಾಗೆಯೇ ತಂದೆಯ ಬಳಿ ಅಪ್ಪಾ ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹೇಳಬೇಕು ಎಂದಾಗ;ಸುಬ್ರಹ್ಮಣ್ಯ ಸ್ವಾಮಿ ಏನು ಮಗಳೇ;ಎಂದರು. ನಾನು ಸದಾಶಿವನನ್ನು
ಪ್ರೇಮಿಸಿದ್ದೇನೆ ನಿಜ! ಆದರೆ ಸದಾಶಿವ ನನ್ನನ್ನು ಯಾವತ್ತೂ ಪ್ರೇಮಿ ಎಂಬ ರೀತಿಯಲ್ಲಿ ನೋಡಿರಲಿಲ್ಲ ;ನನ್ನಲ್ಲಿ ಪ್ರೇಮದ ಭಾವನೆಯಿಂದ ಮಾತನಾಡಿರಲಿಲ್ಲ, ನಾನೇ ಅವರನ್ನು ಪ್ರೇಮಿಸಿದೆ.ಆದರೆ ಅವರ ಅಭಿಪ್ರಾಯವನ್ನು ಕೇಳಿಯೇ ಇರಲಿಲ್ಲ. ಆದರೆ ಅಂದು ಸದಾಶಿವನ ಜೊತೆ ದೇವಸ್ಥಾನಕ್ಕೆ ಹೋಗಿದ್ದಾಗ ನನ್ನ ಮನದ ಭಾವನೆಗಳನ್ನು ಹೇಳಬೇಕೆಂದು ಕೊಂಡಿದ್ದೆ.ಆದರೆ ನನಗಿಂತ ಮೊದಲೇ ಸದಾಶಿವ ತನ್ನ ಜೀವನ ವೃತ್ತಾಂತವನ್ನು ಹೇಳಿಬಿಟ್ಟಿದ್ದ.ಅಪ್ಪಾ! ಸದಾಶಿವನಿಗೆ ತಂದೆ, ತಾಯಿ ,ತಮ್ಮ ,
ತಂಗಿಯಂದಿದ್ದಾರೆ.ಹಾಗೆ ಅವನಿಗೆ ಒಬ್ಬಳನ್ನು ಪ್ರೇಮಿಸುತ್ತಿದ್ದಾನೆ. ಆದರೆ ಅವಳ ಮನೆಯವರು ಒತ್ತಾಯವಾಗಿ ಮದುವೆ ಮಾಡುತ್ತಾರೆಂದು ಹೆದರಿ ಸದಾಶಿವನನ್ನು ಹುಡುಕಿಕೊಂಡು ಮಡಿಕೇರಿಗೆ ಬಂದಿದ್ದಾಳಂತೆ.ಅವಳನ್ನು ಹುಡುಕಿಕೊಂಡು ಸದಾಶಿವ ಮತ್ತೆ ಇಲ್ಲಿಗೆ ಬಂದಿದ್ದಾನೆ ಎಂದು ಹೇಳಿದಳು.ಆದರೆ ಅವಳು ಗೌರಿಗೆ ಮರು ಮದುವೆ ಎಂಬ ವಿಚಾರವನ್ನು ಮುಚ್ಚಿಟ್ಟಳು. ಸುಬ್ರಹ್ಮಣ್ಯ ಸ್ವಾಮಿ ಮಗಳಂದ ಮಗಳನ್ನು ಮಾತುಗಳನ್ನು ಕೇಳಿ ಸ್ತಬ್ಧನಾದ. ಅಯ್ಯೋ! ವಿಧಿಯೆ ;ವಿವಾಹಕ್ಕೆ ಮನಗೊಡದ ನನ್ನ ಮಗಳು ಸದಾಶಿವನನ್ನು ಪ್ರೇಮಿಸುವಂತೆ ಮಾಡಿ, ಈಗೇಕೆ ಅವನಿಂದ ದೂರ ಮಾಡುತ್ತಿರುವೆ ಎಂದು ಕಣ್ಣೀರಿಟ್ಟ. ತಂದೆಯನ್ನು ಕಂಡ ಗಂಗಾ ಕರಗಿ ಹೋದಳು. ನನ್ನ ಪ್ರೇಮದಿಂದಾಗಿ ನನ್ನ ತಂದೆ ಅಳುವಂಥಾಯಿತು. ಈಗ ನಾನು ಅವರ
ಮನಸ್ಸಮಾಧಾನಕ್ಕಾದರೂ ಸುಳ್ಳನ್ನು ಹೇಳಬೇಕು. ಎಂದುಕೊಂಡು ,ಅಪ್ಪ ನೀವೇನೂ ಚಿಂತಿಸಬೇಡಿ; ಸದಾಶಿವನ ನೆನಪಿನಲ್ಲಿ ನಾನು ಕೊರಗುವುದಿಲ್ಲ, ಖಂಡಿತವಾಗಿ ನಾನು ನೀವು ತೋರಿಸಿದ ಯುವಕನನ್ನೇ ಮದುವೆ ಆಗುತ್ತೇನೆ ಎಂದು ಭರವಸೆ ಇತ್ತಳು. ಸುಬ್ರಹ್ಮಣ್ಯ ಸ್ವಾಮಿಗೆ ಮಗಳ ನೋವಿನ ಅರಿವಿತ್ತು .ಆದರೂ ಸುಮ್ಮನಿದ್ದರು.ಮನೆಗೆ ಬಂದ ಸದಾಶಿವನನ್ನು ತಂದೆ ಮಗಳಿಬ್ಬರು ನಿಸ್ತೇಜ ಮುಖದಿಂದ ನೋಡಿದರು. ಆದರೆ ಗೌರಿ ಸಿಗದ ಕಾರಣ ಸದಾಶಿವ ಬೇಸತ್ತು ಮನೆಗೆ ಒಳಗೆ ಬಂದಿದ್ದ. ಆದರೆ ಅವನು ಯಾವುದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಸದಾಶಿವನನ್ನು ನೋಡಿದ ನಂತರ ಸುಬ್ರಹ್ಮಣ್ಯ ಸ್ವಾಮಿಯು ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರು.
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡಬಿದಿರೆ

Comments
Post a Comment