ಸದಾಶಿವ - ಸಂಚಿಕೆ - 49

ಸದಾಶಿವ


ಸಂಚಿಕೆ - 49

    ಗಂಗಾ ಉತ್ತರಿಸಲು ತಡವರಿಸಿದಳು. ನಾನೀಗ ಏನೆಂದು ಹೇಳಲಿ! ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವೆನೆಂದೇ?  ನಿನ್ನ ಬಿಟ್ಟು ಬಾಳಲಾರನೆಂದೇ?  ನೀನೆ ನನ್ನ ಸರ್ವಸ್ವ ,ಈಗಾಗಲೇ ವಿವಾಹವಾಗಿರುವ ಗೌರಿಯನ್ನು ಮರೆತು ನನ್ನನ್ನು ವಿವಾಹ ಮಾಡಿಕೊ ಎಂದೇ? ಛೇ!  ನಾನೆಷ್ಟು ಸ್ವಾರ್ಥಿ! ಈಗಾಗಲೇ ನೊಂದಿರುವ ಗೌರಿಗೆ ಬಾಳು ನೀಡಲು ಇಚ್ಛಿಸುತ್ತಿರುವ ಪರಿಪೂರ್ಣ ಪ್ರೇಮಿ ಸದಾಶಿವನಲ್ಲಿ ನನ್ನ ಪ್ರೇಮವನ್ನು ಹೇಳಿ ಅವನ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಲೇ? ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡಳು..ಇಲ್ಲಾನನ್ನ ಪ್ರೇಮದ ಹೂವನ್ನು ನಾನೇ ಕೀಳಬೇಕು. ಸದಾಶಿವನಿಗೆ ನನ್ನ ಪ್ರೇಮ ಹೇಳಬಾರದು. ಎಂದುಕೊಂಡು, ಸದಾಶಿವ ನನ್ನ ಇಲ್ಲಿಗೆ ಏಕೆ ಕರೆದುಕೊಂಡು ಬಂದೆ ಎಂಬ ಪ್ರಶ್ನೆಗೆ ಹಾಗೇ ಸುಮ್ಮನೆ ದೇವಸ್ಥಾನ ನೋಡಿಕೊಂಡು ಬರೋಣ ಎಂದು ನಿನ್ನನ್ನು ಕರೆದೇ ಎಂದಳು.ಸರಿ; ನಾವೀಗ ಹೊರಡೋಣವೇ ಎಂದು ಕೇಳಿದಾಗೆ, ಸರಿ ,ಮತ್ತೆ ನನ್ನಲ್ಲಿ ನೀವು ಹೇಳಿದ ವಿಚಾರವನ್ನು ನನ್ನ ತಂದೆಯವರಲ್ಲಿ ತಿಳಿಸಬೇಡಿ. ನನ್ನ ತಂದೆಗೆ ಸುಳ್ಳು ಹೇಳುವವರೆಂದರೇ ಆಗುವುದಿಲ್ಲ.ಸರಿಯಾದ ಸಮಯವನ್ನು ನೋಡಿ ನಾನೇ ನನ್ನ ತಂದೆಯ ಬಳಿ ಮಾತನಾಡುತ್ತೇನೆ. ಎಂದು ಹೇಳಿದಳು.ಸದಾಶಿವ ತಲೆಯಲ್ಲಾಡಿಸಿದ. ಗೌರಿಯ ಯೋಚನೆಯಲ್ಲಿ ಸದಾಶಿವ ಸದಾಶಿವನ ಯೋಚನೆಯಲ್ಲಿ ಗಂಗಾ ಇಬ್ಬರು ಭಾರವಾದ ಮನಸ್ಸಿನಿಂದ ಮನೆಯತ್ತ ಹೆಜ್ಜೆ ಹಾಕತೊಡಗಿದರು.
        ಇತ್ತ  ಆಶ್ರಮದಲ್ಲಿ ಗೌರಿ ಕಾಷಾಯ ವಸ್ತ್ರ ಧರಿಸಿ, ಸಾತ್ವಿಕ ಹೆಣ್ಣಾಗಿ ಪರಿವರ್ತಿತಗೊಂಡಳು. ಅವಳಲ್ಲಿ ಪ್ರಾಪಂಚಿಕ ಸುಖ ವೈಭವಗಳ ಕುರಿತಾಗಿ ವ್ಯಾಮೋಹ ಗಳಿರಲಿಲ್ಲ.
ಸದಾಶಿವನನ್ನು ಮರೆತೇ ಬಿಟ್ಟಿದ್ದಳು.
ಹೀಗಿರಬೇಕಾದರೆ ಗೌರಿಗೆ ಅದು ಸಂತೋಷದ ವಿಚಾರವೋ;ದುಃಖದ ವಿಚಾರವೋ ಗೌರಿ ಗರ್ಭಿಣಿಯಾದಳು. ಸಂನ್ಯಾಸತ್ವ  ಸ್ವೀಕರಿಸಿದ ನಂತರ ಗರ್ಭಿಣಿಯಾದ ಗೌರಿಯನ್ನು ಕಂಡ ಆಶ್ರಮ ವಾಸಿಗಳಿಗೆ ಆಕೆ ದೇವತೆಯಾದಳು. ಅವಳನ್ನು ಮಗುವಿನಂತೆ ನೋಡಿಕೊಳ್ಳತೊಡಗಿದರು.ಸನ್ಯಾಸಿಯಾದ ಗೌರಿಗೆ ಯಾವುದರ ಮೇಲೂ ವ್ಯಾಮೋಹವಿರಲಿಲ್ಲ.
ಬಯಕೆಗಳಿರಲಿಲ್ಲ. ತನಗೇನು ಬೇಕು ಎಂದು ಬೇಡಿಕೆಯನ್ನು ಇರುತ್ತಿರಲಿಲ್ಲ.ಆದರೆ ನಿರ್ಮಲ ಮನಸ್ಸಿನ ಆಶ್ರಮವಾಸಿಗಳು ಅವಳಿಗಾಗಿ ಸ್ವಚ್ಛ ಹಣ್ಣುಗಳನ್ನು, ಹಸುವಿನ ಹಾಲನ್ನು ,ತುಪ್ಪ ,ಬೆಣ್ಣೆ ಇತ್ಯಾದಿಗಳನ್ನು ನೀಡಿ ಆರೈಕೆ ಮಾಡತೊಡಗಿದರು. ಗರ್ಭಿಣಿ ಗೌರಿ ಆಶ್ರಮದಲ್ಲಿ ಕಳೆ  ಕಳೆಯಾಗಿ ಓಡಾಡಿಕೊಂಡಿದ್ದಳು.ಸಿಕ್ಕ ಆಹಾರ ಪದಾರ್ಥವನ್ನೇ ರುಚಿಯಾಗಿ ಮಾಡಿ ಹಾಕುತ್ತಿದ್ದಳು. ಸನ್ಯಾಸಿಗಳ ಪಾಲಿಗೆ ಅವಳು ಸಾಕ್ಷ್ಯತ್
ಅನ್ನ ಪೂರ್ಣೇಶ್ವರಿ ಯಾಗಿದ್ದಳು. ಇತ್ತ
ರಾಮಯರು ಮತ್ತು ಸರಸಿ ಸದಾಶಿವನ ಬರುವನ್ನು ಕಾತುರದಿಂದ ಕಾಯುತ್ತಿದ್ದರು.ಮಗ ಶುಭ ಸಮಾಚರವನ್ನೇ ತರಲಿ ಎಂದು ಮನಸಾರೆ ಬೇಡಿಕೊಳ್ಳುತ್ತಿದ್ದರು. ಮೊಮ್ಮಗಳು ಭಕ್ತಿಗೀಗ ಆರು ತಿಂಗಳು ;ಮುದ್ದು ಗೊಂಬೆಯಂತಿದ್ದ ಭಕ್ತಿ ಬಂದ ಮೇಲೆ ರಾಯರ ಮನೆಯಲ್ಲಿ ಶಾಂತಿ,ನೆಮ್ಮದಿ ನೆಲೆಸಿತ್ತು. ರಾಯರ ಮನೆಯಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿತ್ತು. ದೇವರಿಗೆ ಹರಕೆ ಹೊತ್ತಿದ್ದರಿಂದ ಹುಟ್ಟಿದ ಮಗುವಾಗಿದ್ದಳು ಭಕ್ತಿ.ಅವಳಲ್ಲಿ ದೈವಿಶಕ್ತಿಯ ಕಳೆಯಿತ್ತು. ಒಂದು ದಿನ ಭಕ್ತಿಯ ತಾಯಿ ತುಂಬು ಗರ್ಭಿಣಿಯಾಗಿದ್ದಾಗ..

 ಮುಂದುವರೆಯುವುದು

 ✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32