ಸದಾಶಿವ - ಸಂಚಿಕೆ - 47

ಸದಾಶಿವ


ಸಂಚಿಕೆ - 47

ಗೌರಿಯ ತಾಯಿ ಮತ್ತು ತಂದೆ ದೇವಸ್ಥಾನದತ್ತಲೇ ಬರುತ್ತಿದ್ದನ್ನು ದೂರದಿಂದಲೇ ಕಂಡಳು. ನಾನು ಸದಾಶಿವ ಜೊತೆ ಇರುವುದನ್ನು ಮನೆಯವರು ಕಂಡರೆ ತಪ್ಪಾಗಿ ತಿಳಿದುಕೊಳ್ಳಬಹುದು ಎಂದು ;ಸದಾಶಿವನಲ್ಲಿ ನಿನ್ನನ್ನು ನಾಳೆ ಭೇಟಿ ಮಾಡುತ್ತೇನೆಂದು  ಹೇಳಿ ಓಡಿ ಮರೆಯಾದಳು. ಗೌರಿ ಏಕೆ ಓಡಿದಳೆಂದು ಸದಾಶಿವನಿಗೆ ಗೊತ್ತಾಗಲಿಲ್ಲ.ಆದರೆ ತನ್ನ ಪಕ್ಕ ಬಂದು ನಿಂತು ಹೇಗಿದಿಯಾ ಸದಾ? ಎಂದು ಗೌರಿಯ ತಂದೆ ತಾಯಿ ಕೇಳಿದಾಗ ಗೌರಿ ಓಡಿದ ಕಾರಣ ತಿಳಿಯಿತು. ಚೆನ್ನಾಗಿದ್ದೇನೆ; ನೀವು ಹೇಗಿದ್ದೀರಾ?ಎಂದು ಕುಶಲೋಪಚಾರ ವಿಚಾರಿಸಿದಾಗ ಅವರು ಕೂಡ ಚೆನ್ನಾಗಿದ್ದೇವೆ; ಎಂದು ಹೇಳಿ ನಾವು ಪೂಜೆ ಮಾಡಿಸಿಕೊಂಡು  ಬರುತ್ತೇವೆಂದು ದೇವಸ್ಥಾನದ ಒಳಹೊಕ್ಕರು.ಆದರೆ ಅಂದು ಗೌರಿ ,ಸದಾಶಿವ ತಮ್ಮ ತಮ್ಮ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ; ಹಂಚಿಕೊಂಡಿದ್ದರೆ ಕಥೆಗೆ ಬೇರೆಯೇ ತಿರುವು ಸಿಗುತ್ತಿತ್ತು.ಅದಕ್ಕೆ ಹಿರಿಯರು ಹೇಳಿರುವುದು *ನಾಳೆಯೆಂದರೆ ಹಾಳು ಇಂದಿನ ಕೆಲಸವನ್ನು ಇಂದೇ ಮುಗಿಸಿಬಿಡು ಎಂದು* ಇಲ್ಲಿ ಗೌರಿ ಮನಸ್ಸಿನ ತುಂಬಾ ಸದಾಶಿವನ ಬಗ್ಗೆ ಪ್ರೀತಿಯನ್ನು ;ಪ್ರೇಮವನ್ನು ;ಇರಿಸಿಕೊಂಡಿದ್ದಳು. ಆದರೆ ಅದನ್ನು ವ್ಯಕ್ತಪಡಿಸಲು ತಡ ಮಾಡಿದಳು. ಜೀವನವೇ ಹಾಗೆ *ಸಮಯವನ್ನು ನಾವು ಹೊಂದಿಸಿಕೊಳ್ಳಬೇಕೇ ಹೊರತು ಸಮಯ ನಮಗೆ ಹೊಂದಿಕೊಳ್ಳುವುದಿಲ್ಲ; ಮನಸ್ಸಿನೊಳಗೆ ಇಟ್ಟುಕೊಂಡು ಸಂಕಟ ಪಡುವುದಕ್ಕಿಂತ ಹೊರಹಾಕಿ ಸಮಾಧಾನ ಪಟ್ಟುಕೊಳ್ಳುವುದು ಒಳಿತಲ್ಲವೇ?* ಒಂದು ಇನ್ನೊಬ್ಬರ ಅಭಿಪ್ರಾಯವನ್ನು ನಾವು ತಾಳ್ಮೆಯಿಂದ ಕೇಳಬೇಕು; ಇಲ್ಲದಿದ್ದರೆ ನಮ್ಮ ಅಭಿಪ್ರಾಯವನ್ನು ಹೇಳಿಬಿಡಬೇಕು, ಈ ಹೇಳುವುದು  ಹೇಳದಿರುವುದರಿಂದ ಕಣ್ಣಾಮುಚ್ಚಾಲೆಯಾಟದಿಂದ ಅದೆಷ್ಟು ಸತ್ಯಗಳು ಹುದುಗಿ ಹೋಗಿವೆಯೋ, ಅದೆಷ್ಟೋ ಭಾವನೆಗಳು ಹೇಳಿಕೊಳ್ಳಲಾರದೆ ಬಾಡಿ ಹೋಗಿವೆಯೋ,ಪ್ರೀತಿಯನ್ನು ಹೇಳಿಕೊಳ್ಳಲಾರದ ಎಷ್ಟೋ ಪ್ರೇಮಿಗಳು ಇನ್ನೊಬ್ಬರ ಹೆಂಡತಿಯಾಗಿಯೋ, ಗಂಡನಾಗಿಯೋ ಬಾಳುವ ಪರಿಸ್ಥಿತಿ ಬಂದೊದಗಬಹುದು. ಹಾಗಂಥ ಹೇಳಿಕೊಂಡ ವರಿಗೆಲ್ಲಾ ತಮ್ಮ ಪ್ರಿಯತಮ, ಪ್ರಿಯತಮೆ, ಸಿಕ್ಕಿದ್ದಾರೆ ಎಂದರ್ಥವಲ್ಲ. ಹೇಳಿಕೊಂಡು ಮನಸ್ಸು ಹಗುರವಾದರೂ  ಮಾಡಿಕೊಳ್ಳುತ್ತಾರೆ ಎಂಬ ಆಶಯವಷ್ಟೆ, ಆದರೆ ಗೌರಿ ಸದಾಶಿವ ತಮ್ಮ ಮನಸ್ಸಿನೊಳಗಿನ ಭಾವನೆಯನ್ನು ಬಿಚ್ಚಿಡದೆ,ಬಿಚ್ಚಿಟ್ಟರು. ಅದೇ ಅವರ ಬಾಳಿನಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು.ನಿಮ್ಮವರು ನಿಮಗೆ ಬೇಕೆನಿಸಿದರೆ, ಅವರ ಮೇಲೆ ಒಲವಿದ್ದರೆ, ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಹೇಳಿಬಿಡಿ; ಒಪ್ಪಿಕೊಳ್ಳುವರೋ, ಬಿಡುವರೋ ಅದು ಮುಂದಿನ ಪ್ರಶ್ನೆ. ಯಾವುದನ್ನೇ ಆಗಲಿ ಧನಾತ್ಮಕವಾಗಿ
ಚಿಂತಿಸಬೇಕು.ಇಲ್ಲದೇ ಇದ್ದರೆ ಗೌರಿ ಸದಾಶಿವನ ಬಾಳಲ್ಲಿ ಆದಂತೆ ನಮ್ಮಲ್ಲೂ ಆಗಬಹುದು. ಹೀಗೆ ಗೌರಿಯ ಆಲೋಚನೆಯಲ್ಲಿ ಬಿದ್ದಿದ್ದ ಸದಾಶಿವನನ್ನು ಗಂಗಾಳ ಕರೆ ಎಚ್ಚರಿಸಿತ್ತು. ಏನೆಂದು ಅವಳತ್ತ ತಿರುಗಿದಾಗ ಗಂಗಾ ತನ್ನ ಮನದ ಭಾವನೆಯನ್ನು ಹೇಳಲು ಕಾಯುತ್ತಿದ್ದಳು.ಅಷ್ಟರಲ್ಲಿ ಸದಾಶಿವ ,ಗಂಗಾ; ನಿನ್ನ ಬಳಿ ನಾನೊಂದು ವಿಚಾರವನ್ನು ಹೇಳಬೇಕು, ಎಂದಾಗ ಗಂಗಾ ಪ್ರಶ್ನಾರ್ಥಕ ಮುಖ ಭಾವದಿಂದ
ಸದಾಶಿವನನ್ನು ನೋಡಿದಳು. ನಾನು ನಿನ್ನಲ್ಲಿ ಒಂದು ವಿಚಾರವನ್ನು ಹೇಳಬೇಕು, ನೀವಂದುಕೊಂಡಂತೆ ನಾನು ಯಾರೂ ಇಲ್ಲದ ಅನಾಥನಲ್ಲ ;ನನಗೆ ತಂದೆ ತಾಯಿ ,ಅಜ್ಜಿ ,ತಮ್ಮ ತಂಗಿಯರಿದ್ದಾರೆ, ನಮ್ಮದು ಗುತ್ತಿನ ಮನೆ, ನನ್ನ ತಂದೆ ನಮ್ಮೂರಿನಲ್ಲಿ ಹೆಸರುವಾಸಿಯಾದ ಧನಿಕ..

 ಮುಂದುವರಿಯುವುದು

✍🏻 ನಾಗಶ್ರೀ ಎಸ್ ಭಂಡಾರಿ  ಮೂಡಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32