ಸದಾಶಿವ - ಸಂಚಿಕೆ - 41
ಸದಾಶಿವ
ಸಂಚಿಕೆ - 41
ಇಷ್ಟೆಲ್ಲಾ ಮಾತು ಏಕೆ ಬಂತೆಂದರೆ, ಕಥೆಯೊಳಗೆ ಯಾರೂ ಈ
ಮನಸತ್ವದವರಿಲ್ಲ ,ಆದರೆ ಕುಮಾರನನ್ನು ಬೈದ ಓದುಗರು ,ತಮ್ಮ ತಮ್ಮ ಗಂಡಂದಿರ/ ಹೆಂಡತಿಯರ ಬಗ್ಗೆ ಆಲೋಚಿಸುವಾಗ ಮಾನಸಿಕವಾಗಿ ನೊಂದ ಓದುಗ ಮಹಾಶಯನಿದ್ದಾನೆ. ಗೌರಿಯಂತೆ ಮನೆ ಬಿಟ್ಟು ಹೋದವರೆಷ್ಟೋ,
ಕುಮಾರನಂಥವರ ಜೊತೆ ಇನ್ನೂ ಏಗುತ್ತಲೇ ಬದುಕಿ ದಿನಾ ಸಾಯುತ್ತಿರುವವರೆಷ್ಟೋ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರೆಷ್ಟೋ, ಇದನ್ನೆಲ್ಲಾ ತಡೆಯಲು ಹೆಣ್ಣು ತನ್ನನ್ನು ತಾನು ರಕ್ಷಿಸಿ ಕೊಳ್ಳುವಂತಾಗಬೇಕು, ಅನ್ಯಾಯವನ್ನು ಎದುರಿಸುವ ಮನಸ್ಸಿರಬೇಕು..ನಿಜ ಹೇಳಬೇಕೆಂದರೆ ಓದಿಕೊಂಡ ಹುಡುಗಿಯರೆಲ್ಲ ಧೈರ್ಯವಂತರು ಎಂದುಕೊಳ್ಳುವುದು ಮೂರ್ಖತನ; ಕಲಿತ ಹೆಣ್ಣು ಮಕ್ಕಳು ಮದುವೆಯಾದ ನಂತರ ಮೂಡಿಗಳಾಗಿ ಬಿಡುತ್ತಾರೆ.ಅವರಿಗಿಂತ ಹಳ್ಳಿಯಿಂದ ಬಂದ ಹೆಣ್ಣುಮಕ್ಕಳು ಧೈರ್ಯವಂತರು. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಛಾತಿಯನ್ನಾದರೂ ಬೆಳೆಸಿಕೊಂಡಿರುತ್ತಾರೆ. ಗೌರಿಯಂತಹ ಮುಗ್ಧೆಯರು ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳದೆ, ಮನಸ್ಸಿನೊಳಗೆ ಇಟ್ಟುಕೊಂಡು ನೋವನ್ನು ಅನುಭವಿಸುತ್ತಾ, ಮಾನಸಿಕ ರೋಗಿಗಳ ಗುತ್ತಾರೆ.ಆದರೆ ಗಂಗಾ ಖಂಡಿತ ಗೌರಿಯಂತಲ್ಲ! ಅದು ಇಷ್ಟರಲ್ಲೇ ನಿಮಗೇ ತಿಳಿಯುತ್ತದೆ.
ತಲೆತಿರುಗಿ ಬಿದ್ದಿದ್ದ ಗೌರಿಯನ್ನು ಗಿಡ ಮೂಲಿಕೆಯನ್ನು ಹುಡುಕಿಕೊಂಡು ಬಂದಿದ್ದ ಸಂನ್ಯಾಸಿಯೋರ್ವರು ಕಂಡು ಅವಳು ಪ್ರಜ್ಞಾಶೂನ್ಯನಾಗಿದ್ದನ್ನು ಅರಿತು ಸ್ವಲ್ಪ ದೂರದಲ್ಲೇ ಇದ್ದ ಸಂನ್ಯಾಸಿಗಳಿರುವ ಗುಡಿಸಿಲಿನತ್ತ ಹೊರಟು ಅಲ್ಲಿನವರಲ್ಲಿ ವಿವಾಹಿತೆಯೋರ್ವಳು ತಲೆ ತಿರುಗಿ ಬಿದ್ದದ್ದನ್ನು ಹೇಳಿದಾಗ, ಕೂಡಲೇ ಕಮಂಡಲದಲ್ಲಿ ನೀರನ್ನು ಹಿಡಿದುಕೊಂಡು ಅವಳತ್ತ ತೆರಳಿದರು ಆ ಆಶ್ರಮದ ಪ್ರಮುಖ ಸಂನ್ಯಾಸಿ. ಅವಳ ಮುಖ ನೋವಿನಿಂದಲೋ, ನಡೆದು ಬಂದ ಸುಸ್ತಿನಿಂದಲೋ ಬಾಡಿಹೋಗಿತ್ತು. ವೃಧ್ಧ ಸಂನ್ಯಾಸಿ ಗೌರಿಯ ಮುಖಕ್ಕೆ ನೀರು ಚಿಮುಕಿಸಿದರು.ಗೌರಿ ನೀರು ಬಿದ್ದ ಕೂಡಲೇ ಎಚ್ಚೆತ್ತುಕೊಂಡು, 'ನೀರು', 'ನೀರು' ಎಂದು ಹೇಳತೊಡಗಿದಳು. ಸ್ವಾಮಿಗಳು ಕಮಂಡಲದಿಂದ ತೊಟ್ಟು ತೊಟ್ಟಾಗಿ ನೀರನ್ನು ಅವಳ ಬಾಯಿಗೆ ಹಾಕತೊಡಗಿದರು. ನೀರು ಬಾಯಿಗೆ ಬಿದ್ದಾಕ್ಷಣ ನವಚೈತನ್ಯ ಬಂದಂತೆ ಆಯಿತವಳಿಗೆ. ಸುಧಾರಿಸಿಕೊಳ್ಳಲಿ ಎಂದುಕೊಂಡು ಅವಳಿಗೆ ಕೈಯಾಸರೆ ಕೊಟ್ಟು ತಮ್ಮ ಗುಡಿಸಲಿನತ್ತ ಕರೆದುಕೊಂಡು ಹೋದರು. ಸಂನ್ಯಾಸಿಗಳೆಂದರೆ
ಪರಸ್ತ್ತೀಯನ್ನು ಮುಟ್ಟುವುದಿಲ್ಲವೆಂದುಕೊಳ್ಳಬಹುದು,ಆದರೆ ಕಷ್ಟದಲ್ಲಿ ಇರುವವರಿಗೆ, ದೀನರಿಗೆ ,ರೋಗಿಗಳಿಗೆ, ಸಹಾಯ ಮಾಡುವುದೇ ನಿಜವಾದ ಸಂನ್ಯಾಸ ಜೀವನ ಎಂದು ಅರಿತುಕೊಂಡ ನಿಷ್ಕಲ್ಮಶ ಮನದ ಸಂನ್ಯಾಸಿಗಳ ಗುಂಪದು. ಅವರಿಗೆ ತಾಯಿ ,ಸಹೋದರಿಯಂತೆ ಕಂಡಳು.ಅವಳಿಗಾಗಿ ಅವರ ಮನ ಮಿಡಿಯಿತು. ಕಾಡು ಪಾಲಾಗಿರುವ ಅವಳ ರಕ್ಷಣೆ ನಮ್ಮದೆಂದು, ಎಲ್ಲಿಂದ ಬಂದಿರುವಳು ತಿಳಿದು ತಲುಪಿಸುವ ಜವಾಬ್ದಾರಿ ತಮ್ಮದೆಂದು ಭರವಸೆಯನ್ನು ನೀಡಿದರು.ಹೊಟ್ಟೆಗೇನು ತಿನ್ನದೇ ನಿತ್ರಾಣಳಾಗಿದ್ದ ಗೌರಿ ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವಳಿಗೆ ಹಣ್ಣು ಹಂಪಲುಗಳನ್ನು ತಿನ್ನಲು ಕೊಟ್ಟರು. ಎಷ್ಟೇ ಆದರೂ ಅವರು ಅದು ಸಂನ್ಯಾಸಿಗಳಿರುವ ಜಾಗ ಅವರು ಅನ್ನವನ್ನು ಬೇಯಿಸುತ್ತಲೇ ಇರಲಿಲ್ಲ.ಹಣ್ಣನ್ನು ತಿಂದಾದ ನಂತರ ಗೌರಿ ಸ್ವಲ್ಪ ಉಲ್ಲಾಸಗೊಂಡಳು..ಆಗ ವೃಧ್ಧ ಸಂನ್ಯಾಸಿ ತಾಯಿ, ನೀನು ಎಲ್ಲಿಂದ ಬಂದೆ ಎಂದು ಕೇಳಿದಾಗ..
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments
Post a Comment