ಸದಾಶಿವ - ಸಂಚಿಕೆ - 40
ಸದಾಶಿವ
ಸಂಚಿಕೆ - 40
ಆ ಕಣ್ಣುಗಳಲ್ಲಿ ಏನೋ ವ್ಯಕ್ತವಾಗದ ಅನುಕಂಪವಿತ್ತು,ನೀನು ಕಷ್ಟಗಳನ್ನು ಅನುಭವಿಸಲೇಬೇಕೆಂಬ ಭಾವವಿತ್ತು.ಸೃಷ್ಟಿಯಲ್ಲಿ ಹಲವಾರು ವೈಚಿತ್ರ್ಯಗಳು ನಡೆಯುತ್ತವೆ, ದೇವರಿಲ್ಲ ಎಂದು ಹೇಳುವವನು ಮುಂದೆ ಅದೇ ದೇವರ ಮೊರೆ ಹೋಗುತ್ತಾನೆ, ದೇವರೇ ಎಲ್ಲ ಅವನಿಲ್ಲದೆ ಏನೂ ಇಲ್ಲ ಎನ್ನುವವರಿಗೆ ಕಷ್ಟಗಳ ಮೇಲೆ ಕಷ್ಟಗಳು ಬಂದೆರಗಿ, ದೇವರೆಂದರೆ ಜಿಗುಪ್ಸೆ ಉಂಟಾಗಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಾನೆ. ಗೌರಿಯ ಜೀವನವೂ ಹಾಗೆ ಆಯಿತು ;ದೇವರಲ್ಲಿ ಅತೀವ ಭಕ್ತಿಯನ್ನಿಟ್ಟು ಕೊಂಡಿದ್ದ ಗೌರಿಗೆ ಬಯಸಿದ್ದು ಸಿಗಲಿಲ್ಲ; ಸಿಕ್ಕಿದ್ದು ಸುಖ ನೀಡಲಿಲ್ಲ; ಹೆಣ್ಣು ಸಹನಾಮಯಿ ಹೌದು! ಆದರೆ ಇನ್ನೊಬ್ಬರ ಖುಷಿಗಾಗಿ ತನ್ನತನವನ್ನು ಕಳೆದುಕೊಂಡು ,ತನ್ನ ಖುಷಿಯನ್ನು ಬಿಟ್ಟು, ಇನ್ನೊಬ್ಬರ ಖುಷಿಗಾಗಿ ಕಷ್ಟಪಟ್ಟರೆ ಏನು ಫಲ? ಪ್ರತಿಫಲವೇ ಸಿಗದಿದ್ದ ಮೇಲೆ! ಕುಮಾರ ದೈಹಿಕವಾಗಿ ಹಿಂಸಿಸಿದರೆ; ಇನ್ನು ಕೆಲವು ಗಂಡಸರು ಮಾನಸಿಕವಾಗಿ ಹಿಂಸಿಸುತ್ತಾರೆ ,ಹೆಣ್ಣು ತಾನು ಪ್ರೀತಿಸುವವನು ತನಗಾಗಿ ಒಡವೆ, ವಸ್ತ್ರಗಳನ್ನು ,ನೀಡಿದರೆ ಸಾಕೆಂದು ಬಯಸುವುದಿಲ್ಲ; ಇನ್ನೊಬ್ಬರ ಎದುರು ಅವಮಾನಿಸದೆ, ಸ್ನೇಹದಿಂದ ಭಾವನೆಗಳನ್ನು ಹೇಳಿದರೆ ಸಂತಸಪಡುತ್ತಾಳೆ. ಪ್ರತಿದಿನ ಮನೆಯೊಳಗೆ ಇರುವವಳು ಒಂದು ದಿನವಾದರೂ ಅವಳೊಡಗೂಡಿ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗಿ, ತಿನ್ನಲು ಏನಾದರೂ ತೆಗೆದು ಕೊಟ್ಟರೆ, ಪ್ರೀತಿಯಿಂದ ಒಂದೆರಡು ಮಾತನಾಡಿದರೆ ,ಜೀವನ ಪರ್ಯಂತ ಆತನನ್ನು ಪ್ರೇಮಿಸದೆ ಇರುವುದಿಲ್ಲ.ಹೆಚ್ಚಿನ ಗಂಡಸರು ಹೆಂಡತಿಯಾಗುವವಳು ನನಗೆ ತಕ್ಕಂತೆ ಇರಬೇಕು ಎಂದು ಅಂದುಕೊಳ್ಳುತ್ತಾರೆಯೇ ಹೊರತು ,ಹೆಂಡತಿ ನನ್ನಿಂದ ಏನನ್ನು ಬಯಸುತ್ತಾಳೆ ಎನ್ನುವುದನ್ನೇ ಮರೆತು ಬಿಡುತ್ತಾರೆ.ಇನ್ನು ಕೆಲವು ಹೆಂಗಸರು ಮನೆಗೆ ತಡವಾಗಿ ಬಂದ ಗಂಡನನ್ನು ಪ್ರಶ್ನೆಗಳನ್ನು ಕೇಳಿ ಕೇಳಿ ಕಿರಿಕಿರಿ ಮಾಡಿಬಿಡುತ್ತಾರೆ, ಸುಧಾರಿಸಿಕೊಳ್ಳಲು ಸಮಯ ನೀಡುವುದಿಲ್ಲ. ಕೆಲಸದ ಒತ್ತಡಗಳಿಂದ ರೋಸಿ ಹೋಗಿರುವ ಅವರು ಹೆಂಡತಿಯ ಪ್ರಶ್ನೆಗೆ ಸಿಡಿಮಿಡಿಗೊಳ್ಳುತ್ತಾರೆ, ಗಂಡ ಹೆಂಡತಿಯ ನಡುವೆ ಇರಬೇಕಾದದ್ದು ಹೊಂದಾಣಿಕೆ, ಆ ಹೊಂದಾಣಿಕೆಯನ್ನು ಹೆಂಡತಿಯೇ ಮಾಡಿಕೊಳ್ಳಬೇಕು ಎನ್ನುವುದು ಗಂಡಿನ ದೌರ್ಬಲ್ಯ, ಗಂಡ ನನ್ನ ಮಾತನ್ನೇ ಕೇಳಬೇಕೆನ್ನುವುದು ಹೆಣ್ಣಿನ ದೌರ್ಬಲ್ಯ ,ಹೆಣ್ಣು ಎಲ್ಲರೂ ಜೊತೆಗಿರಲಿ ಎಂದು ಆಶಿಸುತ್ತಾಳೆ, ಆದರೆ ಗಂಡ ಹೆಂಡತಿಯನ್ನು ಬಿಟ್ಟು ಉಳಿದವರೆಲ್ಲರ ಯೋಗಕ್ಷೇಮವನ್ನು ವಿಚಾರಿಸಿ ,ತನ್ನ ಯೋಗಕ್ಷೇಮ ವಿಚಾರಿಸದೆ ಇದ್ದಾಗ ಅವಳ ಮನಸ್ಸಿಗೆ ನೋವಾಗುತ್ತದೆ, ಯಾವಾಗಲೂ ಮನೆಯಲ್ಲೇ ಇರುವ ಹೆಂಡತಿ ಮನೆ ಕೆಲಸ ಮಾಡಿದರೂ ;ನಿನಗೇನು ಕೆಲಸ ಎಂದು ಕೇಳಿದಾಗ ನೋವಾಗುತ್ತದೆ ,ಹೊರಗೆ ಹೋಗಿ ದುಡಿದರೆ ದುಡಿಮೆಯ ಕಷ್ಟ ಗೊತ್ತಾಗುತ್ತದೆ ಎಂದಾಗ, ನಾನು ಕೆಲಸವಿಲ್ಲದವಳು ಎಂಬ ಭಾವನೆ ಕಾಡಿ ನೋವಾಗುತ್ತದೆ. ಹೊಸ ಸೀರೆ ಉಟ್ಟಾಗ ಚೆನ್ನಾಗಿ ಕಾಣುತ್ತಿದ್ದೀಯಾ ಅಥವಾ ಕಾಣುತ್ತಿಲ್ಲ ಎಂದು ತನ್ನ ಅಭಿಪ್ರಾಯವನ್ನು ಹೇಳದೆ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಳ್ಳುವ ಗಂಡನ್ನು ಯಾವ ಹೆಣ್ಣು ತಾನೇ ಪ್ರೀತಿಸಬಲ್ಲಳು..ಈ ತರದ ಸಣ್ಣ ಪುಟ್ಟ ಸಂತೋಷಗಳಿಗೆ ಗಂಡ ಸ್ಪಂಧಿಸಬೇಕು ಎಂದು ಆಸೆ ಪಡುವುದು ತಪ್ಪೇ.. ಕೆಲವರಿಗೆ ಸ್ನೇಹಿತರೊಂದಿಗೆ ಸಿನಿಮಾ ,ಹೋಟೆಲ್ ಎಂದು ಸುತ್ತಾಡಲು ಸಮಯವಿರುತ್ತದೆ; ಹೆಂಡತಿಯನ್ನು ಕರೆದುಕೊಂಡು ಹೋಗಲು ಸಮಯದ ಅಭಾವವಿರುತ್ತದೆ. ಬೇರೆಯವರೊಂದಿಗೆ ಹೋಗಿ ನಿನಗೆ ಬೇಕಾದುದದ್ದನ್ನು ತಾ ಎನ್ನುತ್ತಾರೆ ಒಟ್ಟಿಗೆ ಹೋಗೋಣ ಎಂದು ತಪ್ಪಿಯೂ ಹೇಳುವುದಿಲ್ಲ.ಹೆಣ್ಣು ತನ್ನ ಗಂಡನ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾಳೆ,ಅದನ್ನು ಅರಿತುಕೊಳ್ಳುವಲ್ಲಿ ಗಂಡು ವಿಫಲನಾಗುತ್ತಾನೆ. ತಾನು ಬೇರೆ ಹೆಂಗಸರ ಜೊತೆ ಮಾತನಾಡುವುದನ್ನು ಸೋಷಿಯಲ್ ಎಂದು ಕರೆಯುತ್ತಾನೆ. ಹೆಂಡತಿ ಬೇರೆ ಗಂಡಸರೊಂದಿಗೆ ಮಾತನಾಡಿದರೆ ಸರಿಯಿಲ್ಲ ಎನ್ನುತ್ತಾನೆ. ಕ್ರಿಯೆ ಒಂದೇ ರೀತಿಯದ್ದು ಆದರೆ ಪ್ರಕ್ರಿಯೆ ಬೇರೆ ರೀತಿಯದ್ದು !ಹಾಗಂತ ಸ್ತ್ರೀ ಎಲ್ಲಾ ರೀತಿಯಲ್ಲೂ ಒಳ್ಳೆಯವಳು ಎಂದು ಹೇಳುವಂತಿಲ್ಲ ,ತನ್ನ ಗಂಡ ಎಷ್ಟೇ ಪ್ರೀತಿಸಿದರೂ ನಿರ್ಲಿಪ್ತತತೆಯಿಂದ ಇರುವವರು ಇದ್ದಾರೆ, ನೂರು ಸಲ ಹೇಳಿದರೂ ಕೇಳಿಸಿದಂತೆ ಇರುವವರು, ಮೂರನೆಯವರ ಮಾತನ್ನು ಕೇಳಿ ಗಂಡನನ್ನೇ ಅವಮಾನಿಸುವವರು,
ಅನುಮಾನಿಸುವವರು, ಅಹಂಕಾರದಿಂದ ಮನೆ ಬಿಟ್ಟು ಹೋಗುವವರು ಇದ್ದಾರೆ.. ಇಲ್ಲಿ ತಪ್ಪಿತಸ್ಥರು ಯಾರು? ಹೆಣ್ಣೇ!? ಗಂಡೇ!? ಪ್ರಶ್ನೆ?
ಮುಂದುವರೆಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡಬಿದಿರೆ

Comments
Post a Comment