ಸದಾಶಿವ - ಸಂಚಿಕೆ-39
ಸದಾಶಿವ
ಸಂಚಿಕೆ-39
ಅವಳ ಕಣ್ಣುಗಳು ನೀರಿನಿಂದ ತುಂಬಿಕೊಂಡಿತ್ತು. ಆರಾಧನೆಯಿಂದ ಸದಾಶಿವನನ್ನೇ ನೋಡುತ್ತಿದ್ದಳು.ಆದರೆ ಸದಾಶಿವನಿಗೆ ಅವಳಲ್ಲಿರುವ ಭಾವನೆ ಅರ್ಥವಾಗಲಿಲ್ಲ, ಏಕೆಂದರೆ ಸದಾಶಿವನಿಗೆ ಅವಳಲ್ಲಿ ಪ್ರೇಮವಿರಲಿಲ್ಲ
ತಾಯಿಯ ಒಲುಮೆಯ ನೀಡಿದ ಗೆಳತಿಯಷ್ಟೇ ಆಗಿದ್ದಳು. ಪ್ರೇಮದ ಅನುಭವ ಆಗುವುದು ಓರ್ವ ವ್ಯಕ್ತಿ ತಾನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರಮಾಣದ ಪ್ರೀತಿಯನ್ನು ಇನ್ನೋರ್ವನಲ್ಲಿ ತೋರಿಸಿದಾಗ ಮಾತ್ರ, ಪ್ರೇಮ ಕಣ್ಣಿನಲ್ಲೇ,ಮುಖ ಮುಖದ ಭಾವನೆಗಳಿಂದಲೇ ಅರಿತುಕೊಳ್ಳಬಹುದು, ಅರಿತಿಲ್ಲವಾದರೆ ಆತ ಅಥವಾ ಆಕೆಗೆ ಪ್ರೇಮವಿಲ್ಲ ಎಂದೇ ಅರ್ಥ. ಪಾರ್ಕಿನಲ್ಲಿ ಕುಳಿತು ಗಂಟೆಗಟ್ಟಲೆ ಮಾತನಾಡುವವರು, ಕದ್ದುಮುಚ್ಚಿ ಭೇಟಿ ಆಗುವವರೆಲ್ಲ ಪ್ರೇಮಿಗಳು ಎಂದುಕೊಂಡರೆ ದೇಶದಲ್ಲಿ ಜನಸಂಖ್ಯೆ ಇನ್ನೂ ಹೆಚ್ಚುತ್ತಲೇ ಇರುತ್ತಿತ್ತು. ಪ್ರೇಮ ಎಂದರೆ ಈರ್ವರು ವ್ಯಕ್ತಿಗಳ ನಡುವಿನ ಆಕರ್ಷಣೆಯಲ್ಲ ,ಇಬ್ಬರು ಹೊಂದಿಕೊಂಡು ತಮ್ಮ ತಮ್ಮ ಭಾವನೆಗಳನ್ನು, ಯಾವುದೇ ಅಂಜಿಕೆ ಇಲ್ಲದೆ ಹಂಚಿಕೊಂಡು, ತಮ್ಮ ಇಷ್ಟ ಮತ್ತು ತನ್ನವನ ಇಷ್ಟವನ್ನು ಅರಿತುಕೊಂಡು ,
ನಂಬಿಕೆಯಿಂದ ಬದುಕುವುದೇ ಪ್ರೇಮ. ದೈಹಿಕವಾದ ಆಕರ್ಷಣೆ ಯೌವ್ವನದಲ್ಲಿ ಮಾತ್ರ, ಅದು ಕ್ಷಣಿಕ,ಮುಪ್ಪಿನಲ್ಲು ಒಂದಾಗಿಯೇ ಇರುತ್ತಾರಲ್ಲಾ ಅವರದ್ದು ನಿಸ್ವಾರ್ಥ ಪ್ರೇಮ, True love started in the above age of 50 ವೃದ್ಧಾಪ್ಯದಲ್ಲಿ ಕೂಡಾ
ಯೌವ್ವನದಲ್ಲಿದ್ದಾಗ ಇರುವಂತಹ ತುಂಟತನ, ತಂಟೆ ,ತಮಾಷೆ ,
ಸಹಾಯ ಮಾಡುತ್ತಾ ಬಾಳ್ವೆ ನಡೆಸುತ್ತಾರಲ್ಲಾ .ಅದು ಅಮರ ಪ್ರೇಮ ,ಸಾವಿಗೆ ಶರಣಾಗಿ ಜೀವ ತೆತ್ತು ಕೊಳ್ಳುವುದಲ್ಲ ಪ್ರೇಮ, ಕೃಷ್ಣ ತನ್ನವನೆಂದೂ ಆಗುವುದಿಲ್ಲ ಎಂದು ತಿಳಿದಿದ್ದರೂ, ತ್ರಿಕರಣಪೂರ್ವಕವಾಗಿ ಆರಾಧಿಸಿ ಪೂಜಿಸುವ, ಅವನನ್ನೇ ಪ್ರೀತಿಸುವ, ರಾಧಳದ್ದು ನಿಸ್ವಾರ್ಥ ಪ್ರೇಮ. ಸದಾಶಿವ ಗೌರಿಯ ಮೇಲಣ ಪ್ರೇಮ,ರಾಧಾ ಕೃಷ್ಣರಂಥದ್ದು, ಸದಾಶಿವ ಎಷ್ಟೇ ದೂರವಿದ್ದರೂ ಗೌರಿಯಲ್ಲಿ ಅವನಿಗೆ ಅಚಲವಾದ ಪ್ರೇಮ, ಆ ಪ್ರೇಮದ ಕಂಬವನ್ನು ಒಂದು ಚೂರು ಕದಲಿಸಲು ಸಾಧ್ಯವಿರಲಿಲ್ಲ. ಸದಾಶಿವನಿಗೆ ತನ್ನ ಪ್ರೇಮ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇತ್ತು, ಆದರೆ ಅದನ್ನು ಗೌರಿಯಲ್ಲಿ ಹೇಳಿಕೊಳ್ಳದೆ ತಪ್ಪು ಮಾಡಿದ್ದ ,ಆ ತಪ್ಪಿನ ಅರಿವು ಸದಾಶಿವನಿಗೆ ಊರಿಗೆ ಬಂದ ಮೇಲೆ ತಿಳಿಯಿತು. ಮಡಿಕೇರಿಯಿಂದ ಊರಿಗೆ ಬಂದ
ಸದಾಶಿವನನ್ನು ಕಂಡ ಊರವರೆಲ್ಲರಿಗೂ ಅಚ್ಚರಿ ,ಸಂತೋಷ, ಎಲ್ಲರೂ ಅವನನ್ನು ಇಷ್ಟು ದಿನ ಎಲ್ಲಿಗೆ ಹೋಗಿದ್ದೆ, ಯಾಕಾಗಿ ಮನೆ ಬಿಟ್ಟು ಹೋಗಿದ್ದೆ, ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು ,ಆದರೆ ಸದಾಶಿವ ಅದಾವುದಕ್ಕೂ ಉತ್ತರಿಸದೆ ಕೇವಲ ಮುಗುಳ್ನಗೆಯ ನೀಡಿ ಹೊರಟ, ಮನೆಯ ಮುಂದೆ ಪಾತ್ರೆ ತೊಳೆಯುತ್ತಿದ್ದ ಮನೆ ಕೆಲಸದಾಕೆ ಅಕ್ಕಮ್ಮ ಸದಾಶಿವನನ್ನು ಕಂಡು ಹರುಷದಿಂದ ರಾಯರನ್ನು ಕರೆದೂ ದೊಡ್ಡೆಜಮಾನ್ರೆ ಚಿಕ್ಕೆಜಮಾನ್ರು ಬಂದಿದ್ದಾರೆ ಎಂದು ಹರುಷದಿಂದ ಕೂಗಿದಳು ಆಗ ಮಗ ಬಂದಿದ್ದಾನೆ ಎಂದು ಸಂತಸದಿಂದ ಹೊರಬಂದ ರಾಯರು ಮತ್ತು ಸರಸಿಗೆ ತಮ್ಮ ಕಣ್ಣನ್ನು ತಾವೇ ನಂಬಲಾಗಲಿಲ್ಲ; ಮತ್ತೆಂದು ಬರಲಾರ ಎಂದುಕೊಂಡಿದ್ದ ಮಗ ಮರಳಿ ಬಂದಿರುವುದನ್ನು ಕಂಡು ಸಂತೋಷಗೊಂಡರು. ರಾಯರು ಮಗನನ್ನು ಆದರದಿಂದ ಒಳ ಬರಮಾಡಿಕೊಂಡರು. ಆಗ ತಂಗಿಯ ಮಗಳು ಭಕ್ತಿಯ ಗೆಜ್ಜೆಯ ಸದ್ದು ಸದಾಶಿವನ ಕಿವಿಗೆ ಬಿತ್ತು, ತನಗೆ ಮಗಳಂತೆ ಇರುವ ಭಕ್ತಿಯ ಮುದ್ದು ಮುಖವನ್ನು ಕಂಡು ತನ್ನಿಂತಾನೇ ನಗು ಮೂಡಿತ್ತು , ಹತ್ತಿಯಂತೆ ಮೃದುವಾಗಿದ್ದ ಮಗುವನ್ನೆತ್ತಿ ಮುದ್ದಿಸಿದ, ಆ ಮಗು ಸದಾಶಿವನ ಕೆನ್ನೆಯನ್ನು ಕೈಯಲ್ಲಿ ಹಿಡಿಯುತ್ತಾ, ಹಲ್ಲಿಲ್ಲದ ಬಾಯಿಯಿಂದ ನಗುತ್ತಿತ್ತು. ಮಗುವಿನ ಕಣ್ಣುಗಳು
ಸದಾಶಿವನನ್ನೇ ನೋಡುತ್ತಿತ್ತು...
ಮುಂದುವರೆಯುವುದು
✍🏻 ನಾಗಶ್ರೀ.ಎಸ್. ಭಂಡಾರಿ
ಮೂಡುಬಿದಿರೆ

Comments
Post a Comment