ಸದಾಶಿವ - ಸಂಚಿಕೆ- 37
ಸದಾಶಿವ
ಸಂಚಿಕೆ- 37
ಗಂಗಾ ಸದಾಶಿವನ ಉಳಿವಿಗಾಗಿ ದೇವರ ಮೊರೆ ಇಟ್ಟಳು.ಶಿವನ ದೇವಸ್ಥಾನ ಬಿಟ್ಟು ಕದಲಲೇ ಇಲ್ಲ .ದೇವರಿಗೆ ಕಣ್ಣೀರ ಅಭಿಷೇಕವನ್ನೇ ಮಾಡಿದಳು.ಅವಳ ನೋವು ,ವೇದನೆ ,ಭಕ್ತಿ, ದೇವರಿಗೆ ಮುಟ್ಟಿತೋ ಏನೋ ಸದಾಶಿವನಲ್ಲಿ ಚೇತರಿಕೆ ಉಂಟಾಯಿತು. ವೈದ್ಯರಿಗೆ ಪರಮಾಶ್ಚರ್ಯ ಸತ್ತೇ ಹೋಗಿದ್ದಾನೆ ಎಂದುಕೊಂಡವನು ಹೇಗೆ ಬದುಕಿದ ಎಂದು. ಈ ಸೃಷ್ಟಿಯೇ ಹಾಗೆ ಮರಣವೆನ್ನುವುದು ಅತಿಥಿ ಹಾಗೆ ,ಹೇಳದೆ ಬರುವಂತಹದ್ದು ,ಆದರೆ ಕೆಲವರಿಗೆ ಮಾತ್ರ ಬದುಕು ಕಟ್ಟಿಕೊಳ್ಳುವ ಅವಕಾಶ ಸಿಗಬಹುದು. ಅಂತಹವರು ಪುಣ್ಯವಂತರೇ ಸರಿ; ಸತ್ತಿದ್ದಾನೆ ಎಂದುಕೊಂಡು ಬದುಕಿದಾಗ ಆಗುವ ಸಂಭ್ರಮವೇ ಬೇರೆ; ಸದಾಶಿವ ಪುಣ್ಯ ಪುರುಷ. ನೂರು ಜನರಲ್ಲಿ ಸದಾಶಿವ ಭಿನ್ನವಾದ ವ್ಯಕ್ತಿತ್ವದವ, ಸದಾಶಿವನ ಹೃದಯದಲ್ಲಿ ನಿಷ್ಕಲ್ಮಶ ಪ್ರೀತಿಗೆ ಇರುವ ಜಾಗ; ಕರುಣೆ, ಪ್ರೀತಿಗೆ ,ಅರ್ಥ ತಿಳಿಯದವರಿಗೆ ಇರಲಿಲ್ಲ;ಸದಾಶಿವನ ಹೃದಯದ ತುಂಬಾ ಈಶ್ವರನೇ ತುಂಬಿಕೊಂಡಿದ್ದ .ಹೆಣ್ಣು ಮಕ್ಕಳೆಂದರೆ ಗೌರವ, ಸ್ವಾಭಿಮಾನಿ,ಸದಾಶಿವನ ರೂಪಕ್ಕೆ ಮರುಳಾಗದವರಿಲ್ಲ, ಹಾಗೆ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡವರೇ ಎಲ್ಲ,ಆದರೆ ಸದಾಶಿವನ ಮನದಲ್ಲಿ ಗೌರಿಯ ಮೇಲೆ ಇರುವಂತಹ ಪ್ರೀತಿ ಬೇರಾರ ಮೇಲೂ ಹುಟ್ಟಿರಲಿಲ್ಲ.ಗಂಗಾಳನ್ನು ತುಂಬಾ ಗೌರವದಿಂದ ಕಾಣುತ್ತಿದ್ದ.ಆದರೆ ಅವಳ ಮೇಲವನಿಗೆ ಯಾವ ಭಾವನೆಯೂ ಇರಲಿಲ್ಲ. ಸದಾಶಿವನ ಚೇತರಿಕೆಯ ವಿಚಾರವನ್ನು ಕೇಳಿಕೊಂಡ ಗಂಗಾ ಹರುಷದಿಂದ ಆಸ್ಪತ್ರೆಯತ್ತ ಓಡಿದಳು.ಅರೆ ಪ್ರಜ್ಞಾವಸ್ಥೆಯಲ್ಲಿದ್ದ
ಸದಾ ಶಿವನನ್ನು ನೋಡುವುದರಲ್ಲಿ ಮಗ್ನಳಾಗಿದ್ದಳು.ಅವನ ಯೋಗಕ್ಷೇಮದ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡು, ಸದಾಶಿವನಿಗೆ ಊಟವನ್ನು ತಾನೇ ತಿನ್ನಿಸುತ್ತಿದ್ದಳು. ಅವಳ ಆರೈಕೆಯಿಂದ ಬೇಗನೆ ಚೇತರಿಸಿಕೊಳ್ಳುತ್ತಿದ್ದ ಸದಾಶಿವನಿಗೆ ಗಂಗಾ ತಾಯಿಯಂತೆ ಕಾಣುತ್ತಿದ್ದಳು. ಈ ಸಂದರ್ಭ ಸದಾಶಿವ ಗಂಗಾಳ ನಡುವೆ ಹೆಚ್ಚಿನ ಬಾಂಧವ್ಯವೇರ್ಪಟ್ಟಿತ್ತು. ಸುಬ್ರಹ್ಮಣ್ಯ ಸ್ವಾಮಿ ಸಮಯ ಸಿಕ್ಕಾಗಲೆಲ್ಲ ಬಂದು ಸದಾಶಿವನ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಇತ್ತ ಗೌರಿ ಗಂಡನ ಮನೆಯವರ ಜತೆ ಹೊಂದಿಕೊಳ್ಳಲು ಪ್ರಯತ್ನಿಸಿ ಸೋತು ಹೋದಳು ,ತಾನು ಇವರ ಜತೆಗೆ ಇದ್ದರೆ ಹಣಕ್ಕಾಗಿ ನನ್ನನ್ನು ಸಾಯಿಸಿ ಬಿಡುವರೆಂಬ ಭಯದಲ್ಲಿ, ಎಲ್ಲರೂ ಮಲಗಿರುವಾಗ ರಾತ್ರೋರಾತ್ರಿ ಮನೆ ಬಿಟ್ಟು ಹೊರಟಳು, ಎಲ್ಲಿಗೆ ಯಾಕೆ ಯಾವ ಕಾರಣಕ್ಕೆ ಹೋಗುತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೆ ಸಾಗುತ್ತಲೇ ಇದ್ದಳು. *ಸಾಗುವ ದಾರಿ ಯಾವುದಾದರೇನು, ಸೇರುವ ಗಮ್ಯ ಸರಿಯಾಗಿದ್ದರೆ, ಸುತ್ತಲಿರುವ ಜನರು ತನ್ನವರೆನಿಸಿದರೆ, ಪ್ರೀತಿಯನ್ನು ನೀಡಿದರೆ, ಇರುವ ಸ್ಥಳ ಗುಡಿಸಲೇ ಆದರೂ ,ಸಿಗುವ ಅನ್ನ ಅರೆ ಬೆಂದಿರುವಂಥದ್ದೇ ಆದರೂ, ಕೊಂಚ ಮಾತ್ರ ಪ್ರೀತಿಯನ್ನು ನೀಡಿದರೆ ಸ್ವರ್ಗವೇ ಸಿಕ್ಕಂತಾಗುತ್ತದೆ* ಗೌರಿಗದಾವುದೂ ಸಿಗಲೇ ಇಲ್ಲ. ಗೌರಿ ನಡೆಯುತ್ತಲೇ ಇದ್ದಳು. ನಡೆಯುತ್ತಲೇ ಇದ್ದಳು..
ಮುಂದುವರಿಯುವುದು
✍🏻 ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments
Post a Comment