ಸದಾಶಿವ - ಸಂಚಿಕೆ- 34
ಸದಾಶಿವ
ಸಂಚಿಕೆ- 34
ಆದರೆ ಸದಾಶಿವ ಬರಲೇ ಇಲ್ಲ ,ಪುರೋಹಿತರು *ಮಾಂಗಲ್ಯಂ ತಂತು ನಾನೇನಾ* ಎಂದಾಗ ಗೌರಿಯ ಕುತ್ತಿಗೆಗೇ ಕುಮಾರ ತಾಳಿ ಬಿಗಿದಾಗಿತ್ತು. ತಾಳಿ ಕೆಲವೊಮ್ಮೆ ಹೆಣ್ಣಿಗೆ ಕಾಮುಕರಿಂದ ರಕ್ಷೆ ,ಇನ್ನು ಕೆಲವೊಮ್ಮೆ ನೇಣು, ಗೌರಿಗೆ ಕುಮಾರ ರಕ್ಷಣೆಯಾಗುವನೋ,
ನೇಣಾಗುವನೋ ಆ ಸದಾಶಿವನೇ ಬಲ್ಲ.ಗೌರಿಯ ಮದುವೆಗೆ ರಾಮರಾಯರ ಕುಟುಂಬ ಕೂಡ ಬಂದಿತ್ತು ,ಸರಳಾಳಿಗೆ ಗೌರಿಗೆ ಈ ಮದುವೆಯಲ್ಲಿ ಮನಸ್ಸಿಲ್ಲ, ಎನ್ನುವುದು ಗೌರಿಯ ಮುಖ ಕಂಡೇ ಗೊತ್ತಾಯಿತು, ಆದರೆ ಅದಕ್ಕೆ ಕಾರಣ ಅವಳಿಗೆ ತಿಳಿದಿರಲಿಲ್ಲ,ಗೌರಿಯ ಮದುವೆ ವಿಜೃಂಭಣೆಯಿಂದ ನೆರವೇರಿತು.ರಾಯರ ಮಗಳಿಗೂ ಮದುವೆಯಾಗಿತ್ತು, ಆ ಸಂಧರ್ಭದಲ್ಲಿ ಸದಾಶಿವನೂ ಇದ್ದ ತಂಗಿಯ ಮದುವೆಯಂದು ಸದಾಶಿವ ಉತ್ಸಾಹದಿಂದ ಓಡಾಡಿಕೊಂಡಿದ್ದ..ಸದಾಶಿವ ಮನೆ ಬಿಟ್ಟ ದಿನವೇ ಅವನ ತಂಗಿ ಮಗುವಿಗೆ ಜನ್ಮವಿತ್ತಿದ್ದಳು.ಅವಳೇ *ಭಕ್ತಿ* ಭಕ್ತಿಯೆಂದರೆ ಎಲ್ಲರಿಗೂ ಮುದ್ದು, ದೈವೀಕಳೆಯಿಂದ ತುಂಬಿ ತುಳುಕುತ್ತಿತ್ತು ಭಕ್ತಿಯ ಮುಖ. ಸದಾಶಿವನ ಜೀವನದಲ್ಲಿ ಭಕ್ತಿಯಿಂದಲೇ ಹಲವು ಬದಲಾವಣೆಗಳಾಗುವ ಮುನ್ಸೂಚನೆಯದು!.
ಸದಾಶಿವ ಗಂಗಾಳ ಜೊತೆಗೂಡಿ ಎಸ್ಟೇಟಿನತ್ತ ಹೋಗುತ್ತಿದ್ದ ,ಗಂಗಾಳಿಗೆ ಸದಾಶಿವನ ಜೊತೆಗೆ ತಿರುಗುವುದೆಂದರೆ ಬಲು ಖುಷಿ ,ಅವನ ಮುಂದೆ ನಡೆವಾಗ ಅವನ ಹಿಂಬದಿಯಲ್ಲೇ ಹೆಜ್ಜೆಯನ್ನಿಟ್ಟು ಬರುತ್ತಿದ್ದಳು. ಗಂಗಾಳಿಗೆ ಸದಾಶಿವನಲ್ಲಿ ಮಾತನಾಡುವ ಆಸೆ ಇದ್ದರೂ, ಮಾತನಾಡಲಾಗದೆ ವ್ಯಥೆ ಪಡುತ್ತಿದ್ದಳು. ತೋಟದಲ್ಲಿರುವ ಅಡಿಕೆ, ಬಾಳೆ ,ತೆಂಗಿನ ಗಿಡಗಳ ನಡುವೆ
ಹಾದಿಯೊಂದಿತ್ತು. ಹಾದಿಯಲ್ಲಿ ನಡೆಯುತ್ತಾ ಸಾಗುತ್ತಿದ್ದರು ಇಬ್ಬರೂ ಮೌನವಾಗಿ,ಬಾವಿಯ ಹತ್ತಿರದ ಶೆಡ್ನ ಬಳಿ ಬಂದಾಗ, ಬೆಂಕಿಯ ಕಿಡಿಯೊಂದು ಸಿಡಿಯುತ್ತಿತ್ತು, ಸದಾಶಿವನ ಅದೇನೆಂದು ನೋಡಲು ಹೋದ, ಗಂಗಾ ಅವನ ಹಿಂದೆಯೇ ಬರುತ್ತಿದ್ದಳು. ಕರೆಂಟ್ ತಂತಿಯಿಂದ ಕಿಡಿ ಹಾರುತ್ತಿದ್ದು ಆ ಕಿಡಿಯನ್ನು ನಂದಿಸಲೆಂದು ಪ್ರಯತ್ನಿಸುತ್ತಿದ್ದಾಗ, ಕಿಡಿ ಹಾರಿ ಒಣಗಿದ್ದ ತೆಂಗಿನೆಲೆಗಳ ಮೇಲೆ ಬಿದ್ದು ಹೊತ್ತಿ ಉರಿಯತೊಡಗಿತು ,ಆ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದ ಸದಾಶಿವನ ಸುತ್ತ, ಉರಿಯುತ್ತಿದ್ದ ಬೆಂಕಿಯನ್ನು ಕಂಡ ಗಂಗಾ ಅಮ್ಮ
ಎಂದರಚಿ ಮೂರ್ಛೆ ತಪ್ಪಿ ಬಿದ್ದಳು.ಸದಾಶಿವ ಬೆಂಕಿಯನ್ನು ನಂದಿಸಿ ಕ
ಗಂಗಾಳ ಬಳಿ ಬಂದಾಗ ಗಂಗಾ ಮೂರ್ಛೆ ತಪ್ಪಿ ಬಿದ್ದಿದ್ದಳು.
ಅವಳನ್ನೆತ್ತಿಕೊಂಡು ಮನೆಯೊಳಗೆ ಕರೆದುಕೊಂಡು ಬಂದು ಮಲಗಿಸಿದ.ಮಗಳಿಗೆ ಏನಾಯಿತೆಂದು ಗಾಬರಿಯಿಂದ ಬಂದ ಸುಬ್ರಹ್ಮಣ್ಯ ಸ್ವಾಮಿ ಸದಾಶಿವನ ಬಳಿ ಏನಾಯಿತೆಂದು ಕೇಳಿದಾಗ , ತೋಟದಲ್ಲಿ ನಡೆದ ವಿಷಯವನ್ನು ಹೇಳಿದ .ಸುಬ್ರಹ್ಮಣ್ಯ ಸ್ವಾಮಿಗೆ ಗಾಬರಿಯಾಯಿತು. ಕೆಲಸದವಳು ತಂದ ನೀರನ್ನು ಗಂಗಾಳ ಮುಖಕ್ಕೆ ಎರಚಿದಾಗ, ನಿಧಾನವಾಗಿ ಕಣ್ತೆರೆದ ಗಂಗಾ ಎಲ್ಲರತ್ತ ನೋಡತೊಡಗಿದಳು. ಬೀಳುವುದಕ್ಕಿಂತ ಮೊದಲು ಗಂಗಾ *ಅಮ್ಮಾ* ಎಂದು ಕೂಗಿದ್ದನ್ನು ಕೇಳಿಸಿಕೊಂಡಿದ್ದ ಸದಾಶಿವ ಗಂಗಾಳ ಬಳಿ ಬಂದು,ಈಗ ಹೇಗಿದ್ದೀಯಾ ಎಂದು ಕೇಳಿದಾಗ ,ಚೆನ್ನಾಗಿದ್ದೇನೆ ಎನ್ನುವಂತೆ ತಲೆಯಲ್ಲಾಡಿಸಿದಳು.. ಗಂಗಾ ಮಾತನಾಡುತ್ತಿಲ್ಲವೆಂದು ಸದಾಶಿವನಿಗೆ ನಿರಾಸೆಯಾಯ್ತು. ಅದನ್ನು ತೋರ್ಪಡಿಸದೆ ನಗುಮುಖದಿಂದಲೇ ಗಂಗಾಳಿಗೆ ಕೈ ಆಸರೆ ಕೊಟ್ಟು ಎಬ್ಬಿಸಲು ಪ್ರಯತ್ನಿಸಿದ, ಆಗ ಗಂಗಾಳ ಮುಖದಲ್ಲಿ ಕೀಟಲೆಯ ನಗುವಿತ್ತು.
ಮುಂದುವರಿಯುವುದು
✍🏻 ನಾಗಶ್ರೀ.ಎಸ್.ಭಂಡಾರಿ
ಮೂಡುಬಿದಿರೆ

Comments
Post a Comment