ಹೆಮ್ಮೆಯ ಭಂಡಾರಿ ಪ್ರತಿಭೆ : 3 - ನಾಗಶ್ರೀ ಸಂತೋಷ್ ಭಂಡಾರಿ

ಹೆಮ್ಮೆಯ ಭಂಡಾರಿ ಪ್ರತಿಭೆ - 3


    ನಮ್ಮ ಈ ವಾರದ ಭಂಡಾರಿ ಪ್ರತಿಭೆಯಾಗಿ  ಶ್ರೀಮತಿ ನಾಗಶ್ರೀ ಸಂತೋಷ್ ಭಂಡಾರಿ ಮೂಡಬಿದಿರೆಯವರು.

ಇವರು ಚಂದ್ರಶೇಖರ್ ಭಂಡಾರಿ ಮೂಡಬಿದ್ರೆ ಹಾಗೂ ಶ್ರೀಮತಿ ಜಯಂತಿ ಚಂದ್ರಶೇಖರ್ ಭಂಡಾರಿಯವರ ಸುಪುತ್ರಿಯಾಗಿ ದಿನಾಂಕ 11-4-1994ರಲ್ಲಿ ಜನಿಸಿದರು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಬಿದಿರೆ ಮೈನ್ ನಲ್ಲಿ ಪ್ರಾಥಮಿಕ ಶಿಕ್ಷಣ ವನ್ನು ಪೂರ್ಣಗೊಳಿಸಿ ನಂತರ ಜೈನ್ ಹೈಸ್ಕೂಲ್ ನಲ್ಲಿ ಹೈಸ್ಕೂಲ್ ವಿಧ್ಯಾಭ್ಯಾಸ ಪಡೆದರು. ನಂತರ ಕಾಲೇಜು ವಿಧ್ಯಾಭ್ಯಾಸವನ್ನು ಜೈನ್ ಜ್ಯೂನಿಯರ್ ಕಾಲೇಜ್ ಮೂಡಬಿದ್ರೆಯಲ್ಲಿ ಪಡೆದು ಮಹವೀರ ಕಾಲೇಜು ಮೂಡಬಿದ್ರೆ ಯಲ್ಲಿ ಪದವಿ ಪಡೆದು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಯಲ್ಲಿ  ಸ್ನಾತಕೋತ್ತರ  ಪಡೆದ ನಾಗಶ್ರೀ ಸಂತೋಷ್ ಭಂಡಾರಿಯವರ ವಿದ್ಯಾರ್ಹತೆ ಅರ್ಥಶಾಸ್ತ್ರ ದಲ್ಲಿ ಎಂಎ.
ಇವರು ಶೀ ಸಂತೋಷ್ ಭಂಡಾರಿಯವರ ಮುದ್ದಿನ ಪತ್ನಿಯಾಗಿ ಒಂದು ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.




ಇವರಿಗೆ ಹೈಸ್ಕೂಲಿನಿಂದಲೇ ಪುಸ್ತಕಗಳನ್ನು ಓದೂವ ಗೀಳು.ಇವರಿಗೆ ಪ್ರಥಮ ಸ್ಪೂರ್ತಿ ಇವರ ತಂದೆ ಶ್ರೀ ಚಂದ್ರಶೇಖರ್ ಭಂಡಾರಿಯವರು.ನಂತರ ಮುನಿರಾಜ ರೆಂಜಾಳರವರ ಪ್ರೋತ್ಸಾಹ.ಪಿಯುಸಿಯಲ್ಲಿ ಯಕ್ಷಗಾನದ ಗೀಳು ಹೆಚ್ಚಿಸಿಕೊಂಡ ಇವರಿಗೆ ನಂತರ ಬರವಣಿಗೆಯೂ ಅಭ್ಯಾಸವಾಗುತ್ತಾ ಹೋಯಿತು.ನಂತರದ ದಿನಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ ಇವರು ಹಲವಾರು ಪ್ರಶಸ್ತಿಯನ್ನು ಪಡೆದರು. ಪದವಿಗೆ ಬಂದ ನಂತರ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಜತೆಕಾರ್ಯದರ್ಶಿಯಾಗಿ ಆಯ್ಕೆಯಾದರು.ಅಲ್ಲೂ ಯಕ್ಷಗಾನವನ್ನು ಮಾಡುತ್ತಿದ್ದರು. ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರಿಗೆ ಮಹಾವೀರ ಕಾಲೇಜಿನ ಅತ್ಯುತ್ತಮ ಸಾಂಸ್ಕೃತಿಕ ವಿಧ್ಯಾರ್ಥಿ ಪ್ರಶಸ್ತಿ, ವಿಜಯ ಕಥಾ ಪ್ರಶಸ್ತಿ, ಕನ್ನಡ ಕೀರ್ತಿಶ್ರೀ ಪ್ರಶಸ್ತಿ, ಬೆಳಂದಿಗಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ, ಹೀಗೆ ಹಲವು ಸಮ್ಮೇಳನದಲ್ಲಿ ಭಾಗವಹಿಸುವಿಕೆ.ಭಾಷಣ ಸ್ಪರ್ಧೆ, ಕಥಾ ಸ್ಪರ್ಧೆ, ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ಪುರಸ್ಕಾರ...
ಇತ್ತೀಚೆಗೆ ರಾಷ್ಟ್ರೀಯ ಪುರಸ್ಕಾರ, ಕವಿಗೋಷ್ಟಿಯ ಅಧ್ಯಕ್ಷತೆ,ಜಿಲ್ಲಾ ಮಟ್ಟದ ತುಳುಕೂಟದಲ್ಲಿ ಸನ್ಮಾನ, ಭಂಡಾರಿ ಸಂಘದಲ್ಲಿ ಸನ್ಮಾನ.
ಇವರು 1000ಕ್ಕಿಂತಲೂ ಅಧಿಕ ಕವನಗಳನ್ನು,50ಕ್ಕಿಂತಲೂ ಹೆಚ್ಚು ಸಣ್ಣ ಕಥೆಗಳು, ಇತ್ತೀಚೆಗೆ ಒಂದು ಕಾದಂಬರಿಯನ್ನು ಬರೆದಿದ್ದಾರೆ.


ಇವರ ಲೇಖನಗಳಿಗೆ ಮೂಲ ಸ್ಪೂರ್ತಿ ಶೇಖರ್ ಅಜೆಕಾರ್.ಕಾದಂಬರಿ ಬರೆಯಲು ಇವರಿಗೆ ಸ್ಪೂರ್ತಿ ನಾಗೇಶ್ ಕರಿಂಕ.
ನಾಗಶ್ರೀ ಭಂಡಾರಿ ಯವರಿಂದ ಹಲವಾರು ಬರಹಗಳು ಇನ್ನಷ್ಟು ಮೂಡಿ ಬರಲಿ.
ದೇವರು ಇವರ ಬರಹಕ್ಕೆ ಇನ್ನಷ್ಟು ಸಹಕಾರ ನೀಡಲಿ. ಎಂದು ನಾವು ಹಾರೈಸುವ..





✍🏾  ವರದಿ: ರತೀಶ್ ಭಂಡಾರಿ ಕುಂಜಿಬೆಟ್ಟು

Comments

  1. Wow! Come on Shree..
    You deserve it.....
    Keep it up..
    I just want to see you on the stage of Kannada sahitya sammelana

    ReplyDelete
  2. Congrats nagu... Im very happy and feeling proud to say you are my best friend. Keep on going dear. God's grace always with you

    ReplyDelete
  3. Thank you so much cynthia..love you...and I am also happy to have a friend like u..

    ReplyDelete

Post a Comment

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32