ಸದಾಶಿವ -ಸಂಚಿಕೆ-14
ಸದಾಶಿವ
ಸಂಚಿಕೆ-14
ಇತ್ತ ತಾಯಿಯ ಮನೆಗೆ ಬಂದ ಸರಸಿ, ತಾಯಿಯ ಆರೈಕೆಯಲ್ಲಿ ಇನ್ನಷ್ಟು ಮುದ್ದಾಗಿದ್ದಳು. ಎಂಟನೆ ತಿಂಗಳಾಗುವ ಹೊತ್ತಿನಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಕೂಡ ಬಂದಿತು..ಸರಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಳು.ಈ ವಿಷಯ ಕೇಳಿದ ರಾಮರಾಯರ ಸಂತಸಕ್ಕೆ ಪಾರವೇ ಇರಲಿಲ್ಲ ಸರಸಿಯನ್ನು ನೋಡಲು ಅತ್ತೆ ಮನೆಗೆ ಬಂದು ಬಿಟ್ಟಿದ್ದರು.ಎಂಟು ತಿಂಗಳ ಗರ್ಭಿಣಿ ಸರಸಿ ತಾಯ್ತನದ ಕಳೆಯಿಂದ ಮಿಂಚುತ್ತಿದ್ದಳು..ರಾಯರ ನೋಟಕ್ಕೆ ಆ ಸಮಯದಲ್ಲೂ ನಾಚಿದಳು, ತನ್ನನ್ನು ಕಂಡಾಗ ರಂಗೇರುತ್ತಿದ್ದ ಕೆಂಪು ಕೆನ್ನೆಗಳಿಗೆ ಮುತ್ತಿಕ್ಕುವ ಮನಸ್ಸಿದ್ದರೂ ,ಅತ್ತೆ ಮಾವನ ಎದುರು ಸಲ್ಲದೆಂದು ಸುಮ್ಮನಿದ್ದರೂ ,ಆ ದಿನ ರಾತ್ರಿ ಅತ್ತೆ ಮನೆಯಲ್ಲೇ ಉಳಿದ ರಾಯರು, ಮರುದಿನ ಸರಸಿಗೆ ಆರೋಗ್ಯ ಜೋಪಾನ, ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊ ಎಂದೆಲ್ಲಾ ಬುದ್ಧಿ ಮಾತು ಹೇಳಿ ಹೊರಟು ನಿಂತರು, ಆ ಸಮಯದಲ್ಲಿ ಸರಸಿಗೆ ಅಳುವೇ ಬಂದುಬಿಟ್ಟಿತ್ತು, ರಾಯನ್ನಪ್ಪಿ ಅಳುತ್ತಾ ಬೀಳ್ಕೊಟ್ಟಳು. ಸಮಯವೆನ್ನುವುದು ನಿಲ್ಲುವುದಿಲ್ಲ ತನ್ನ ಪಾಡಿಗೆ ತಾನು ಚಲಿಸುತ್ತಲೇ ಇರುತ್ತದೆ. ಎಂಟು ತಿಂಗಳು ಕಳೆದು ಒಂಬತ್ತು ತಿಂಗಳು ಪೂರ್ತಿ ಆಗುತ್ತಾ ಬಂತು, ಸರಸಿ ತುಂಬಿದ ಹೊಟ್ಟೆಯಲ್ಲಿ ಇದ್ದರೂ ಕೂಡ ಅದು ಇದು ಕೆಲಸವನ್ನು ಮಾಡುತ್ತಿದ್ದಳು. ಹಿರಿಯರದಂತೆ ಗರ್ಭಿಣಿ ಮಹಿಳೆಯರು ನಾಜೂಕಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ಹೆರಿಗೆ ಸುಲಭವಾಗುತ್ತದೆಯಂತೆಒಂಬತ್ತು ತಿಂಗಳು ಪೂರ್ತಿಯಾಗಿ ಏಳನೇ ದಿನದಂದು ಬೆಳಗೆದ್ದು ತಲೆಗೆ ಸ್ನಾನ ಮಾಡಿ, ದೇವರಿಗೆ ಕೈ ಮುಗಿದು ತಾಯಗೆ ಅಡಿಗೆಗೆ ಏನಾದರೂ ಸಹಾಯ ಮಾಡೋಣ ಎಂದುಕೊಂಡು ಅಡುಗೆ ಮನೆಯತ್ತ ಹೊರಟಾಗ, ಸರಸಿಗೆ ಹೆರಿಗೆ ನೋವು ಶುರುವಾಯಿತು..ತುಂಬು ಗರ್ಭಿಣಿ ನೋವನ್ನು ತಾಳಲಾರದೆ ನೆಲದಲ್ಲಿ ಮಲಗಿ ಅಳತೊಡಗಿದಳು. ಮಗಳು ಅಳುತ್ತಿರುವುದನ್ನು ಕೇಳಿಸಿಕೊಂಡು ಲಕ್ಷ್ಮಮ್ಮ ಹೊರಗೆ ಪಾತ್ರೆ ತೊಳಿಯುವುದನ್ನು ಬಿಟ್ಟು ಒಳಗೋಡಿ ಬಂದಾಗ ಮಗಳು ಅಳುತ್ತಿರುವುದನ್ನು ಕಂಡ ಲಕ್ಷ್ಮಮ್ಮನಿಗೆ ಒಂದು ಗಳಿಗೆ ಕೈಕಾಲು ಆಡಲಿಲ್ಲ ಆದರೂ ಧೈರ್ಯಗುಂದದೆ ಪಕ್ಕದ ಮನೆಯ ಜಲಜಮ್ಮ ನನ್ನು ಕರೆದು ಮಗಳನ್ನು ಸ್ವಲ್ಪ ನೋಡಿಕೊಳ್ಳಿ ಎಂದು ಹೇಳಿ ಸೂಲಗಿತ್ತಿ ವನಜಮ್ಮನ ಮನೆಗೆ ಓದಿದರು. ಮಗಳು ಹೆರಿಗೆ ನೋವಿನಿಂದ ಅಳುತ್ತಿದ್ದಾಳೆ ಬೇಗ ಬನ್ನಿ ಎಂದು ವನಜಮ್ಮನನ್ನು ಅವಸರಿಸತೊಡಗಿದರು. ವನಜಮ್ಮ ಹೆರಿಗೆಗೆ ಬೇಕಾದ ಬಟ್ಟೆ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಸರಸರ ಲಕ್ಷ್ಮಮ್ಮನ ಮನೆಗೆ ಹೊರಟರು. ಇತ್ತ ಸರಸಿ ಅಮ್ಮ ಎಂದು ನೋವಿನಿಂದ ಚೀರುತ್ತಿದ್ದಳು ,ಸತತ ಮೂರು ಗಂಟೆಗಳ ನೋವಿನಿಂದ ಬಳಲಿದ್ದಳು. ಸರಸಿ ಕೊನೆಗೂ ವಂಶೋದ್ಧಾರಕನಿಗೆ ಜನ್ಮವಿತ್ತಳು.ಗಂಡು ಮಗು ಹುಟ್ಟಿದ ವಿಚಾರವನ್ನು ಕೂಡಲೇ ರಾಮರಾಯರಿಗೆ ತಿಳಿಸಲು ಕೃಷ್ಣಪ್ಪನವರು ತನ್ನ ಸ್ನೇಹಿತನಲ್ಲಿ ಹೇಳಿ ಪಕ್ಕದೂರಿಗೆ ಕಳುಹಿಸಿಕೊಟ್ಟರು. ಮಗು ಹುಟ್ಟಿದ ದಿನ ಅಮಾವಾಸ್ಯೆ , ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಮಗುವಿನ ಜನನವಾಯಿತು. ಇತ್ತ ರಾಮರಾಯರು ಮನೆ ಮುಂದೆಯೇ ಇದ್ದ ತೆಂಗಿನ ಮರಕ್ಕೆ ಎಳನೀರು ಕೊಯ್ಯುತ್ತಿದ್ದವರು ಆಯ ತಪ್ಪಿ ಬಿದ್ದು ಬಿಟ್ಟರು. ಜಗಲಿಯಲ್ಲಿ ಕುಳಿತಿದ್ದ ಮುತ್ತುಲಕ್ಷ್ಮಿ ಮಗ ಬಿದ್ದುದನ್ನು ಕಂಡು ಅಯ್ಯೋ ಎಂದು ಮಗನ ಬಳಿ ಓಡಿದರು. ಹೆಚ್ಚಿಗೇನೂ ಏಟು ಆಗದಿದ್ದರೂ ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು ಮಗನನ್ನು ಎಬ್ಬಿಸಿ ಮನೆಯೊಳಗೆ ಕರೆದುಕೊಂಡು ಬಂದ ಮುತ್ತುಲಕ್ಷ್ಮಿ ಮಗನ ಕಾಲಿಗೆ ಬಿಸಿ ನೀರು ಸುರಿದು ,ನೋವಿನ ಎಣ್ಣೆಯನ್ನು ಹಚ್ಚಿದರು. ಅಷ್ಟೊತ್ತಿಗಾಗಲೇ ಹೊರಗಿನಿಂದ ಯಾರೋ ಕರೆದಂತಾಗಿ ಹೊರ ಬಂದು ನೋಡಿದಾಗ...
ಮುಂದುವರಿಯುವುದು
✍🏻 ನಾಗಶ್ರೀ.ಎಸ್.ಭಂಡಾರಿ
ಮೂಡುಬಿದಿರೆ

Comments
Post a Comment