ಸದಾಶಿವ - ಸಂಚಿಕೆ- 12
ಸದಾಶಿವ
ಸಂಚಿಕೆ- 12
ದೇವರು ಗಂಡು ಮತ್ತು ಹೆಣ್ಣನ್ನು ಸೃಷ್ಟಿ ಮಾಡಿ ಒಬ್ಬರಿಗೊಬ್ಬರು ಸಹಾಯಕರಾಗಿ ಇರಬೇಕೆಂಬ ಉದ್ದೇಶದಿಂದ ಮದುವೆ ಎಂಬ ಬಂಧನವನ್ನು ಮಾಡಿದ, ಕುಟುಂಬದ ಯಜಮಾನನಾಗಿದ್ದು ಕುಟುಂಬದಲ್ಲಿ ಮುಂದಾಳತ್ವ ವಹಿಸಬೇಕು ,ಊಟ ಬಟ್ಟೆ ಇತ್ಯಾದಿಗಳನ್ನು ಒದಗಿಸಬೇಕು, ಪತ್ನಿಯನ್ನು ನಿಸ್ವಾರ್ಥ ಭಾವದಿಂದ ಪ್ರೀತಿಸಬೇಕು, ಪತಿ ಪತ್ನಿ ಪರಸ್ಪರ ಪ್ರೀತಿಯಿಂದ ಗೌರವದಿಂದ ನಡೆದುಕೊಂಡರೆ ಮಾತ್ರ ಸುಖಿ ಸಂಸಾರ ಸಾಧ್ಯ ಎನ್ನುವುದು ತಿಳಿದವರಂದ ನುಡಿ.
ಹಾಗೇ ಸರಸಿ ಕೂಡ ಈಗ ಸುಖಿ ಸಂಸಾರದ ಒಡತಿ, "ವೆಚ್ಚಕ್ಕೆ ಹೊನ್ನಿರಲು,ಬೆಚ್ಚಗೆ ಮನೆಯಿರಲು, ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ" ಎನ್ನುವ ಮಾತಿನಂತೆ ರಾಯರು ಕೂಡ ಸರಸಿಯ ತುಂಬು ಪ್ರೀತಿಯಲ್ಲಿ ಸುಖಿ, *"ಒಡಲಿಡಿದು ಗಳಿಸಿದಾ| ಒಡವೆಗಳು ಒಡಲಿರಲು ಕೊಡದುಣ್ಣದಿಟ್ಟು ಮಾಡಿದರೆ ,ಒಡವೆಯೋ| ನೊಡನೆ ಹೂಳುವರೆ"* ಸರ್ವಜ್ಞ ಅಂದರೆ ತನ್ನ ಹೊಟ್ಟೆಯನ್ನು ಕಟ್ಟಿ ಒಡವೆಗಳನ್ನು ಸಂಗ್ರಹಿಸಿ ಇಟ್ಟುಕೊಂಡು,( ಯಾರಿಗೂ ದಾನ ಧರ್ಮ ಮಾಡದೆ)ಒಂದು ದಿನ ಸತ್ತು ಹೋದರೆ ಅವನೊಂದಿಗೆ ಆ ಒಡವೆಗಳನ್ನು ಹೂಳುವರೆ ಎಂಬುದಾಗಿ, ಬೇಕಾದಷ್ಟು ಹಣ, ಐಶ್ವರ್ಯ ಇದ್ದರೂ ಕೂಡ ಕೆಲವರು ಜಿಪುಣರಂತೆ ವರ್ತಿಸಿ ಕೂಡಿಡುತ್ತಾರೆ, ಆದರೆ ಸತ್ತಾಗ ಅವೆಲ್ಲವನ್ನೂ ಬಿಟ್ಟು ಒಂಟಿಯಾಗಿ ಹೋಗುತ್ತಾರೆ. ಅಂತಹ ಜಿಪುಣರಿಗೆ ಮಾದರಿ ಎನಿಸಿದವರು ರಾಮರಾಯರು. ಇಂದು ನನ್ನದಾಗಿದ್ದು, ನಾಳೆ ಇನ್ಯಾರದ್ದೋ ಆಗಲಿದೆ, ಮತ್ತೆ ಬೇರೆ ಯಾರದ್ದೂ ಆಗುತ್ತದೆ ,ಎನ್ನುವಂತೆ ತನ್ನಲ್ಲಿರುವುದನ್ನು ಹಂಚಿ ತಿನ್ನಬೇಕು ಎನ್ನುವವರು ರಾಯರು, ಕೃಷಿಯಿಂದ ಬೇಕಾದಷ್ಟು ಲಾಭ ಬಂದಾಗ ಕೆಲಸಗಾರರಿಗೂ ಹೆಚ್ಚಿನ ಸಂಬಳವನ್ನು ನೀಡುತ್ತಿದ್ದರು ,ಊರಿನಲ್ಲಿ ಯಾರೇ ಕಷ್ಟ ಎಂದು ಬಂದಾಗ ಯೋಚಿಸದೆ ಸಹಾಯ ಮಾಡುತ್ತಿದ್ದರು.ಆದ್ದರಿಂದಲೇ ಶ್ರೀಪತಿ ರಾಯರು ರಾಮರಾಯರನ್ನು ತಮ್ಮ ಮಗನಂತೆ ಪ್ರೀತಿಸುತ್ತಿದ್ದರು. ರಾಮರಾಯರು ಏನು ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಊರಿನವರಿಗೆ ಶ್ರೀಪತಿ ರಾಯರು ಮತ್ತು ರಾಮರಾಯರು ದೇವಸ್ವರೂಪಿ ಗಳಾಗಿದ್ದರು.
ಇತ್ತ ಸರಸಿಯು ಕೂಡ ರಾಮರಾಯರ ಪ್ರೀತಿಯ ಅಲೆಯಲ್ಲಿ,ಅತ್ತೆಯ ಮುದ್ದಿನಿಂದ ಸುಖವಾಗಿದ್ದಳು..ಈಗವಳಿಗೇ ತಾಯಿ ಮನೆಗಿಂತ ಗಂಡನ ಮನೆಯ ಮೇಲೆ ಪ್ರೀತಿ ಅಧಿಕವಾಗಿತ್ತು. ಮೊದಲೇ ನಿರ್ಧರಿಸಿದಂತೆ ಪಿಯುಸಿ ಶಿಕ್ಷಣವನ್ನು ಮನೆಯಲ್ಲಿ ಕುಳಿತು ಕಲಿಯುತ್ತಿದ್ದ ಸರಸಿಗೆ ಅತ್ತೆಯೂ ಬೆಂಬಲವಾಗಿದ್ದರು.. ಪ್ರಥಮ ಪಿಯುಸಿ ಮುಗಿದು ,ದ್ವಿತೀಯ ಪಿಯುಸಿಗೆ ಬರುವ ಸಂದರ್ಭದಲ್ಲಿ ಸರಸಿ ಗರ್ಭಿಣಿಯಾದಳು.ಗುತ್ತಿನ ಮನೆಯ ಗತ್ತಿನ ವಾರಸುಧಾರನ ಆಗಮನಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದರು.ಏಳನೇ ತಿಂಗಳಿನಲ್ಲಿ ಸೀಮಂತ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು, ಆ ದಿನವು ಲಗುಬಗೆಯಿಂದ ಬಂದಿತು..ಅಂದು ಸರಸಿಗೆ ತಲೆ ತುಂಬಾ ಹೂವನ್ನ ಮುಡಿಸಿ,ಹಸಿರು ಗಾಜಿನ ಬಳೆಗಳನ್ನು ತೊಡಿಸಿ, ಕಡು ಹಸಿರು ಬಣ್ಣದ ಸೀರೆಯನ್ನುಡಿಸಿ ಅಲಂಕರಿಸಿದ್ದರು. ತಾಯಿಯಾಗುವ ಸಂಭ್ರಮದಲ್ಲಿ ಸರಸಿಯ ಮೊಗವು ದೇವತೆಯಂತೆ ಕಾಣುತ್ತಿದ್ದವು.ಸರಸಿಯನ್ನು ಕಂಡ ರಾಮ ರಾಯರಿಗೆ ಹೆಮ್ಮೆಯಾಗಿತ್ತು. ಸೀಮಂತದ ಕಾರ್ಯಕ್ರಮದಲ್ಲಿ ಸರಸಿಗೆ ಬೇಕಾದುದನ್ನೆಲ್ಲ ವನ್ನು ತಂದುಕೊಟ್ಟಿದ್ದರು. ಆಗ ಒಂದು ಅಜ್ಜಿ ಮುಂದೆ ಬಂದು....
ಮುಂದುವರೆಯುವುದು..
✍🏻ನಾಗಶ್ರೀ.ಎಸ್.ಭಂಡಾರಿ ಮೂಡಬಿದಿರೆ.

Comments
Post a Comment