ಹಳೆ ಸಮಸ್ಯೆ ಹೊಸ ಚಿಗುರಿಗೂ ಅಂಟಿಕೊಳ್ಳುತ್ತಿದೆ-ಕಾತಿ೯ಕ್ ಮಜಲ್ ಮಾರ್

 ಹಳೆ ಸಮಸ್ಯೆ ಹೊಸ ಚಿಗುರಿಗೂ ಅಂಟಿಕೊಳ್ಳುತ್ತಿದೆ



        ಹಳೆಯ ಬೇರು,ಹೊಸ ಚಿಗುರಿಗು ಸಮಸ್ಯೆಯ ಉಸಿರು ಬೆರೆತುಕೊಂಡಿರುದು ಅಶ್ಚಯ೯  ! . ವಿದ್ಯಾಬ್ಯಾಸ ಮುಗಿಸಲು ತನಗೆ ಆಹ೯ವಾದ ಕೊಸು೯ಗಳನು ಪಡೆದು ಪೂಣ೯ಗೊಳಿಸುದರಲ್ಲಿ ಸಾಕಷ್ಟು ಪರಿಶ್ರಮವನು ಪಡುವರು.ಮುಂದೆ ಉದ್ಯೋಗವೆಂಬ ಮಹಾರಥವನು ಹುಡುಕಿ ತಡಾಕಾಡಿ ಉದ್ಯೋಗಗಿಟ್ಟಿಸಿಕೊಳ್ಳುವರು ಕೆಲವರು.ಉದ್ಯೋಗ ಸಿಗದಿದ್ದರೆ ಸ್ವ ಉದ್ಯೋಗ ,ಇನ್ನಿತರ ಕೆಲಸ ಸಣ್ಣ ಪುಟ್ಟ ವ್ಯವಹಾರಗಳಲಿ ತನ್ನ ಜೀವನವನು ನಿವ೯ಹಿಸವರು ಉಳಿದವರು.

ಯುವ ಜನಾಂಗ ಹಣದ ಜೊತೆ ಸರಸವಾಡಲು ಆರಂಭಿಸಿದರೆ ಹಣದ ಮದದೊಳಗೆ ತನ್ನ ಒಳ್ಳೆಯತನವನು ಕಡಿದುಕೊಂಡು ಬದುಕಿನಲಿ ಹಣವನೇ ಜೀವಾಳವೆನಿಸಿದರೆ ಯೌವನದ ಬದುಕು ಗೋಳಾಗಬಹುದು.ಮನೆ ಮಂದಿಯ ದೂರವಿರಿಸಿದರೆ ಭಾರತೀಯ ಸಂಪ್ರದಾಯಗಳನು ಬದಿಗಿರಿಸಿದರೇ ಹೋಳಾದ ಜೀವನವು ಸತ್ವ ಹೀನವಾಗುದರಲಿ ಸಂಶಯವೇ ಇಲ್ಲ.

ಪ್ರೀತಿ ಎಂಬ ಬಲೆಯೊಳಗೆ ಯೌವನ ಕಳೆದುಕೊಳ್ಳುವವರ ಸಂಖ್ಯೆ ಆಧುನಿಕ ಬದುಕಿನ ಪುಟದಲಿ ಗೋಚರಿಸುದು.ಯೌವನದಲಿಯೇ ಪ್ರೀತಿ ಅಯಸ್ಕಾಂತದಂತೆ ಅಕಷಿ೯ಸಿ ಸಮಯನು ಒಳ್ಳೆಯಾದಾಗಿಸಬಹುದು ಕೆಟ್ಟದಾಗಿ ಕಾಡಬಹುದು ಎರಡು ಮುಖವನಿರಿಸಿದ ಪ್ರೀತಿ ಮೋಸ,ನಂಬಿಕೆ,ವಿಶ್ವಾಸ,ದ್ರೋಹ,ಸಂಬಂಧ ಇತ್ಯಾದಿಗಳನು ಉನ್ನತಿಕರಿಸಬಹುದು ,ವಿರುದ್ದವಾಗಿ ಸಾಗಿ ಸಂಭ್ರಮಿಸಬಹುದು.ಯೌವನದ ಸಮಯವನು ಹಾಳು ಮಾಡುದೋ- ಲಾಭಗೊಳಿಸುದೋ ಯುವ ಮನಸ್ಸಿನಲಿಯೇ ಉತ್ತರವಿರುದು.

 ದುಶ್ಚಾಟಗಳು ಬೇಗ ಸೆಳೆಯುತ  ಯುವ ಜನಾಂಗ ಹೊರಬರಲಾರದೇ ಅಲ್ಲೇ ದಾಸನಾಗಿ ಅಯ್ಯಷ್ಯವನು ಕರಗಿಸಿ ಬದುಕಿನ ಏಣಿಯಿಂದ ಜಾರಿ ಬೀಳೊದೇ ಹೆಚ್ಚು.
ಹೊನ್ನು-ಮಣ್ಣು- ಹೆಣ್ಣು ಗಳ ಹಿಂದೆ ಬಿದ್ದರೆ ಯುವ ಪಡೆ ತನ್ನ ಬದುಕಿನ ಬಂಡಿಯಲಿ ಬಹಳ ಕೊಂಡಿಗಳ ಕಳಚಿ ತೊಂದರೆ ಸಂದಿಯನು ಹಿಡಿಯುದು ನಿಚ್ಚಲವಾಗುತ್ತದೆ.ತಾನಾಗಿಯೇ ಒಲಿದು ಬಂದರೆ ಈ ಶಕ್ತಿ ಶಾಶ್ವತವಾಗಿ ಒಳ್ಳೆಯತನದಲಿ ಸದಾ ನೆಲೆಸುತ್ತದೆ ಜೊತೆಯಾಗಿ.

ಬೆಟ್ಟಿಂಗ್ ಮಾಡೋ ಮೋಜು ಹವ್ಯಾಸ ಯುವ ಜನರನು ಕಾಡುವ ಆಧುನಿಕ ಪಿಡುಗು,ಹಣದ ಉತ್ಪಾದನೆ ಮಾಡಬಹುದೆಂದು ಅಡ್ಡ ಹಾದಿ ಹಿಡಿದರೆ ಹಣ ಅವನ ಬೊಕ್ಕಸಾ ಖಾಲಿ ಮಾಡಬಹುದು ಹೊರತು ತುಂಬುದು ಬಹಳ ಕಷ್ಟವೇ ಸರಿ.


   ಆಧುನಿಕ ಯುಗದೊಳಗೆ ಯುವ ಜನಾಂಗಕೆ ಎಲ್ಲವೂ ಒಳ್ಳೆಯದರಂತೆ ಕಾಣಬಹುದು,ಕೆಟ್ಟದು ಅಕಷ೯ಣೆಯಾಗಿ ಕಾಣಬಹುದು ಅದರೆ ಸರಿಯಾದ ಮಾಹಿತಿಯನು ಪಡೆದರೆ ಉತ್ತಮ ವ್ಯಕ್ತಿ ಯಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡು ಯುವ ಪಡೆಯು ಎಲ್ಲರೊಳಗೆ ಅದಶ೯ಪ್ರಾಯರಾಗಿ ಬದುಕಬಹುದು

ಯೌವನದಲಿ ತಪ್ಪು ಹಾದಿ ತುಳಿಯಬಹುದು,ತಪ್ಪು ಮಾಡದಿರುವ ವ್ಯಕ್ತಿ ಯಾರು ಇಲ್ಲ ಸರಿಯಾದ ಹಾದಿ ಹಿಡಿತು ಬದುಕಿನ ಪಥವನು ನಡೆಸುದಕೆ ಯುವ ಮನಸ್ಸುಗಳು ಪ್ರಯತ್ನಿಸಲು ಶ್ರಮಿಸಬೇಕು.ಯುವ ಜನಾಂಗದ ಅಕಷ೯ಕ ಸಮಸ್ಸೆ,ಉದೋಗ್ಯ ಸಮಸ್ಯೆ ಇನ್ನಿತರ ಸಮಸ್ಯೆಗಳು ಪರಿಹಾರವಾಗುದರೊಂದಿಗೆ ಹಲವಾರು ಅಕಷ೯ಕ ವಸ್ತುಗಳನು ನಿಗ್ರಹಿಸಿದರೆ ,ಯುವ ಸಂಪತ್ತು ದೇಶದ ಅಮೂಲ್ಯ ಶಕ್ತಿಯಾಗಿ ರೂಪಿತವಾಗುದು...


📝ಕಾತಿ೯ಕ್ ಮಜಲ್ ಮಾರ್

Comments

Post a Comment

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32