ಅಲೆಮಾರಿ - ಅಕ್ಷತಾ ಆರ್ ಭಂಡಾರಿ

ಅಲೆಮಾರಿ


ಅಲೆ ಅಲೆಯುತ್ತಾ ಬದುಕುವ ನಿನಗೆ
ಎಲ್ಲರೂ ಹೇಳುವರು ಅಲೆಮಾರಿ.....
ನಿನ್ನ ನೋಡಿ ನಗುವವರಿಗೇನು ಗೊತ್ತು
ನಿನ್ನ ಜೀವನದಲ್ಲಿರುವ ಮಾರಿ
ನಿಮ್ಮ ಕುಟುಂಬದ ನಿರ್ವಹಣೆಗಾಗಿ ಅಲೆಯುವವರು ನೀವು
ನಮ್ಮ ಮನಸ್ಸಿನ ಚಂಚಲತೆಯಿಂದಾಗಿ ಅಲೆಯುವವರು ನಾವು.....
ಮನಸ್ಸಿನ ಅಲೆಮಾರಿತನಕ್ಕಿಂತ ನಿನ್ನ ಅಲೆಮಾರಿ ಜೀವನವೇ ಲೇಸು
ನಿನ್ನ ಅಲೆಮಾರಿ ಜೀವನದಲಿ ತುಂಬಿದೆ ನೂರಾರು ಕನಸು..... 
ಈ ಕನಸು ಮನಸುಗಳ ನಡುವೆ
ನಿನ್ನ ಜೀವನದ ಜಂಜಾಟಗಳೇ ಹೆಚ್ಚಿವೆ,
ಈ ಅಲೆಮಾರಿತನವೆಂಬ ರಣರಂಗದರಲ್ಲಿ ನಿನ್ನ ನಗುವೆಂಬುದು ಮರುಭೂಮಿಯ ಮರೀಚಿಕೆಯಾಗಿದೆ.....
ನೀ ಹುಡುಕುತ್ತಿರುವ ಪ್ರಶ್ನೆಗಳಿಗೆ ಉತ್ತರಗಳ ಸರಮಾಲೆ ಗೌಪ್ಯವಾಗಿ ಕುಳಿತಿದೆ ನಿನ್ನ ಬದುಕಿನ ನೈಜತ್ವ ಹುಡುಕುವ ದಾರಿ ಮರೆಯಾಗಿ ನಿಂತಲ್ಲೇ ನಿಂತಿದೆ.....


✍ಅಕ್ಷತಾ ಆರ್ ಭಂಡಾರಿ 

Comments

Post a Comment

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32