ಸದಾಶಿವ- ಸಂಚಿಕೆ- 8
ಸದಾಶಿವ
ಸಂಚಿಕೆ- 8
ರಾಯರ ಮುಖದಲ್ಲಿ ಚಿಂತೆ ಕಾಡಿತ್ತು , ಏಕೆಂದರೆ ರಾಯರ ತಾಯಿಗೆ ಕಲಿತ ಹೆಣ್ಣಿಗಿಂತ ಸಂಪ್ರದಾಯದ ಹುಡುಗಿ ಮನೆ ಸೊಸೆಯಾಗಿ ಬರಬೇಕೆಂಬ ಆಸೆ ಇತ್ತು. ಅದನ್ನು ಸರಸಿಯಲ್ಲಿ ಹೇಳಿದಾಗ, ಒಂದು ಗಳಿಗೆ ಮನ ಮುದುಡಿದರೂ ರಾಯರ ಪ್ರೀತಿ ಆ ನೋವನ್ನು ಮರೆಸಿತ್ತು .ಸರಸಿಗೆ ಬೇಸರವಾದುದನ್ನು ಅರಿತ ರಾಯರು ನೀನೇನೂ ಚಿಂತಿಸಬೇಡ ಸರಸಿ ನಿನಗೆ ಬೇಕಾದ ಶಿಕ್ಷಣವನ್ನು ಮನೆಯಲ್ಲೇ ಕುಳಿತು ಪೂರೈಸು, ನಾನು ನಿನಗೆ ಸಹಾಯ ಮಾಡುತ್ತೇನೆಂದಾಗ ಕಾರ್ಮೋಡ ಕವಿದಿದ್ದ ಮೊಗದಲ್ಲಿ ಬೆಳಕು ಚೆಲ್ಲಿದಂತೆ ನಗುವು ಮೂಡಿತು. ಮುಂದೇನು ಎಂದು ರಾಯರು ಕೇಳಿದಾಗ ಏನ್ನಿಲ್ಲವೆಂದು ರಾಯರ ಮುಖ ನೋಡಿದಳು, ಆ ನೋಟಕ್ಕೆ ರಾಯರೆದೆಯಲ್ಲಿ ಕೋಲ್ಮಿಂಚಿನ ಸಂಚಾರವಾದಂತಾಗಿ ಸರಸಿಯ ಕೈಯನ್ನು ಹಿಡಿದುಕೊಂಡು, ಹಣೆಗೊಂದು ಸಿಹಿಮುತ್ತುನ್ನಿಟ್ಟು ಮದುವೆ ದಿನದವರೆಗೂ ಈ ಮುತ್ತು ನೆನಪಿನಲ್ಲಿರಲಿ ಎಂದು ಹೇಳಿ ಕೋಣೆಯಿಂದ ಹೊರ ನಡೆದರು .
ಮುತ್ತಿನ ಮತ್ತಿನಲ್ಲಿದ್ದ ಸರಸಿಗೆ ರಾಯರ ಮೇಲಿನ ಪ್ರೇಮ ಇಮ್ಮಡಿ ಯಾಗಿತ್ತು .ಮನೆಯವರ ಜೊತೆ ಮಾತುಕತೆ ಮುಗಿಸಿ ಹೊರಟ ರಾಮರಾಯರು ಮತ್ತು ಮುತ್ತುಲಕ್ಷ್ಮಿಯವವರನ್ನ ಕಾರಿನ ತನಕ ಬಿಡಲು ಸರಸಿಯ ತಂದೆ ತಾಯಿ ಬಂದರು, ಆದರೆ ಸರಸಿ ಬರಲಿಲ್ಲ ,ಸರಸಿಯ ಬರುವಿಕೆಗೆ ಎದುರು ನೋಡುತ್ತಿದ್ದ ರಾಯರು ಮನೆಯ ಹೊರ ಬಾಗಿಲ ಬಳಿ ನಿಂತು
ಕೈಬೀಸಿದ್ದನ್ನ ಕಂಡು ಮುಗುಳ್ನಗೆ ನೀಡಿ ಹೊರಟರು.
ಪತ್ರದ ಮೂಲಕ ರಾಮರಾವ್ ಮತ್ತು ಸರಸಿಯ ಪ್ರೇಮ ಪಯಣ ಸಾಗಿತ್ತು.ಅಂಚೆಯವನ ಬರುವಿಕೆಯನ್ನು ಕಾಯುತ್ತಾ ಕುಳಿತಿರುತ್ತಿದ್ದ ಸರಸಿಗೆ ಆ ಪತ್ರಗಳೇ ಇನಿಯನ ಸಮೀಪವಿದ್ದ ಅನುಭವ ನೀಡಿತ್ತು..
ರಾತ್ರಿ ಬೇಗನೆ ಮಲಗುತ್ತಿದ್ದ ಸರಸಿ ಈಗ ಓದಿದ ಪತ್ರವನ್ನು ಮತ್ತೆ ಮತ್ತೆ ಓದಿ ಕನಸಿನ ಲೋಕದಲ್ಲಿ ಮುಳುಗಿ ತಡವಾಗಿ ಮಲಗುತ್ತಿದ್ದಳು. ಅಂತೂ ಇಂತೂ ಮದುವೆಯ ದಿನ ಬಂದೇ ಬಿಟ್ಟಿತ್ತು. ಸರಸಿಯ ಮತ್ತು ರಾಯರ ಮನೆ ತುಂಬ ನೆಂಟರು ,ಬಂಧು ಬಳಗದವರು ,ಪುಟಾಣಿ ಮಕ್ಕಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರು. ಹುಡುಗರು ಚೆಂದದ ಹುಡುಗಿಯರ ವೀಕ್ಷಣೆಯಲ್ಲಿ ನಿರತರಾಗಿದ್ದರೆ, ಹುಡುಗಿಯರು ಒಡವೆ, ವಸ್ತ್ರ ,ಅಂದ, ಚೆಂದದ ಮಾತಿನಲ್ಲಿ ಮುಳುಗಿದ್ದರು. ಹೆಂಗಳೆಯರು ಅಡುಗೆ ಮನೆಯಲ್ಲಿ ಅಡುಗೆ ತಯಾರಿಯಲ್ಲಿದ್ದರು. ಇನ್ನು ಕೆಲವರು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ತಮ್ಮದೇ ಮಾತುಕತೆಯಲ್ಲಿ ತೊಡಗಿದ್ದರು. ಅಂದು ಮೆಹೆಂದಿ ಮತ್ತು ಅರಿಶಿನ ಶಾಸ್ತ್ರ ಹುಡುಗ ಮತ್ತು ಹುಡುಗಿಯ ಕಡೆಯ ಮನೆಯಲ್ಲಿ ಗೌಜು ಗದ್ದಲ, ಮಾಂಸಾಹಾರಿ ಮತ್ತು ಸಸ್ಯಾಹಾರಿ ಭೋಜನ ಸಿದ್ಧವಾಗುತ್ತಿತ್ತು, ಅಡುಗೆಯ ಪರಿಮಳ ಎಲ್ಲರ ಮೂಗಿಗೆ ನಾಟುವಂತೆ ಬರುತ್ತಿತ್ತು. ಹೊಟ್ಟೆ ಕೂಡ ತಾಳ ಹಾಕುತ್ತಿತ್ತು, ಶಾಸ್ತ್ರದ ಕಾರ್ಯಕ್ರಮದಲ್ಲಿ ಸರಸಿಯು ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದಳು...ಬಿಳಿಸೀರೆಗೆ,ಚಿನ್ನದ ಅಂಚಿತ್ತು...ಮೊಗದಲ್ಲಿ ಮದುಮಗಳ ಕಳೆಯಿತ್ತು.ಕೃತಕ ಸೌಂದರ್ಯವರ್ಧಕಗಳಿಲ್ಲದೆಯೇ ಸರಸಿಯು ಅಪ್ರತಿಮ ಸುಂದರಿಯಂತೆ ಕಂಗೊಳಿಸುತ್ತಿದ್ದಳು. ಸ್ನೇಹಿತೆಯರು ತಮಾಷೆ ಮಾಡಿ ನಗಿಸುತ್ತಿದ್ದರು. ಇತ್ತ ರಾಯರ ಮನೆಯಲ್ಲಿ ಜನಸಾಗರವೇ ತುಂಬಿತ್ತು, ಗುತ್ತಿನ ಮನೆಯವರೆಂದ ಮೇಲೆ ಊರಿಗೆ ಹೇಳಲೇಬೇಕು, ಹಾಗಾಗಿ ಇಡೀ ಊರೆ ರಾಯರ ಮನೆಯಲ್ಲಿತ್ತು. ಬಂದ ಜನರನ್ನು ಸುಧಾರಿಸುವಲ್ಲಿ ರಾಯರ ಸ್ನೇಹಿತರು ಮುಂದಿದ್ದರು. ಶಾಸ್ತ್ರಕ್ಕೆಂದು ರಾಯರು ಬಿಳಿ ಪಂಚೆ ಮತ್ತು ಬಿಳಿ ಶರ್ಟನ್ನು ಹಾಕಿದ್ದರು, ಆ ಉಡುಪಿನಲ್ಲಿ ರಾಯರು ಮುದ್ದಾಗಿ ಕಾಣುತ್ತಿದ್ದರು. ಮುತ್ತುಲಕ್ಷ್ಮಿ ಮಗನ ಮದುವೆ ಎಂದು ತರುಣಿಯರಂತೆ ಉತ್ಸಾಹದಿಂದ ಓಡಾಡುತ್ತಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರಿನಿಂದ ಒಬ್ಬ ವ್ಯಕ್ತಿಯ ಆಗಮನವಾಯಿತು. ಎಲ್ಲರ ಚಿತ್ತ ಅತ್ತ ಕಡೆಗೆ ತಿರುಗಿತು.
ಮುಂದುವರಿಯುವುದು..
ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments
Post a Comment