ಸದಾಶಿವ - ಸಂಚಿಕೆ - 7
ಸದಾಶಿವ
ಸಂಚಿಕೆ - 7
ಕಾರಿನಲ್ಲಿ ರಾಮರಾಯರು ಮತ್ತು ಅವರ ತಾಯಿ
ಮುತ್ತುಲಕ್ಷ್ಮಿಯನ್ನು ಕಂಡ ವನಜ ಓಡಿ ಹೋಗಿ ಗೆಳತಿಯಲ್ಲಿ ನಿನ್ನ ರಾಜಕುಮಾರ ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಕೀಟಲೆ ಮಾಡಿ ನಗಿಸಿದಳು. ಮನೆಗೆ ಬಂದ ಅತಿಥಿಗಳನ್ನು ಸ್ವತಃ ಕೃಷ್ಣಪ್ಪ ಮತ್ತು ಲಕ್ಷ್ಮಮ್ಮ ದಂಪತಿಗಳು ಎದುರುಗೊಂಡು ಸ್ವಾಗತಿಸಿದರು. ಮನೆಯೊಳಗೆ ಬಂದ ರಾಮರಾಯರು ಮತ್ತು ಅವರ ತಾಯಿಯನ್ನು ಕುಳಿತುಕೊಳ್ಳಲು ಹೇಳಿ ಮಗಳನ್ನು ಕರೆದುಕೊಂಡು ಬಾ ಎಂದು ಹೆಂಡತಿಗೆ ಹೇಳಿದರು. ಕೋಣೆಯೊಳಗೆ ನಾಚಿಕೆಯಿಂದ ನಿಂತಿದ್ದ ಸರಸಿಯ ಕೈಯಲ್ಲಿ ಶರಬತ್ತಿನ ಲೋಟವನ್ನು ಕೊಟ್ಟು ಹೊರ ಕುಳಿತಿರುವವರಿಗೆ ನೀಡಲು ಹೇಳಿದರು.ಲಜ್ಜೆಯಿಂದ ತಲೆ ತಗ್ಗಿಸಿಕೊಂಡು ಬಂದ ಸರಸು ಮೊದಲು ರಾಮರಾಯರ ತಾಯಿಗೆ ಶರಬತ್ತನ್ನು ನೀಡಿದಳು, ಸೊಸೆಯಾಗುವ ಹುಡುಗಿ, ನನ್ನ ಮಗನ ಮನವನ್ನು ಸೆಳೆದಾಕೆ ಹೇಗಿರಬಹುದೆಂಬ ಕುತೂಹಲದಿಂದ ಬಂದ ಮುತ್ತುಲಕ್ಷ್ಮಿಗೆ ಸರಸಿಯನ್ನು ನೋಡಿ ಬಲು ಸಂತಸವಾಯಿತು. ಸೌಂದರ್ಯದ ಪ್ರತಿರೂಪದಂತಿದ್ದ ಸೊಸೆಯನ್ನು ನೋಡಿ ಮಗನ ಆಯ್ಕೆಗೆ ಮನದಲ್ಲೇ ಸಂತಸ ವ್ಯಕ್ತಪಡಿಸಿದರು.ರಾಮ ರಾಯರಿಗೆ ಶರಬತ್ತನ್ನು ನಿಲ್ಲುವಾಗ
ಸರಸಿಯ ಕೈಗಳು ನಡುಗುತ್ತಿದ್ದವು, ರಾಯರ ನೇರ ನೋಟವನ್ನು ಎದುರಿಸಲಾಗದೆ ಬಾಗಿದ ತಲೆಯನ್ನು ಎತ್ತುವುದಕ್ಕೇ ಸಾಹಸ ಪಡುವಂತಾಯಿತು.
ಒಳ ಹೋದ ಸರಸಿಯನ್ನೇ ನೋಡುತ್ತಿದ್ದ ರಾಮರಾಯರನ್ನ ಕೃಷ್ಣಪ್ಪನವರ ಸ್ವರ ಎಚ್ಚರಿಸಿತ್ತು .ನಿಮಗೆ ನಮ್ಮ ಹುಡುಗಿ ಒಪ್ಪಿಗೆಯೆ ಎಂದು ಮುತ್ತುಲಕ್ಷ್ಮೀಯಲ್ಲಿ ಕೇಳಿದಾಗ ಮನಪೂರ್ವಕವಾಗಿ ಒಪ್ಪಿಗೆ ಎಂದು ಮೆಚ್ಚುಗೆಯಾದುದನ್ನು ಹೇಳಿದರು ಮುಂದಿನ ತಿಂಗಳ ದೀಪಾವಳಿ ಹಬ್ಬದಂದು ವಿವಾಹ ಕಾರ್ಯಕ್ರಮವನ್ನು, ನಿಶ್ಚಿತಾರ್ಥ ಶಾಸ್ತ್ರ ಕೂಡ ಅಂದೇ ಮಾಡೋಣ ಎಂದು ಹಿರಿಯರು ಮಾತಿನನಲ್ಲಿ ತೊಡಗಿದರು.ಒಳಹೋದ ಸರಸಿ ಹೊರ ಬಾರದೇ ಇರುವುದನ್ನು ಕಂಡ ರಾಯರಿಗೆ ಕುಳಿತಲ್ಲೇ ಚಡಪಡಿಕೆ ಶುರುವಾಯಿತು.ಆದರೆ ನೇರವಾಗಿ ತಾಯಿಯ ಬಳಿ ಅದನ್ನು ಹೇಳಿದರೆ ಸರಸಿಯ ತಂದೆ ಏನೆಂದು ಕೊಳ್ಳುವರು ಎಂದುಕೊಂಡು ಸುಮ್ಮನಿದ್ದರು.ರಾಯರ ಮನದಿಂಗಿತವನ್ನು ಅರ್ಥ ಮಾಡಿಕೊಂಡವರಂತೆ ಸರಸಿಯ ತಂದೆ ,ಮಗಳು ಕೋಣೆಯಲ್ಲಿ ದ್ದಾಳೆ ಏನಾದರೂ ಮಾತನಾಡುವುದಿದ್ದರೆ ಮಾತನಾಡಬಹುದು ಎಂದು ಒಪ್ಪಿಗೆಯನ್ನು ಸೂಚಿಸಿದಾಗ, ರಾಯರು ತಾಯಿಯ ಮುಖವನ್ನು ನೋಡಿದರು ಆಕೆ ಕಣ್ಣಲ್ಲೇ ಸಮ್ಮತಿಯನ್ನು ಸೂಚಿಸಿದಾಗ ಸಂತಸದಿಂದ ಸರಸಿಯ ಕೋಣೆಯತ್ತ ತೆರಳಿದರು ಅಲ್ಲಿ ವನಜಳೊಂದಿಗೆ ನಿಂತಿದ್ದ ಸರಸಿಯನ್ನು ಕಂಡು ಕೋಣೆಗೆ ಹೋಗುವುದೋ ಬೇಡವೋ ಎನ್ನುವಂತೆ ನಿಂತರು ,ಇದನ್ನರಿತ ವನಜ ಕೋಣೆಯಿಂದ ಹೊರ ನಡೆದಳು. ರಾಯರು ಕಿಟಕಿಗೆ ಮುಖ ಮಾಡಿ ನಿಂತಿದ್ದ ಸರಸಿಯ ಸನಿಹ ಬಂದು 'ಸರಸಿ' ಎಂದು ಕಿವಿಯಲ್ಲುಸಿರಿದಾಗ ರಾಯರ ಬಿಸಿಯುಸಿರು ಕೆನ್ನೆಗೆ ಸೋಕಿ ಸರಸಿಯ ಕೆನ್ನೆಗಳು ಕೆಂಪಾದವು. ರಾಯರನ್ನು ನೇರವಾಗಿ ನೋಡಲು ಕಣ್ಣುಗಳು ಮುಷ್ಕರ ಹೂಡಿದ್ದವು.ತಿಳಿ ನೀಲಿ ಸೀರೆಯಲ್ಲಿ ಮದುಮಗಳಂತೆ ಕಾಣುತ್ತಿದ್ದ ಸರಸಿಯನ್ನು ಎತ್ತಿ ಮುದ್ದಾಡಿ ಬೇಕೆಂಬ ಬಯಕೆಯನ್ನು ಹತೋಟಿಗೆ ತಂದುಕೊಂಡು, ಸರಸಿಯಲ್ಲಿ ನಿನಗೆ ನಾನು ಒಪ್ಪಿಗೆಯಾ ಎಂದು ಕೇಳಿದಾಗ ,ಹೌದೆಂದು ತಲೆಯಲ್ಲಾಡಿಸಿದಳು.
ನಿನಗೆ ಏನಾದರೂ ಹೇಳಲಿದೆಯಾ ಎಂದು ಕೇಳಿದಾಗ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದ್ದ ಸರಸಿಗೆ ಮುಂದೆ ಕಲಿಯುವ ಇಚ್ಛೆ ಇದ್ದರೂ, ಮನೆಯವರು ಬೇಡವೆಂದ ಕಾರಣ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಳು.. ಇದರಿಂದ ಬೇಸರಗೊಂಡಿದ್ದ ಸರಸಿ ರಾಯರಲ್ಲಿ ನನ್ನನ್ನು ಓದಿಸುವಿರಾ ಎಂದು ಕೇಳಿದಾಗ ರಾಯರ ಮುಖದಲ್ಲಿ..
ಮುಂದುವರಿಯುವುದು ..
ನಾಗಶ್ರೀ.ಎಸ್.ಭಂಡಾರಿ
ಮೂಡುಬಿದಿರೆ

Comments
Post a Comment